ಆನೇಕಲ್: ರೈತರ ಕೆಲಸ ಮಾಡಲು ನಿರ್ಲಕ್ಷ್ಯ ವಹಿಸುತ್ತಿರುವ ಆರೋಪ ಕೇಳಿಬಂದ ಹಿನ್ನೆಲೆ ಕಂದಾಯ ಅಧಿಕಾರಿಗಳನ್ನು ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡ ಘಟನೆ ಆನೇಕಲ್ ತಾಲೂಕು ಪಂಚಾಯತಿಯಲ್ಲಿ ನಡೆದಿದೆ.
ಇಂದು ರೈತರ ಹಾಗೂ ಸಾರ್ವಜನಿಕರ ಅಹವಾಲು, ದೂರು ಸ್ವೀಕಾರ ಮತ್ತು ಕುಂದುಕೊರತೆ ಸಭೆಯನ್ನು ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ನೇತೃತ್ವದಲ್ಲಿ ಆಯೋಜನೆ ಮಾಡಲಾಗಿತ್ತು. ಲೋಕಾಯುಕ್ತ ಎಸ್ ಪಿ ಶ್ರೀನಾಥ್ ಜೋಶಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಇದನ್ನೂ ಓದಿ: ಕರ್ತವ್ಯನಿರತ ಪಾಲಿಕೆ ಕಂದಾಯ ಅಧಿಕಾರಿ ಮೇಲೆ ಪಿಎಸ್ಐ ಹಲ್ಲೆ..?
ಈ ವೇಳೆ ಕಂದಾಯ ಅಧಿಕಾರಿಗಳ ವಿರುದ್ಧ ಹಲವು ದೂರುಗಳು ಬಂದಿದ್ದವು. ಇದರಿಂದ ಆಕ್ರೋಶಗೊಂಡ ಲೋಕಾಯುಕ್ತರು, ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಏಕೆ ಮೀನಾಮೇಷ ಎಂದು ಕಂದಾಯ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ ಗಳಾದ ರೇಣಕಾ ಪ್ರಸಾದ್, ವೆಂಕಟೇಶ್ ಮತ್ತು ಇನ್ಸ್ಪೆಕ್ಟರ್ಗಳಾದ ಶ್ರೀನಿವಾಸ್, ಮಹೇಶ್ ಭಾಗಿಯಾಗಿದ್ದರು.