ETV Bharat / state

ಗಣೇಶನ ವಿರ್ಸಜನೆ.. ಕೊನೆ ಹಂತದ ಸಿದ್ಧತೆಯ ಪರಿಶೀಲನೆ ನಡೆಸಿದ ಮೇಯರ್ ಗಂಗಾಂಬಿಕೆ.. ‌ - Gowri ganesh a festival

ಗಣೇಶ ವಿರ್ಸಜನೆ ಹಿನ್ನೆಲೆ ಬೆಂಗಳೂರಿನ ಕೆರೆಗಳಲ್ಲಿ ಪ್ರತ್ಯೇಕವಾಗಿ ಗಣೇಶ ವಿಸರ್ಜನಾ ಕಲ್ಯಾಣಿಗಳನ್ನ ನಿರ್ಮಿಸಲಾಗಿದ್ದು, ಗಣೇಶ ಮೂರ್ತಿ ವಿಸರ್ಜನೆಗೆ ಬೇಕಾದ ಸಕಲ ಸಿದ್ಧತೆಗಳನ್ನೂ ಪಾಲಿಕೆ ಮಾಡಿಕೊಂಡಿದೆ. ನಗರದಲ್ಲಿ ಒಟ್ಟು 37 ಬಿಬಿಎಂಪಿ ಕಲ್ಯಾಣಿಗಳು ಹಾಗೂ 400 ಕ್ಕೂ ಹೆಚ್ಚು ಮೊಬೈಲ್ ಟ್ಯಾಂಕರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಗಣೇಶನ ವಿರ್ಸಜನೆ; ಕೊನೆ ಹಂತ ಸಿದ್ಧತೆಯ ಪರಿಶೀಲನೆ ನಡೆಸಿದ ಮೇಯರ್ ಗಂಗಾಂಭಿಕೆ.. ‌
author img

By

Published : Sep 1, 2019, 7:02 PM IST

ಬೆಂಗಳೂರು: ಗಣೇಶನ ಹಬ್ಬಕ್ಕೆ ಇನ್ನೇನು ಒಂದೇ ದಿನ ಬಾಕಿ ಇದೆ. ಹಬ್ಬದ ನಂತರ ಗಣೇಶನ ವಿರ್ಸಜನೆಗೆ ಅವಕಾಶ ಮಾಡಿಕೊಡಬೇಕು ಅಲ್ವಾ..‌ ಇದಕ್ಕಾಗಿಯೇ ಗಣೇಶನ ವಿಸರ್ಜನೆಗೆ ಬಿಬಿಎಂಪಿ ಕೂಡ ಸಕಲ ತಯಾರಿಗಳನ್ನ ನಡೆಸಿದ್ದು, ಕಲ್ಯಾಣಿ ಹಾಗೂ ಕೆರೆಗಳಲ್ಲಿನ ವ್ಯವಸ್ಥೆಯನ್ನ ವೀಕ್ಷಿಸಲು ಇಂದು ಮೇಯರ್ ಬೆಂಗಳೂರು ರೌಂಡ್ಸ್ ಹಾಕಿದರು.

ಗಣೇಶನ ವಿರ್ಸಜನೆ; ಕೊನೆ ಹಂತ ಸಿದ್ಧತೆಯ ಪರಿಶೀಲನೆ ನಡೆಸಿದ ಮೇಯರ್ ಗಂಗಾಂಬಿಕೆ.. ‌

ನಾಳೆ ಗೌರಿಸುತ ಗಣೇಶನ ಹಬ್ಬ. ವಿಘ್ನೇಶನ ಪೂಜೆ ಮಾಡಿ ಕೆಲವೆಡೆ ಸಂಜೆಯೇ ಗಣಪತಿಯನ್ನ ವಿಸರ್ಜಿಸುವುದು ವಾಡಿಕೆಯಾದರೆ ಇನ್ನೂ ಕೆಲವೆಡೆ ವಾರ, ತಿಂಗಳುಗಟ್ಟಲೇ ಗಣಪತಿಯನ್ನ ಇರಿಸಿ ನಂತರ ವಿಸರ್ಜಿಸುತ್ತಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆರೆಗಳಲ್ಲಿ ಪ್ರತ್ಯೇಕವಾಗಿ ಗಣೇಶ ವಿಸರ್ಜನಾ ಕಲ್ಯಾಣಿಗಳನ್ನ ನಿರ್ಮಿಸಲಾಗಿದ್ದು, ಗಣೇಶ ಮೂರ್ತಿ ವಿಸರ್ಜನೆಗೆ ಬೇಕಾದ ಸಕಲ ಸಿದ್ಧತೆಗಳನ್ನೂ ಪಾಲಿಕೆ ಮಾಡಿಕೊಂಡಿದೆ. ನಗರದಲ್ಲಿ ಒಟ್ಟು 37 ಬಿಬಿಎಂಪಿ ಕಲ್ಯಾಣಿಗಳು ಹಾಗೂ 400ಕ್ಕೂ ಹೆಚ್ಚು ಮೊಬೈಲ್ ಟ್ಯಾಂಕರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಯಾವ್ಯಾವ ಕೆರೆಯಲ್ಲಿ ಗಣೇಶನನ್ನ ವಿಸರ್ಜಿಸಬಹುದು ಗೊತ್ತಾ?

* ಯಡಿಯೂರು ಕೆರೆ
* ಸ್ಯಾಂಕಿ ಟ್ಯಾಂಕ್
* ಹಲಸೂರು ಕೆರೆ
* ಉತ್ತರಹಳ್ಳಿಯ ದೊರೆಕೆರೆ
* ಮಲ್ಲತ್ತಳ್ಳಿ ಕೆರೆ
* ಸಿಂಗಸಂದ್ರ ಕೆರೆ
* ಮಾರತ್ತಳ್ಳಿಯ ಮುನ್ನೇಕೊಳಲು ಕೆರೆ
* ದೇವರಬಿಸನಹಳ್ಳಿ ಕೆರೆ
* ಕೋಗಿಲು ಕೆರೆ
* ದೊಡ್ಡಕನ್ನೇನಹಳ್ಳಿ ಕೆರೆ
* ಕಸವನಹಳ್ಳಿ ಕೆರೆ
* ಕೈಕೊಂಡರಳ್ಳಿ ಕೆರೆ
* ಜಕ್ಕೂರು ಸಂಪಿಗೆಹಳ್ಳಿ ಕೆರೆ ಇತ್ಯಾದಿ.

ಗಣೇಶ ಮೂರ್ತಿಯ ವಿಸರ್ಜನೆಗೆ ಮೊಬೈಲ್ ಟ್ಯಾಂಕರ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಈಗಾಗಲೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಎಲ್ಲೆಲ್ಲಿ ಟ್ಯಾಂಕರ್‌ಗಳನ್ನ ನಿಲ್ಲಿಸಲಾಗುತ್ತೆ ಎಂಬುದರ ಮಾಹಿತಿಯನ್ನೂ ನೀಡಿದೆ. ಜಯನಗರ 4ನೇ ಬ್ಲಾಕ್ ಪೊಲೀಸ್ ಠಾಣೆ ಎದುರು, ಹನುಮಂತನಗರ ಪೊಲೀಸ್ ಠಾಣೆ, ಬಸವೇಶ್ವರನಗರದ ಪವಿತ್ರ ಪ್ಯಾರೆಡೈಸ್, ವಿಜಯನಗರ ಬಸ್ ನಿಲ್ದಾಣ, ಮಾಗಡಿ ರಸ್ತೆಯ ಶನಿ ಮಹಾತ್ಮ ದೇವಾಲಯ, ಮಂಜುನಾಥನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಮಲ್ಲೇಶ್ವರ ಪೊಲೀಸ್ ಠಾಣೆ ಮುಂದೆ, ಯಶವಂತಪುರ ಪೊಲೀಸ್ ಠಾಣೆ ಮತ್ತು ‌ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ದೇವಾಲಯ, ಹೆಚ್.ಎಸ್.ಆರ್ ಲೇಔಟ್‌ನ ಬಿಡಿಎ ಕಾಂಪ್ಲೆಕ್ಸ್, ಹಲಸೂರು ಪೊಲೀಸ್ ಠಾಣೆ ಎದುರು ಹಾಗೂ ದಾಸರಳ್ಳಿ ಬಿಬಿಎಂಪಿ ಕಚೇರಿ, ಮಲ್ಲಸಂದ್ರ ಸರ್ಕಾರಿ ಶಾಲೆ, ಹೆಗ್ಗನಹಳ್ಳಿ ಇಂದಿರಾ ಕ್ಯಾಂಟೀನ್,‌ಯಲಹಂಕ ನ್ಯೂ ಟೌನ್, ಶಿವ ಮಂದಿರ, ಸಹಕಾರ ನಗರದ ಗಣೇಶ ಮಂದಿರ, ರಾಜರಾಜೇಶ್ವರಿನಗರದ ಬಾಲಣ್ಣ ರಂಗ ಮಂದಿರ ಸೇರಿದಂತೆ ಹಲವೆಡೆ ವ್ಯವಸ್ಥೆ ಮಾಡಲಾಗಿದೆ.

ಈ ಎಲ್ಲಾ ಜಾಗಗಳಲ್ಲೂ ಮೊಬೈಲ್ ವಾಹನ ನಾಳೆ ಸಂಜೆ 6 ಗಂಟೆಯಿಂದ ರಾತ್ರಿ 7.30ರವರೆಗೂ ಇರಲಿದೆ. ಹೀಗಾಗಿ ಸಾರ್ವಜನಿಕರು ಗಣಪತಿ ವಿಸರ್ಜಿಸಲು ಕೆರೆಗಳಿಗೆ ಹೋಗುವ ಬದಲು ಈ ವಿಸರ್ಜನಾ ವಾಹನಗಳ ಸದುಪಯೋಗ ಪಡಿಸಿಕೊಳ್ಳಬಹುದು. ಎಲ್ಲಾ ಕಲ್ಯಾಣಿಗಳಲ್ಲೂ ಲೈಟ್ ಹಾಗೂ ಸಿಸಿ ಕ್ಯಾಮೆರಾಗಳನ್ನ ಅಳವಡಿಸಲಾಗಿದ್ದು, ಈಗಾಗಲೇ ಪಾಲಿಕೆ ವ್ಯಾಪ್ತಿಯ ವಿಸರ್ಜನಾ ಸ್ಥಳಕ್ಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಭೇಟಿ ನೀಡಿ ಪರಿಶೀಲಿಸಿದ್ರು. ಈ ವೇಳೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಹಾಗೂ ಪಾಲಿಕೆ ಅಧಿಕಾರಿಗಳು ಸಾಥ್​ ನೀಡಿದರು.

ಪರಿಶೀಲನೆ ವೇಳೆ ಮಾಹಿತಿ ನೀಡಿದ ಮೇಯರ್:

ಪಾಲಿಕೆ ಪ್ರತಿವರ್ಷದಂತೆ ಈ ಬಾರಿಯೂ ಗಣೇಶ ವಿಸರ್ಜನೆಗೆ ಸಿದ್ಧವಾಗಿದೆ. ದೊಡ್ಡ ಗಣಪತಿಗಳನ್ನ ಕ್ರೇನ್ ಮೂಲಕ ವಿಸರ್ಜನೆ ಮಾಡಲಾಗುವುದು. ಎರಡು ಕ್ರೇನ್ ಮೂಲಕ ವಿಸರ್ಜನೆಗೆ ಅವಕಾಶವಿದ್ದು, 1 ಲಕ್ಷಕ್ಕೂ ಹೆಚ್ಚಿನ ಗಣೇಶ ಮೂರ್ತಿಗಳ ವಿಸರ್ಜನೆ ಆಗಲಿದೆ. ಪಿಓಪಿ ಗಣೇಶಗಳನ್ನ ಇಲ್ಲಿ ವಿಸರ್ಜನೆ ಮಾಡೋದಕ್ಕೆ ಅವಕಾಶ ಇರೋದಿಲ್ಲ. ಪಿಒಪಿ ಗಣಪಗಳ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದ್ದು, ಅವುಗಳ ಸಂಖ್ಯೆಯೂ ಕಡಿಮೆಯಾಗಿದೆ ಅಂತಾ ತಿಳಿಸಿದರು.‌

ಅಂತೂ ಗಣೇಶನ ಹಬ್ಬಕ್ಕೆ ಬೆಂಗಳೂರಿಗರು ಉತ್ಸಾಹದಿಂದ ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಬಿಎಂಪಿ ಕೂಡಾ ಗಣೇಶ ವಿಸರ್ಜನೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದೆ. ನೀವೂ ಜೇಡಿಮಣ್ಣಿನ ಗಣೇಶ ತಂದು ಪೂಜಿಸಿ, ಪರಿಸರಕ್ಕೆ ಮಾರಕವಾಗುವ ಪಿಒಪಿಯನ್ನ ತ್ಯಜಿಸಬೇಕು ಎನ್ನುವುದು ನಮ್ಮ ಆಶಯ.‌

Intro:ಗಣೇಶನ ವಿರ್ಸಜನೆ; ಕೊನೆ ಹಂತ ಸಿದ್ಧತೆಯ ಪರಿಶೀಲನೆ ನಡೆಸಿದ ಮೇಯರ್ ಗಂಗಾಂಭಿಕೆ.. ‌

ಬೆಂಗಳೂರು: ಗಣೇಶನ ಹಬ್ಬಕ್ಕೆ ಇನ್ನೇನು ಒಂದೇ ದಿನ ಬಾಕಿ ಇದೆ. ಹಬ್ಬದ ನಂತರ ಗಣೇಶನ ವಿರ್ಸಜನೆಗೆ ಅವಕಾಶ ಮಾಡಿಕೊಡಬೇಕು ಅಲ್ವಾ..‌ ಇದಕ್ಕಾಗಿಯೇ ಗಣೇಶನ ವಿಸರ್ಜನೆಗೆ ಬಿಬಿಎಂಪಿ ಕೂಡ ಸಕಲ ತಯಾರಿಗಳನ್ನ ನಡೆಸಿದ್ದು, ಕಲ್ಯಾಣಿ ಹಾಗೂ ಕೆರೆಗಳಲ್ಲಿನ ವ್ಯವಸ್ಥೆಯನ್ನ ವೀಕ್ಷಿಸಲು ಇಂದು ಮೇಯರ್ ಬೆಂಗಳೂರು ರೌಂಡ್ಸ್ ಹಾಕಿದರು..‌.

ನಾಳೆ ಗೌರಿಸುತ ಗಣೇಶನ ಹಬ್ಬ. ಬೆಳಗ್ಗೆನಿಂದ ವಿಘ್ನೇಶನ ಪೂಜೆ ಮಾಡಿ ಸಂಜೆ ನಂತರ ಗಣಪತಿಯನ್ನ ವಿಸರ್ಜಿಸುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆರೆಗಳಲ್ಲಿ ಪ್ರತ್ಯೇಕವಾಗಿ ಗಣೇಶ ವಿಸರ್ಜನಾ ಕಲ್ಯಾಣಿಗಳನ್ನ ನಿರ್ಮಿಸಲಾಗಿದ್ದು ಗಣೇಶ ಮೂರ್ತಿ ವಿಸರ್ಜನೆಗೆ ಬೇಕಾದ ಸಕಲ ಸಿದ್ಧತೆಗಳನ್ನೂ ಪಾಲಿಕೆ ಮಾಡಿಕೊಂಡಿದೆ. ನಗರದಲ್ಲಿ ಒಟ್ಟು 37 ಬಿಬಿಎಂಪಿ ಕಲ್ಯಾಣಿಗಳು ಹಾಗೂ 400 ಕ್ಕೂ ಹೆಚ್ಚು ಮೊಬೈಲ್ ಟ್ಯಾಂಕರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಯಾವ್ಯಾವ ಕೆರೆಯಲ್ಲಿ ಗಣೇಶನ ವಿಸರ್ಜಿಸಬಹುದು ಗೊತ್ತಾ..

* ಯಡಿಯೂರು ಕೆರೆ
* ಸ್ಯಾಂಕಿ ಟ್ಯಾಂಕ್
* ಹಲಸೂರು ಕೆರೆ
* ಉತ್ತರಹಳ್ಳಿಯ ದೊರೆಕೆರೆ
* ಮಲ್ಲತ್ತಳ್ಳಿ ಕೆರೆ
* ಸಿಂಗಸಂದ್ರ ಕೆರೆ
* ಮಾರತ್ತಳ್ಳಿಯ ಮುನ್ನೇಕೊಳಲು ಕೆರೆ
* ದೇವರಬಿಸನಹಳ್ಳಿ ಕೆರೆ
* ಕೋಗಿಲು ಕೆರೆ
* ದೊಡ್ಡಕನ್ನೇನಹಳ್ಳಿ ಕೆರೆ
* ಕಸವನಹಳ್ಳಿ ಕೆರೆ
* ಕೈಕೊಂಡರಳ್ಳಿ ಕೆರೆ 
* ಜಕ್ಕೂರು ಸಂಪಿಗೆಹಳ್ಳಿ ಕೆರೆ

ಇದರ ಜೊತೆಗೆ ಮೂರ್ತಿಯ ವಿಸರ್ಜನೆಗೆ ಮೊಬೈಲ್ ಟ್ಯಾಂಕರ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಈಗಾಗಲೇ ಪರಿಸರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಎಲ್ಲೆಲ್ಲಿ ಟ್ಯಾಂಕರ್‌ಗಳನ್ನ ನಿಲ್ಲಿಸಲಾಗುತ್ತೆ ಎಂಬುದರ ಮಾಹಿತಿಯನ್ನೂ ನೀಡಿದೆ. ಜಯನಗರ ೪ನೇ ಬ್ಲಾಕ್ ಪೊಲೀಸ್ ಠಾಣೆ ಎದುರು, ಹನುಮಂತನಗರ ಪೊಲೀಸ್ ಠಾಣೆ,
ಬಸವೇಶ್ವರನಗರದ ಪವಿತ್ರ ಪ್ಯಾರೆಡೈಸ್,
ವಿಜಯನಗರ ಬಸ್ ನಿಲ್ದಾಣ,
ಮಾಗಡಿ ರಸ್ತೆಯ ಶನಿ ಮಹಾತ್ಮ ದೇವಾಲಯ,
ಮಂಜುನಾಥನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಮಲ್ಲೇಶ್ವರ ಪೋಲೀಸ್ ಠಾಣೆ ಮುಂದೆ, ಯಶವಂತಪುರ ಪೊಲೀಸ್ ಠಾಣೆ ಮತ್ತು ‌ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ದೇವಾಲಯ, ಹೆಚ್.ಎಸ್.ಆರ್ ಲೇಔಟ್‌ನ ಬಿಡಿಎ ಕಾಂಪ್ಲೆಕ್ಸ್, ಹಲಸೂರು ಪೊಲೀಸ್ ಠಾಣೆ ಎದುರು ಹಾಗೂ ದಾಸರಳ್ಳಿ ಬಿಬಿಎಂಪಿ ಕಚೇರಿ,
ಮಲ್ಲಸಂದ್ರ ಸರ್ಕಾರಿ ಶಾಲೆ, ಹೆಗ್ಗನಹಳ್ಳಿ ಇಂದಿರಾ ಕ್ಯಾಂಟೀನ್ ,‌ಯಲಹಂಕ ನ್ಯೂ ಟೌನ್, ಶಿವ ಮಂದಿರ, ಸಹಕಾರ ನಗರ ಗಣೇಶ ಮಂದಿರ,
ರಾಜರಾಜೇಶ್ವರಿನಗರದ ಬಾಲಣ್ಣ ರಂಗಮಂದಿರ ಸೇರಿದಂತೆ ಹಲವೆಡೆ ವ್ಯವಸ್ಥೆ ಮಾಡಲಾಗಿದೆ.

ಈ ಎಲ್ಲಾ ಜಾಗಗಳಲ್ಲೂ ಮೊಬೈಲ್ ವಾಹನ ನಾಳೆ ಸಂಜೆ 6 ಗಂಟೆಯಿಂದ ರಾತ್ರಿ 7;30 ರವರೆಗೂ ಇರಲಿದೆ. ಹೀಗಾಗಿ ಸಾರ್ವಜನಿಕರು ಗಣಪತಿ ವಿಸರ್ಜಿಸಲು ಕೆರೆಗಳಿಗೆ ಹೋಗುವ ಬದಲು ಈ ವಿಸರ್ಜನಾ ವಾಹನಗಳ ಸದುಪಯೋಗ ಪಡಿಸಿಕೊಳ್ಳಬಹುದು.

ಇನ್ನು ಎಲ್ಲಾ ಕಲ್ಯಾಣಿಗಳಲ್ಲೂ ಲೈಟ್ ಹಾಗೂ ಸಿಸಿ ಕ್ಯಾಮರಾಗಳನ್ನ ಅಳವಡಿಸಲಾಗಿದ್ದು, ಪಾಲಿಕೆ ವ್ಯಾಪ್ತಿಯ ವಿಸರ್ಜನಾ ಸ್ಥಳಕ್ಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಭೇಟಿ ನೀಡಿ ಪರಿಶೀಲಿಸಿದ್ರು.. ಇವರಿಗೆ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಹಾಗೂ ಪಾಲಿಕೆ ಅಧಿಕಾರಿಗಳು ಹಾಜರು ಇದ್ದರು..‌

ಪರಿಶೀಲನೆ ವೇಳೆ ಮಾಹಿತಿ ನೀಡಿದ ಮೇಯರ್,
ಪಾಲಿಕೆ ಪ್ರತಿವರ್ಷದಂತೆ ಈ ಬಾರಿಯೂ ಗಣೇಶ ವಿಸರ್ಜನೆಗೆ ಸಿದ್ಧವಾಗಿದೆ.. ದೊಡ್ಡ ಗಣಪತಿಗಳನ್ನ ಕ್ರೇನ್ ಮೂಲಕ ವಿಸರ್ಜನೆ ಮಾಡಲಾಗುವುದು
ಎರಡು ಕ್ರೇನ್ ಮೂಲಕ ವಿಸರ್ಜನೆ ಅವಕಾಶವಿದ್ದು, ೧ ಲಕ್ಷಕ್ಕೂ ಹೆಚ್ಚಿನ ಗಣೇಶ ಮೂರ್ತಿಗಳ ವಿಸರ್ಜನೆ ಆಗಲಿದೆ..‌ ಪಿಓಪಿ ಗಣೇಶಗಳನ್ನ ಇಲ್ಲಿ ವಿಸರ್ಜನೆ ಮಾಡೋದಕ್ಕೆ ಅವಕಾಶ ಇರೋದಿಲ್ಲ.. ಪಿಓಪಿ ಗಣಪಗಳ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದ್ದೇವೆ. ಹಾಗಾಗಿ ಪಿಓಪಿ ಗಣಪನ ಸಂಖ್ಯೆಯೂ ಕಡಿಮೆಯಾಗಿದೆ ಅಂತ‌ ತಿಳಿಸಿದರು..‌

ಅಂತೂ ಗಣೇಶನ ಹಬ್ಬಕ್ಕೆ ಬೆಂಗಳೂರಿಗರು ಉತ್ಸಾಹದಿಂದ ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಬಿಎಂಪಿ ಕೂಡಾ ಗಣೇಶ ವಿಸರ್ಜನೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದೆ. ನೀವೂ ಜೇಡಿಮಣ್ಣಿನ ಗಣೇಶ ತಂದು ಪೂಜಿಸಿ, ಪರಿಸರಕ್ಕೆ ಮಾರಕವಾಗುವ ಪಿಒಪಿಯನ್ನ‌ ತ್ಯಜಿಸಿ..‌

KN_BNG_04_MAYORE_VISIT_SCRIPT_7201801Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.