ETV Bharat / state

ಬೇಕರಿ ಅಂಗಡಿ ತೆರೆಯಲು ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ - ಕೇಂದ್ರ ಸರ್ಕಾರದ ಆದೇಶ

ಬೇಕರಿ ಐಟಂಗಳ ಕೊರತೆ ಎದುರಾದ ಹಿನ್ನೆಲೆ ಕೇಂದ್ರ ಸರ್ಕಾರದ ಆದೇಶದ ಅನ್ವಯ ರಾಜ್ಯ ಸರ್ಕಾರ ಬೇಕರಿ ಉತ್ಪನ್ನಗಳ ಉತ್ಪಾದನೆ, ಸರಬರಾಜು ಮತ್ತು ಸಂಬಂಧಿತ ರಿಟೇಲ್ ಅಂಗಡಿಗಳನ್ನು ಕನಿಷ್ಠ ಸಿಬ್ಬಂದಿಯೊಂದಿಗೆ ನಿರ್ವಹಿಸಲು ಅನುಮತಿ ನೀಡಿದೆ‌.

ಬೇಕರಿ ಶಾಪ್ ತೆರೆಯಲು ವಿನಾಯಿತಿ ನೀಡಿ ಸರ್ಕಾರ ಆದೇಶ

author img

By

Published : Apr 6, 2020, 6:08 PM IST

ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆ ಬೇಕರಿ ಐಟಂಗಳ ಕೊರತೆ ಎದುರಾಗಿದೆ. ಹಾಗಾಗಿ ಬೇಕರಿ ಅಂಗಡಿಗಳಿಗೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಬೇಕರಿ ಶಾಪ್ ತೆರೆಯಲು ವಿನಾಯಿತಿ ನೀಡಿ ಸರ್ಕಾರ ಆದೇಶ
ಬೇಕರಿ ಶಾಪ್ ತೆರೆಯಲು ವಿನಾಯಿತಿ ನೀಡಿ ಸರ್ಕಾರ ಆದೇಶ

ಬ್ರೆಡ್, ಬಿಸ್ಕತ್, ಕಾಂಡಿಮೆಂಟ್ಸ್​ಗಳು, ಸಿಹಿ ತಿನಿಸುಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿಲ್ಲ. ರೋಗಿಗಳು, ಹಿರಿಯರು, ಮಕ್ಕಳು ಹಾಗೂ ಸಾರ್ವಜನಿಕರು ಹೆಚ್ಚಾಗಿ ಬಳಸುತ್ತಾರೆ‌. ಲಾಕ್‌ಡೌನ್​​​ನಿಂದಾಗಿ ಬೇಕರಿ ಅಂಗಡಿಗಳಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಬೇಕರಿ ಐಟಂಗಳ ಕೊರತೆ ಎದುರಾದ ಹಿನ್ನೆಲೆ ಕೇಂದ್ರ ಸರ್ಕಾರದ ಆದೇಶದ ಅನ್ವಯ ರಾಜ್ಯ ಸರ್ಕಾರ ಬೇಕರಿ ಉತ್ಪನ್ನಗಳ ಉತ್ಪಾದನೆ, ಸರಬರಾಜು ಮತ್ತು ಸಂಬಂಧಿತ ರಿಟೇಲ್ ಅಂಗಡಿಗಳನ್ನು ಕನಿಷ್ಠ ಸಿಬ್ಬಂದಿಯೊಂದಿಗೆ ನಿರ್ವಹಿಸಲು ಅನುಮತಿ ನೀಡಿದೆ‌.

ಉತ್ಪಾದನಾ ಘಟಕಗಳಲ್ಲಿ ಸ್ವಚ್ಛತೆ, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಲಾಗಿದೆ. ಅಂಗಡಿಗಳಿಂದ ಪಾರ್ಸೆಲ್​ಗೆ ಮಾತ್ರ ಅನುಮತಿ ನೀಡಲಾಗಿದೆ. ಉತ್ಪಾದನಾ ಘಟಕಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಎಲ್ಲಾ ಮುಂಜಾಗ್ರತಾ ಕ್ರಮ ವಹಿಸುವಂತೆ ನಿರ್ದೇಶನ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.