ಬೆಂಗಳೂರು: ಬಿಜೆಪಿ ಶಾಸಕ ಮೇಲಿನ ಲೋಕಾಯುಕ್ತ ದಾಳಿ ವಿಚಾರವಾಗಿ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಕಮಿಷನ್ ಪರ್ಸೆಂಟ್ 40, ಪಡೆಯುತ್ತಿದ್ದ ಲಂಚವೂ 40. ನಲವತ್ತು ನಲವತ್ತು ತೋಳ ಹಳ್ಳಕ್ಕೆ ಬಿತ್ತು. ಶಾಸಕರ ಪರವಾಗಿ ಶಾಸಕರ ಪುತ್ರ ಲಂಚ ಸ್ವೀಕರಿಸುವಾಗ ಸಿಕ್ಕಿ ಬೀಳುವ ಮೂಲಕ ಬಿಜೆಪಿ ಕರ್ನಾಟಕದ ಕಮಿಷನ್ ದಂಧೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಂತಾಗಿದೆ. ಈಗ ಬೊಮ್ಮಾಯಿ ಅವರು ರಾಜೀನಾಮೆ ಕೊಡ್ತಾರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
-
ಶಾಸಕರ ಮನೆಯಲ್ಲಿ ಸಿಕ್ಕ ಹಣದ ರಹಸ್ಯವೇನು @BJP4Karnataka?
— Karnataka Congress (@INCKarnataka) March 3, 2023 " class="align-text-top noRightClick twitterSection" data="
◆ಈ ಹಣ #PayCM ಗೆ ತಲುಪಿಸುವುದಕ್ಕಾ ಅಥವಾ #PayPM ಗೆ ತಲುಪಿಸುವುದಕ್ಕಾ?
◆ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ ಮೊ-ಶಾ ಜೋಡಿಗೆ ಕರ್ನಾಟಕ ಎಟಿಎಂ ಆಗಿದೆಯೇ?
◆ಸಂಪತ್ತಿನ ಕ್ರೋಡೀಕರಣಕ್ಕಾಗಿಯೇ 40% ಕಮಿಷನ್ ಬಗ್ಗೆ ಮೋದಿ, ಶಾ ಮಾತಾಡುತ್ತಿಲ್ಲವೇ?#ElectionCollection
">ಶಾಸಕರ ಮನೆಯಲ್ಲಿ ಸಿಕ್ಕ ಹಣದ ರಹಸ್ಯವೇನು @BJP4Karnataka?
— Karnataka Congress (@INCKarnataka) March 3, 2023
◆ಈ ಹಣ #PayCM ಗೆ ತಲುಪಿಸುವುದಕ್ಕಾ ಅಥವಾ #PayPM ಗೆ ತಲುಪಿಸುವುದಕ್ಕಾ?
◆ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ ಮೊ-ಶಾ ಜೋಡಿಗೆ ಕರ್ನಾಟಕ ಎಟಿಎಂ ಆಗಿದೆಯೇ?
◆ಸಂಪತ್ತಿನ ಕ್ರೋಡೀಕರಣಕ್ಕಾಗಿಯೇ 40% ಕಮಿಷನ್ ಬಗ್ಗೆ ಮೋದಿ, ಶಾ ಮಾತಾಡುತ್ತಿಲ್ಲವೇ?#ElectionCollectionಶಾಸಕರ ಮನೆಯಲ್ಲಿ ಸಿಕ್ಕ ಹಣದ ರಹಸ್ಯವೇನು @BJP4Karnataka?
— Karnataka Congress (@INCKarnataka) March 3, 2023
◆ಈ ಹಣ #PayCM ಗೆ ತಲುಪಿಸುವುದಕ್ಕಾ ಅಥವಾ #PayPM ಗೆ ತಲುಪಿಸುವುದಕ್ಕಾ?
◆ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ ಮೊ-ಶಾ ಜೋಡಿಗೆ ಕರ್ನಾಟಕ ಎಟಿಎಂ ಆಗಿದೆಯೇ?
◆ಸಂಪತ್ತಿನ ಕ್ರೋಡೀಕರಣಕ್ಕಾಗಿಯೇ 40% ಕಮಿಷನ್ ಬಗ್ಗೆ ಮೋದಿ, ಶಾ ಮಾತಾಡುತ್ತಿಲ್ಲವೇ?#ElectionCollection
ಕಮಿಷನ್ ಲೂಟಿಗೆ ದಾಖಲೆ ಕೇಳುವ ಬೊಮ್ಮಾಯಿ ಅವರೇ, ದಾಖಲೆಗಳು ಕಂತೆ ಕಂತೆಯಾಗಿ ಸಿಕ್ಕಿವೆ ನೋಡಿ. ಈಗ ಕಮಿಷನ್ ಆರೋಪ ಒಪ್ಪುವಿರಾ?. ಚುನಾವಣೆ ಖರ್ಚಿಗಾಗಿ ಬಿಜೆಪಿಯ ಎಲೆಕ್ಷನ್ ಕಲೆಕ್ಷನ್ ಬಿರುಸಿನಿಂದ ಸಾಗಿದೆ. ಅಧಿಕಾರಾವಧಿ ಮುಗಿಯುತ್ತಿದೆ. ಮತ್ತೆಂದೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಜೆಪಿ ಕರ್ನಾಟಕ ಬಕಾಸುರನಂತೆ ದೋಚಿ ಬಾಚುತ್ತಿದೆ ಎಂದು ಕಿಡಿಕಾರಿದೆ.
ರಿಸರ್ವ್ ಬ್ಯಾಂಕಿನಲ್ಲಿರುವುದಕ್ಕಿಂತ ಹೆಚ್ಚು ಹಣ ಬಿಜೆಪಿಗರ ಮನೆಯಲ್ಲಿದೆ. ಒಬ್ಬ ಶಾಸಕರದ್ದೇ ಈ ಪರಿ ಲೂಟಿ ಇರುವಾಗ ಮಂತ್ರಿಗಳ ಲೂಟಿ ಇನ್ನೆಷ್ಟು?. ಇಂದು ಅಮಿತ್ ಶಾ ಬರುತ್ತಿರುವುದಕ್ಕೂ, ಈ ನಿಧಿ ಸಂಗ್ರಹಕ್ಕೂ ಸಂಬಂಧವಿದೆಯೇ?. ಅಮಿತ್ ಶಾ ಬರುತ್ತಿರುವುದೇ ಇಲ್ಲಿನ 'ಸಂಪತ್ತು' ಕೊಂಡೊಯ್ಯುವುದಕ್ಕಾ?. ಶಾಸಕರ ಮನೆಯಲ್ಲಿ ಸಿಕ್ಕ ಹಣದ ರಹಸ್ಯವೇನು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕಮಿಷನ್ ಲೂಟಿಯ ಹಣ ಇಡಲು ಮನೆಗಳು ಸಾಲದೆ ಬಿಜೆಪಿಗರು ದೊಡ್ಡ ದೊಡ್ಡ ಗೋಡೌನ್‌ಗಳನ್ನೇ ಕಟ್ಟಿಸಿರುವಂತಿದೆ. ಒಬ್ಬೊಬ್ಬರಲ್ಲೂ ಲಾರಿಯಲ್ಲಿ ಲೋಡ್ ಮಾಡುವಷ್ಟು ಭ್ರಷ್ಟ ಹಣ ತುಂಬಿ ತುಳುಕುತ್ತಿದೆ. ಹೀಗಿದ್ದರೂ ಬಿಜೆಪಿಗರತ್ತ ಸುಳಿಯದ ಐಟಿ, ಇಡಿ, ಸಿಬಿಐಗಳು ಬಾಳೆಹಣ್ಣಿನ ಸಿಪ್ಪೆ ತೆಗೆಯುತ್ತಿವೆಯೇ ಅಮಿತ್ ಶಾ ಅವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
"ನಾ ಖಾವುಂಗಾ, ನಾ ಖಾನೆದುಂಗಾ" ಎನ್ನುವ ನರೇಂದ್ರ ಮೋದಿ ಅವರೇ, ಇಲ್ಲಿರುವುದು ಡಬಲ್ ಇಂಜಿನ್ ಸರ್ಕಾರವಲ್ಲ, ಡಬಲ್ ಲೂಟಿಯ ಸರ್ಕಾರ. ನಿಮ್ಮವರ ಲೂಟಿ ಸಾಧನೆಯನ್ನು ಕಣ್ತುಂಬಿಕೊಳ್ಳಲೆಂದೇ ಕರ್ನಾಟಕಕ್ಕೆ ತಿಂಗಳಿಗೆ ಮೂರು ಬಾರಿ ಬರುತ್ತಿರುವಿರಾ? "ಶಬಾಷ್" ಎಂದು ಬಿಜೆಪಿ ಭ್ರಷ್ಟರ ಬೆನ್ನು ತಟ್ಟಿ ಹೋಗುವಿರಾ?. ಈ ಹಣ PayCM ಗೆ ತಲುಪಿಸುವುದಕ್ಕಾ ಅಥವಾ PayPM ಗೆ ತಲುಪಿಸುವುದಕ್ಕಾ?. ಪದೇ ಪದೆ ಕರ್ನಾಟಕಕ್ಕೆ ಬರುತ್ತಿರುವ ಮೊ-ಶಾ ಜೋಡಿಗೆ ಕರ್ನಾಟಕ ಎಟಿಎಂ ಆಗಿದೆಯೇ?. ಸಂಪತ್ತಿನ ಕ್ರೋಡೀಕರಣಕ್ಕಾಗಿಯೇ 40 ಪರ್ಸೆಂಟ್ ಕಮಿಷನ್ ಬಗ್ಗೆ ಮೋದಿ, ಶಾ ಮಾತಾಡುತ್ತಿಲ್ಲವೇ? ಎಂದು ಕಾಂಗ್ರೆಸ್ ಟೀಕಿಸಿದೆ.
-
ಕಮಿಷನ್ ಲೂಟಿಯ ಹಣ ಇಡಲು ಮನೆಗಳು ಸಾಲದೆ ಬಿಜೆಪಿಗರು ದೊಡ್ಡ ದೊಡ್ಡ ಗೋಡೌನ್‌ಗಳನ್ನೇ ಕಟ್ಟಿಸಿರುವಂತಿದೆ!
— Karnataka Congress (@INCKarnataka) March 3, 2023 " class="align-text-top noRightClick twitterSection" data="
ಒಬ್ಬೊಬ್ಬರಲ್ಲೂ ಲಾರಿಯಲ್ಲಿ ಲೋಡ್ ಮಾಡುವಷ್ಟು ಭ್ರಷ್ಟ ಹಣ ತುಂಬಿ ತುಳುಕುತ್ತಿದೆ.
ಹೀಗಿದ್ದರೂ ಬಿಜೆಪಿಗರತ್ತ ಸುಳಿಯದ ಐಟಿ, ಇಡಿ, ಸಿಬಿಐಗಳು ಬಾಳೆಹಣ್ಣಿನ ಸಿಪ್ಪೆ ತೆಗೆಯುತ್ತಿವೆಯೇ @AmitShah ಅವರೇ?#ElectionCollection
">ಕಮಿಷನ್ ಲೂಟಿಯ ಹಣ ಇಡಲು ಮನೆಗಳು ಸಾಲದೆ ಬಿಜೆಪಿಗರು ದೊಡ್ಡ ದೊಡ್ಡ ಗೋಡೌನ್‌ಗಳನ್ನೇ ಕಟ್ಟಿಸಿರುವಂತಿದೆ!
— Karnataka Congress (@INCKarnataka) March 3, 2023
ಒಬ್ಬೊಬ್ಬರಲ್ಲೂ ಲಾರಿಯಲ್ಲಿ ಲೋಡ್ ಮಾಡುವಷ್ಟು ಭ್ರಷ್ಟ ಹಣ ತುಂಬಿ ತುಳುಕುತ್ತಿದೆ.
ಹೀಗಿದ್ದರೂ ಬಿಜೆಪಿಗರತ್ತ ಸುಳಿಯದ ಐಟಿ, ಇಡಿ, ಸಿಬಿಐಗಳು ಬಾಳೆಹಣ್ಣಿನ ಸಿಪ್ಪೆ ತೆಗೆಯುತ್ತಿವೆಯೇ @AmitShah ಅವರೇ?#ElectionCollectionಕಮಿಷನ್ ಲೂಟಿಯ ಹಣ ಇಡಲು ಮನೆಗಳು ಸಾಲದೆ ಬಿಜೆಪಿಗರು ದೊಡ್ಡ ದೊಡ್ಡ ಗೋಡೌನ್‌ಗಳನ್ನೇ ಕಟ್ಟಿಸಿರುವಂತಿದೆ!
— Karnataka Congress (@INCKarnataka) March 3, 2023
ಒಬ್ಬೊಬ್ಬರಲ್ಲೂ ಲಾರಿಯಲ್ಲಿ ಲೋಡ್ ಮಾಡುವಷ್ಟು ಭ್ರಷ್ಟ ಹಣ ತುಂಬಿ ತುಳುಕುತ್ತಿದೆ.
ಹೀಗಿದ್ದರೂ ಬಿಜೆಪಿಗರತ್ತ ಸುಳಿಯದ ಐಟಿ, ಇಡಿ, ಸಿಬಿಐಗಳು ಬಾಳೆಹಣ್ಣಿನ ಸಿಪ್ಪೆ ತೆಗೆಯುತ್ತಿವೆಯೇ @AmitShah ಅವರೇ?#ElectionCollection
ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಟ್ವೀಟ್ ಮಾಡಿ, 40 ಪರ್ಸೆಂಟ್ ಸರ್ಕಾರದ ಲೂಟಿ ತಡೆಯಿಲ್ಲದೇ ಮುಂದುವರಿದಿದೆ. ಮೈಸೂರು ಸ್ಯಾಂಡಲ್ ಸೋಪ್ ನ ಪರಿಮಳವನ್ನು ಭ್ರಷ್ಟಮಾಡಲಾಗುತ್ತಿದೆ. 40 ಲಕ್ಷ ರೂ. ಲಂಚ ಪಡೆಯುವಾಗ ರೆಡ್ ಹ್ಯಾಡ್ ಆಗಿ ಸಿಕ್ಕಿ ಬಿದ್ದಿದ್ದರು. ಈಗ 6 ಕೋಟಿ ರೂ. ನಗದನ್ನು ಮನೆಯಿಂದ ವಶಕ್ಕೆ ಪಡೆಯಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸರ್ಕಾರದ 40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು: ಕಾಂಗ್ರೆಸ್ ಟೀಕೆ