ಬೆಂಗಳೂರು: ಲೋಕಾಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಪೊಲೀಸ್ ಸಿಬ್ಬಂದಿ ಯಾವುದೆ ರಾಜಕಾರಣಿಗಳ ಮಾತು ಕೇಳಕೂಡದು. ತಪ್ಪು ಮಾಡಿದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಾಂತರ ಎಸ್ಪಿ ರಾಮ್ ನಿವಾಸ್ ಖಡಕ್ ಸೂಚನೆ ನೀಡಿದ್ದಾರೆ.
ಲೋಕಾಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ನಾಯಕರು ತಮ್ಮ ತಮ್ಮ ಪಕ್ಷದ ನಾಯಕರ ಗೆಲುವಿಗಾಗಿ ಪ್ರಚಾರ ಕೈಗೊಂಡಿದ್ದಾರೆ. ಆದರೆ ಚುನಾವಣೆ ನಡೆಯವ ಮುಂಚೆ ಹಾಗೂ ಚುನಾವಣೆ ನಡೆಯುವ ವೇಳೆ ಬಹಳಷ್ಟು ಮುಂಜಾಗೃತ ಕ್ರಮ ಬೇಕಾಗುತ್ತದೆ. ಅದಕ್ಕಾಗಿ ಈಗಾಗಲೇ ರಾಜ್ಯ ಹಾಗೂ ಬೆಂಗಳೂರಿನಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಗುಪ್ತಚರ ಇಲಾಖೆ ಕೂಡ ಪ್ರತಿಯೊಂದು ಚಲನವಲನಗಳ ಮಾಹಿತಿಯನ್ನು ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ರವಾನೆ ಮಾಡುತ್ತಿದ್ದಾರೆ.
ಅದರಲ್ಲೂ ಬಹಳ ಸೂಕ್ಷ ಹಾಗೂ ಜಾಸ್ತಿ ಜನಸಾಂದ್ರತೆ ಇರುವ ಸಿಲಿಕಾನ್ ಸಿಟಿಗೆ ಬೆಂಗಳೂರು ಚುನಾವಣಾಧಿಕಾರಿಗಳ ವ್ಯಾಪ್ತಿಯ 3 ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ನಡೆಯಲಿದೆ. ಈ ನಿಟ್ಟಿನಲ್ಲಿ ಚುನಾವಣಾ ಅಧಿಕಾರಿಗಳ ಸಾರಥ್ಯದಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಲ್ಲೆಡೆ ಅಲರ್ಟ್‌ಆಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ವಿಧಾನಸಭಾ ಕ್ಷೇತ್ರ ಯಲಹಂಕ ಇವುಗಳ ಮೇಲೆ ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮ್ ನಿವಾಸ್ ಸಪೇಟ್ ಜವಾಬ್ದಾರಿ ಹೊತ್ತಿದ್ದಾರೆ.
ಇನ್ನು ಈ ಟಿವಿ ಜೊತೆ ಮಾತಾನಾಡಿದ ರಾಮ್ ನಿವಾಸ್, ಬೆಂಗಳೂರು ಗ್ರಾಮಾಂತರದಲ್ಲಿ ಈಗಾಗಲೇ ಆಯಾ ವಲಯದ ಸಿಬ್ಬಂದಿಗಳನ್ನು ಅಲರ್ಟ್ ಆಗಿರುವಂತೆ ಸೂಚನೆ ನೀಡಿದ್ದೇನೆ ಹಾಗೂ 10ಕ್ಕೂ ಹೆಚ್ಚು ಚೆಕ್ ಪೋಸ್ಟ್ಗಳು ಗ್ರಾಮಾಂತರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿಯೊಬ್ಬರ ಚಲನವಲನಗಳನ್ನ ಗಮನಿಸುತ್ತಿದ್ದಾರೆ.
ಒಂದು ಪಕ್ಷದಕೆ ಹೆಸರು ಹಾಳು ಮಾಡುವ ಕೆಲ ರೌಡಿ ಆಸಾಮಿಗಳನ್ನು ಕರೆದು ರೌಡಿ ಪರೇಡ್ಗಳನ್ನ ಕೂಡ ನಡೆಸಿದ್ದೇವೆ. ಖುದ್ದಾಗಿ ನಾನೇ ತೆರಳಿ ಸ್ಪಾಟ್ ವೀಕ್ಷಣೆ ನಡೆಸಿದ್ದೇನೆ. ನಮ್ಮ ಸಿಬ್ಬಂದಿ ಯಾರು ಕೂಡ ರಾಜಕಾರಣಿಗಳ ಮಾತಿಗೆ ಮಣಿಯಬಾರದು. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.