ಬೆಂಗಳೂರು: ಜಾಗತಿಕವಾಗಿ ಪ್ರಮುಖ ಹೈಜೀನ್ ಬ್ರಾಂಡ್ ಆಗಿರುವ ಲಿವಿನ್‍ಗಾರ್ಡ್ ಎಜಿಯು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಜೊತೆಗೆ ಕೈಜೋಡಿಸಿದೆ.
ಇದನ್ನೂ ಓದಿ: ಈ ಬ್ಯಾಂಕ್ನ ಹೊಸ ಬ್ರ್ಯಾಂಡ್ ಅಂಬಾಸಿಡರ್ ಸ್ಮೃತಿ ಮಂಧಾನ
ಮಾಸ್ಕ್ಗಳು ಮತ್ತು ಕೈಗವಸುಗಳಿಗೆ ಸೌರವ್ ಗಂಗೂಲಿ ಬ್ರಾಂಡ್ ಅಂಬಾಸಿಡರ್ ಆಗಿ ಹೊರಹೊಮ್ಮಿದ್ದಾರೆ. ಸ್ಟ್ರೀಟ್, ಪ್ರೋ ಮತ್ತು ಅಲ್ಟ್ರಾ ಎಂಬ ಮೂರು ವಿಧಗಳಲ್ಲಿ ಮಾಸ್ಕ್ಗಳು ಲಭ್ಯವಿದ್ದು, ಇವುಗಳನ್ನು 6 ತಿಂಗಳವರೆಗೆ ಬಳಸಬಹುದು. ಶೇ. 99.9ಕ್ಕೂ ಹೆಚ್ಚು ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನು ನಿರ್ಮೂಲನೆಗೊಳಿಸುತ್ತದೆ. ಅಲ್ಲದೆ ಕೋವಿಡ್-19ಗೆ ಕಾರಣವಾಗುವ ಸಾರ್ಸ್ ಸಿಒವಿ 2 ವೈರಸ್ಗಳನ್ನೂ ನಿರ್ಮೂಲನೆ ಮಾಡುತ್ತದೆ.
ಲಿವಿನ್‍ಗಾರ್ಡ್ ಎಜಿ ಸ್ವಿಡ್ಜರ್ಲೆಂಡಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಭಾರತ, ಜರ್ಮನಿ, ಯುಎಸ್‍ಎ, ಸಿಂಗಾಪುರ, ಜಪಾನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ಹೊಂದಿದೆ. ಸೌರವ್ ಗಂಗೂಲಿ ಜೊತೆಗಿನ ಸಹಭಾಗಿತ್ವದ ಘೋಷಣೆಯನ್ನು ವರ್ಚುವಲ್ ಪ್ರೆಸ್ ಕಾನ್ಫರೆನ್ಸ್ ಮೂಲಕ ಇಂದು ನಡೆಸಲಾಯಿತು.
ಈ ಸಂದರ್ಭದಲ್ಲಿ ಸೌರವ್ ಗಂಗೂಲಿ, ಲಿವಿನ್‍ಗಾರ್ಡ್ ಎಜಿ ಇನ್ವೆಂಟರ್ ಮತ್ತು ಸಿಇಒ ಹಾಗೂ ಸಂಸ್ಥಾಪಕ ಸಂಜೀವ್ ಸ್ವಾಮಿ, ಲಿವಿನ್‍ಗಾರ್ಡ್ ಎಜಿ ಮಾರ್ಕೆಟಿಂಗ್ ವಿಭಾಗದ ಹಿರಿಯ ಅಧಿಕಾರಿ ಅಂಕಿತ್ ಮಿತ್ತಲ್ ಇದ್ದರು. ಸೀಮಿತ ಆವೃತ್ತಿಯ ಸೌರವ್ ಗಂಗೂಲಿ ಅವರ ಹಸ್ತಾಕ್ಷರ ಇರುವ ಸ್ಟ್ರೀಟ್ ಮಾಸ್ಕ್ ಅನ್ನೂ ಬಿಡುಗಡೆ ಮಾಡಲಾಯಿತು.
ಲಿವಿನ್‍ಗಾರ್ಡ್ ಎಜಿ ಜೊತೆಗಿನ ಸಹಭಾಗಿತ್ವದ ಬಗ್ಗೆ ಮಾತನಾಡಿದ ಸೌರವ್ ಗಂಗೂಲಿ, ಲಿವಿನ್‍ಗಾರ್ಡ್ ಜೊತೆಗೆ ಇನ್ನಿಂಗ್ಸ್ ಆರಂಭಿಸಲು ನಾನು ಉತ್ಸುಕನಾಗಿದ್ದೇನೆ. ನಮ್ಮ ನಿತ್ಯ ಬದುಕಿಗೆ ಮಾಸ್ಕ್ಗಳು ಮತ್ತು ಗ್ಲೌಸ್ಗಳು ಇದೀಗ ಸಹಜ ಸಂಗತಿಗಳಾಗಿವೆ. ವೈಯಕ್ತಿಕ ರಕ್ಷಣಾ ಕ್ರಮಗಳ ಬಗ್ಗೆ ನಾನು ಹುಡುಕಾಟ ನಡೆಸಿದ್ದೆ. ಬಹುತೇಕ ಎಲ್ಲ ಮಾಸ್ಕ್ ಮತ್ತು ಗ್ಲೌಸ್ ಕೇವಲ ಮುನ್ನೆಚ್ಚರಿಕೆ ಅಥವಾ ಒಂದು ಬಾರಿ ಬಳಕೆಯ ಯೋಗ್ಯವಾಗಿದೆ.
ಇದನ್ನೂ ಓದಿ:ಬಿಎಂಟಿಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಪುನೀತ್ ರಾಜ್‌ಕುಮಾರ್ ಆಯ್ಕೆ
ಆದರೆ, ಲಿವಿನ್‍ಗಾರ್ಡ್ ಫೇಸ್ ಮಾಸ್ಕ್ಗಳು ಕೇವಲ ಮುನ್ನೆಚ್ಚರಿಕೆಯ ಉದ್ದೇಶದ್ದಲ್ಲ, ರಕ್ಷಣಾತ್ಮಕವೂ ಆಗಿದೆ. ಕೋವಿಡ್-19ಗೆ ಕಾರಣವಾಗುವ ಸಾರ್ಸ್ ಸಿಒವಿ 2 ವೈರಸ್ ಸೇರಿದಂತೆ ಶೇ.99.9ರಷ್ಟು ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನು ನಾಶಗೊಳಿಸುವುದಾಗಿ ಲಿವಿನ್‍ಗಾರ್ಡ್ ಟೆಕ್ನಾಲಜಿ ಸಾಬೀತುಪಡಿಸಿದೆ. ಅಷ್ಟೇ ಅಲ್ಲ, ಅವುಗಳನ್ನು 6 ತಿಂಗಳವರೆಗೆ ಪುನಃ ಬಳಸಬಹುದು ಎಂದಿದೆ ಎಂದು ಅದರ ಸಾಮರ್ಥ್ಯವನ್ನು ವಿವರಿಸಿದರು.