ETV Bharat / state

ಹೊಸಕೋಟೆ: ಆನಂದ್ ದಮ್ ಬಿರಿಯಾನಿ ಸವಿಯಲು ಮುಗಿಬಿದ್ದ ಜನ - dhum biriyani latest news

ಹೊಸಕೋಟೆ ಹೆದ್ದಾರಿ ಬದಿಯಲ್ಲಿರೋ ಆನಂದ್ ದಮ್ ಬಿರಿಯಾನಿ ಸವಿಯಲು ಬಿರಿಯಾನಿ ಸೆಂಟರ್​​ ಎದುರು ಜನ ಮುಗಿಬೀಳುತ್ತಿದ್ದಾರೆ.

lot of people coming to hosakote to taste anand dhum biriyani
ಆನಂದ್ ದಮ್ ಬಿರಿಯಾನಿ ಸವಿಯಲು ಮುಗಿಬಿದ್ದ ಜನ
author img

By

Published : Oct 15, 2020, 1:27 PM IST

ಹೊಸಕೋಟೆ: ಮುಂಜಾನೆ ಬೇಗ ಏಳೋದು ಅಂದ್ರೆ ಹೆಚ್ಚಿನ ಜನರಿಗೆ ಆಲಸ್ಯದ ವಿಷಯ. ಆದ್ರೆ ಸಂಡೇ ಬಂತೆಂದರೆ ಈ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಜನ ಕಿ.ಮೀ.ಗಟ್ಟಲೆ ಕಾದು ನಿಲ್ತಾರೆ. ಯಾಕೆ ಅಂತೀರಾ? ಬಿಸಿ ಬಿಸಿ ದಮ್ ಬಿರಿಯಾನಿ ಸವಿಯೋಕೆ ಇಲ್ಲಿ ಜನ ಮುಗಿಬೀಳ್ತಾರೆ.

ಹೊಸಕೋಟೆ ಹೆದ್ದಾರಿ ಬದಿಯಲ್ಲಿರೋ ಆನಂದ್ ದಮ್ ಬಿರಿಯಾನಿ ಸವಿಯಲು ಯುವಕ-ಯುವತಿಯರು ಮುಂಜಾನೆ 5 ಗಂಟೆಗೆ ಬರ್ತಾರೆ. 2 ಕಿ.ಮೀ.ಗೂ ಅಧಿಕ ದೂರ ಸರತಿ ಸಾಲಿನಲ್ಲಿ ನಿಂತು ಬಿರಿಯಾನಿ ಸವಿಯಲು ಮುಗಿಬಿಳೋದೇ ಇಲ್ಲಿನ ವಿಶೇಷ. ಟೀ-ಕಾಫಿ ಅಂಗಡಿಗಳು ತೆಗೆಯುವುದಕ್ಕೂ ಮುನ್ನ ದಮ್ ಬಿರಿಯಾನಿ ಅಂಗಡಿಗಳು ಇಲ್ಲಿ ತೆರೆಯುತ್ತವೆ. ವೀಕೆಂಡ್ ಮೂಡ್​​​ನಲ್ಲಿ ನಂದಿ ಹಿಲ್ಸ್ ಸೇರಿದಂತೆ ಪ್ರವಾಸಿ ತಾಣಗಳಿಗೆ ಲಾಂಗ್ ಡ್ರೈವ್ ಬರೋ ಯುವಕ-ಯುವತಿಯರು ನಂದಿ ಹಿಲ್ಸ್​​​ನಲ್ಲಿ ಸನ್ ​​ರೈಸ್ ನೋಡಿಕೊಂಡು ನಂತರ ಹೊಸಕೋಟೆಗೆ ಬಂದು ಬಿರಿಯಾನಿ ಸವಿಯುತ್ತಾರೆ.

ಆನಂದ್ ದಮ್ ಬಿರಿಯಾನಿ ಸವಿಯಲು ಮುಗಿಬಿದ್ದ ಜನ

ಲಾಕ್​​ಡೌನ್​ಗೂ ಮುನ್ನ ಸಾಕಷ್ಟು ಪ್ರಸಿದ್ಧಿಯಾಗಿದ್ದ ಹೊಸಕೋಟೆ ಬಿರಿಯಾನಿ, ಲಾಕ್​ಡೌನ್ ಆದ ಕಾರಣ ಕಳೆದ ಮೂರ್ನಾಲ್ಕು ತಿಂಗಳುಗಳ ಕಾಲ ಬಂದ್​​ ಆಗಿತ್ತು. ಹೀಗಾಗಿ ಬೆಳ್ಳಂಬೆಳಗ್ಗೆ ಬಿಸಿ ಬಿಸಿ ಬಿರಿಯಾನಿ ಸವಿಯುವುದನ್ನು ಮಿಸ್ ಮಾಡಿಕೊಂಡಿದ್ದ ಬಿರಿಯಾನಿ ಪ್ರಿಯರು ಬಿರಿಯಾನಿ ಸೆಂಟರ್ ಒಪನ್​​ಗಾಗಿ ಕಾದು ಕುಳಿತಿದ್ರು. ಅದೇ ರೀತಿ ಕಳೆದ ಎರಡು ವಾರದಿಂದ ಬಿರಿಯಾನಿ ಸೆಂಟರ್​​ ಒಪನ್ ಆಗಿದ್ದು, ಇದೀಗ ಗುಂಪು ಗುಂಪಾಗಿ ಸಾವಿರಾರು ಮಂದಿ ಬಿರಿಯಾನಿ ಸವಿಯಲು ಆಗಮಿಸುತ್ತಿದ್ದಾರೆ. ಹೆದ್ದಾರಿ ಬದಿಯಲ್ಲಿ ಹೆಚ್ಚಿನ ಜನರು ಜಮಾವಣೆಯಾಗುತ್ತಿದ್ದು, ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಬಿರಿಯಾನಿ ಸವಿಯಲು ಮುಂದಾಗ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.