ಬೆಂಗಳೂರು : ಪತಿಯಿಂದ ದೂರವಾಗಿ ತನ್ನೊಂದಿಗೆ ನೆಲೆಸಿದ್ದ ಪ್ರಿಯತಮೆ ಮೇಲೆ ಮಾಜಿ ಪ್ರೀಯಕರ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದೊಡ್ಡಬೊಮ್ಮಸಂದ್ರದ ಪ್ರಿಯಾಂಕಾ ಕೊಲೆಯಾದ ಮಹಿಳೆ. ವಿದ್ಯಾರಣ್ಯಪುರದ ಜಗದೀಶ್ ಕೊಲೆ ಮಾಡಿರುವ ಆರೋಪಿ. ಈಗಾಗಲೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಿಯಾಂಕಾಗೆ ಈಗಾಗಲೇ ಮದುವೆಯಾಗಿದ್ದು, ಪತಿ ಜೊತೆ ಮನಸ್ತಾಪ ಉಂಟಾಗಿ ಆತನನ್ನು ತೊರೆದು ಬಂದಿದ್ದರು. ಈ ವೇಳೆ ಮೊದಲೇ ಪರಿಚಯವಿದ್ದ ಆರೋಪಿ ಜಗದೀಶ್ನೊಂದಿಗೆ ದೊಡ್ಡಬೊಮ್ಮಸಂದ್ರದಲ್ಲಿ ಪ್ರಿಯಾಂಕಾ ನೆಲೆಸಿದ್ದರು. ಹೀಗಿರುವಾಗ ಯಾವುದೋ ವಿಚಾರವಾಗಿ ಪ್ರಿಯಾಂಕಾ ಹಾಗೂ ಜಗದೀಶ್ ನಡುವೆ ಜಗಳವಾಗಿದೆ.
ಆರೋಪಿ ಜಗದೀಶ್ ಪ್ರಿಯಾಂಕಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಕ್ಷಣವೇ ತೀವ್ರವಾಗಿ ಗಾಯಗೊಂಡಿದ್ದ ಪ್ರಿಯಾಂಕಾಳನ್ನು ನಗರದ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆರೋಪಿ ಜಗದೀಶ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿದ್ಯಾರಣ್ಯಪುರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.