ETV Bharat / state

ಸ್ಮಶಾನದ ಜಾಗ ಪರಿಶೀಲನೆ ವಿಚಾರ: ಬಿಬಿಎಂಪಿ ಅಧಿಕಾರಿಗಳ ಮೇಲೆ ಸ್ಥಳೀಯರಿಂದ ಹಲ್ಲೆ ಯತ್ನ - ವಾಯು ಮಾಲಿನ್ಯ

ಕೋವಿಡ್ ಶವಗಳ ದಹನಕ್ಕಾಗಿ ಸ್ಮಶಾನ ಜಾಗದ ಕೊರತೆ ಉಂಟಾಗಿದ್ದು, ಹೊಸ ಜಾಗದ ಹುಡುಕಾಟದಲ್ಲಿ ಬಿಬಿಎಂಪಿ ನಿರತವಾಗಿದೆ. ಈ ಹಿನ್ನೆಲೆ ನಗರದ ಮಾವಳ್ಳಿಪುರದ ಬಳಿ ಜಾಗ ಗುರುತಿಸಿರುವುದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಸ್ಥಳ ಪರಿಶೀಲನೆಗೆ ತೆರಳಿದ್ದ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆದಿದೆ.

locals-tries-to-attack-on-bbmp-officers-those-who-visit-cemetery-place
ಸ್ಮಶಾನ ಜಾಗ ಪರಿಶೀಲನೆಗೆ ತೆರಳಿದ್ದ ಬಿಬಿಎಂಪಿ ಅಧಿಕಾರಿಗಳ ಮೇಲೆ ಸ್ಥಳೀಯರಿಂದ ಹಲ್ಲೆ ಯತ್ನ
author img

By

Published : Apr 29, 2021, 9:01 PM IST

ಬೆಂಗಳೂರು: ಕೋವಿಡ್​​​ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ತೆರೆದ ಸ್ಮಾಶನದ ವ್ಯವಸ್ಥೆ ವಿಚಾರವಾಗಿ ಬಿಬಿಎಂಪಿ‌ ಯಲಹಂಕದ ಮಾವಳ್ಳಿಪುರದ ಬಳಿ 20 ಎಕರೆ ಜಾಗ ಗೊತ್ತು ಮಾಡಿತ್ತು. ಇನ್ನು ಈ ವಿಚಾರವಾಗಿ ಸ್ಮಾಶನದ ಜಾಗ ಸರ್ವೇಗೆ ಹೋದ ಬಿಬಿಎಂಪಿ ಅಧಿಕಾರಿಗಳ ಮೇಲೆ‌ ಸ್ಥಳೀಯರು ಮಾತಿನ ಚಕಮಕಿ ನಡೆದಿದ್ದು, ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.

2012ರ ವರೆಗೆ ಬಿಬಿಎಂಪಿ ಲ್ಯಾಂಡ್‌ಫಿಲ್ಲಿಂಗ್‌ಗಾಗಿ ಈ ಜಾಗ ಬಳಸಿಕೊಳ್ಳುತ್ತಿತ್ತು. ಆದರೆ, ವಾಯು ಮಾಲಿನ್ಯದಿಂದ ಕೋರ್ಟ್ ಮೆಟ್ಟಿಲೇರಿ ವಾಯುಮಾಲಿನ್ಯ ನಿಯಂತ್ರಣ ಇಲಾಖೆ ಈ ಜಾಗದಲ್ಲಿ ತ್ಯಾಜ್ಯ ಸುರಿಯದಂತೆ ಆದೇಶ ನಿಡಲಾಗಿತ್ತು. ಹೀಗಾಗಿ ಗೋಮಾಳದ ಖಾಲಿ ಬಿದ್ದಿದ್ದ ಮಾವಳ್ಳಿಪುರ ಲ್ಯಾಂಡ್‌ಫಿಲ್ಲಿಂಗ್ ಮಾಡಲು ಬಿಬಿಎಂಪಿ ಮುಂದಾಗಿತ್ತು.

ಸ್ಮಶಾನ ಜಾಗ ಪರಿಶೀಲನೆಗೆ ತೆರಳಿದ್ದ ಬಿಬಿಎಂಪಿ ಅಧಿಕಾರಿಗಳ ಮೇಲೆ ಸ್ಥಳೀಯರಿಂದ ಹಲ್ಲೆ ಯತ್ನ

ಇದೀಗ ಕೊರೊನಾ ಮೃತ ದೇಹಗಳನ್ನು ಸುಡಲು ತೆರೆದ ಸ್ಮಶಾನಕ್ಕೆ ಈ ಜಾಗವನ್ನ ಬಿಬಿಎಂಪಿ ಗುರುತಿಸಿದೆ. ಈ ಹಿನ್ನೆಲೆ ಇಂದು ಜಾಗ ಪರಿಶೀಲನೆ ನಡೆಸಲು ಅಧಿಕಾರಿಗಳು ಹೋದಾಗ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಜಾಗದ ಸುತ್ತ-ಮುತ್ತ 12 ಹಳ್ಳಿಗಳಿವೆ, ಈಗ ಕೊರೊನಾ ಸೋಂಕಿತರ ಶವಗಳನ್ನ ತಂದು ಸುಟ್ಟರೆ ಇದರಿಂದ ಆಗುವ ಪರಿಣಾಮಗಳಿಗೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸ್ಥಳೀಯರನ್ನು ಮನವೊಲಿಸಲು ಬಿಬಿಎಂಪಿ ಅಧಿಕಾರಿಗಳು ಪ್ರಯತ್ನಿಸಿದ್ದಾರೆ. ಆದರೆ, ಇದ್ಯಾವುದಕ್ಕೂ ಒಪ್ಪದ ಸ್ಥಳೀಯರು ಸ್ಮಶಾನ ನಿರ್ಮಾಣ ಮಾಡದಂತೆ ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: 18 ರಿಂದ 45 ವರ್ಷದೊಳಗಿನವರಿಗಾಗಿ ಹಂತ ಹಂತವಾಗಿ ಲಸಿಕೆ ಅಭಿಯಾನ; ಸಿಎಂ ಬಿಎಸ್​ವೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.