ETV Bharat / state

ಪುನೀತ್ ಸಮಾಧಿ ಸ್ಥಳದಲ್ಲೇ ಮದುವೆಗೆ ಪಟ್ಟು ಹಿಡಿದ ಬಳ್ಳಾರಿಯ ಜೋಡಿ

ಬಳ್ಳಾರಿ ಮೂಲದ ಪ್ರೇಮಿಗಳಿಬ್ಬರು ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಸಮಾಧಿ ಬಳಿಯೇ ವಿವಾಹವಾಗಬೇಕೆಂದು ಪಟ್ಟು ಹಿಡಿದರು.

lovers wants to get marriage in front of puneeth rajkumar grave
ಪುನೀತ್ ಸಮಾಧಿ ಸ್ಥಳದಲ್ಲೇ ಮದುವೆಗೆ ಪಟ್ಟು ಹಿಡಿದ ಜೋಡಿಪುನೀತ್ ಸಮಾಧಿ ಸ್ಥಳದಲ್ಲೇ ಮದುವೆಗೆ ಪಟ್ಟು ಹಿಡಿದ ಜೋಡಿ
author img

By

Published : Nov 6, 2021, 3:43 PM IST

ಬೆಂಗಳೂರು: ಸ್ಯಾಂಡಲ್​ವುಡ್​ನ ಹೆಸರಾಂತ ನಟ ಪುನೀತ್ ರಾಜ್‌ಕುಮಾರ್ ಸಾವನ್ನಪ್ಪಿ 9 ದಿನ ಕಳೆದಿವೆ. ಕಂಠೀರವ ಸ್ಟುಡಿಯೋದಲ್ಲಿ ಹಾಲು,ತುಪ್ಪ ಕಾರ್ಯಕ್ರಮ ಮುಗಿದು 5 ದಿನವಾಯಿತು. ಆದರೆ ಜನಜಂಗುಳಿ ತಗ್ಗುವ ಸೂಚನೆ ಕಂಡುಬರುತ್ತಿಲ್ಲ. ಮಳೆ, ಚಳಿ ಲೆಕ್ಕಿಸದೆ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ.

ಅಪ್ಪು ಸಮಾಧಿ ಬಳಿ ವಿವಾಹವಾಗಲು ಬಂದ ಪ್ರೇಮಿಗಳು

ಈ ನಡುವೆ ಶನಿವಾರ ಪುನೀತ್ ಸಮಾಧಿ ಸ್ಥಳದಲ್ಲೇ ಮದುವೆಯಾಗಬೇಕು ಬಳ್ಳಾರಿಯಿಂದ ಗಂಗಾ ಮತ್ತು ಗುರು ಪ್ರಸಾದ್ ಎಂಬ ಪ್ರೇಮಿಗಳು ಬಂದಿದ್ದರು. 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಈ ಜೋಡಿ, ಅಪ್ಪು ಸಮಾಧಿ ಸ್ಥಳದಲ್ಲೇ ಮದುವೆಯಾಗುವುದಾಗಿ ಪೊಲೀಸರೆದುರು ಪಟ್ಟು ಹಿಡಿದರು. ರಾಘಣ್ಣ, ಶಿವಣ್ಣ ಸಹ ಮದುವೆಗೆ ಒಪ್ಪಿಗೆ ಕೊಟ್ಟಿದ್ದಾರೆ ಎಂದು ಈ ಜೋಡಿ ಹೇಳಿದರು.

'ತಾಳಿ ಸಮೇತ ಸಮಾಧಿ ಬಳಿ ಬಂದಿದ್ದೇವೆ. ಅಪ್ಪು ಎನ್ನುವ ಮೇರು ವ್ಯಕ್ತಿಯ ಸಮಾಧಿ ಸ್ಥಳದಲ್ಲೇ ನವ ಜೀವನಕ್ಕೆ ಕಾಲಿಡಲಿಡುತ್ತೇವೆ. ಪುನೀತ್ ರಾಜ್​​ಕುಮಾರ್ ಎಂದರೆ ಇಬ್ಬರಿಗೂ ತುಂಬಾ ಇಷ್ಟ' ಎಂದು ಮಾಧ್ಯಮಗಳಿಗೆ ತಿಳಿಸಿದರು.

'ನಮ್ಮ ಕುಟಬಸ್ಥರಿಂದ ಯಾವುದೇ ಅಡ್ಡಿಯಿಲ್ಲ, ಇಬ್ಬರೂ ಕುಟುಂಬದವರ ಒಪ್ಪಿಗೆ ಪಡೆದಿದ್ದೇವೆ' ಎಂದರು. ಆದರೆ ಸ್ಥಳದಲ್ಲಿರುವ ಪೊಲೀಸರು ಮದುವೆಗೆ ಸ್ಪಷ್ಟವಾಗಿ ನಿರಾಕರಿಸಿದರು. ಕಾಡಿ, ಬೇಡಿದರೂ ಪೊಲೀಸರು ಒಪ್ಪಲಿಲ್ಲ. ಬೇಸತ್ತು ಕೊನೆಗೆ ಈ ಪ್ರೇಮಿಗಳು ತಮ್ಮ ಊರಿನ ದಾರಿ ಹಿಡಿದರು.

ಇದನ್ನೂ ಓದಿ:ಸವದತ್ತಿಯ ರೇಣುಕಾದೇವಿ ದರ್ಶನ ಪಡೆದ ಸಿಎಂ ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.