ETV Bharat / state

ವಿದ್ಯುತ್ ತಂತಿ ತಗುಲಿ ಲೈನ್​ಮ್ಯಾನ್​ ಸ್ಥಳದಲ್ಲೇ ಸಾವು - Lineman death

ವಿದ್ಯುತ್​ ತಂತಿ ತಗುಲಿ ಲೈನ್​​ಮ್ಯಾನ್​ ಮೃತಪಟ್ಟ ಘಟನೆ ಆರ್ ಟಿ ನಗರ ವ್ಯಾಪ್ತಿಯಲ್ಲಿ ನಡೆದಿದೆ. ಈ ನಡುವೆ ಲೈನ್​​ಮ್ಯಾನ್​ ಮೃತಪಟ್ಟರೂ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಬಾರದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ವಿದ್ಯುತ್ ತಂತಿ ತಗುಲಿ ಲೈನ್​ಮ್ಯಾನ್​ ಸ್ಥಳದಲ್ಲೇ ಸಾವು
author img

By

Published : May 28, 2019, 6:29 PM IST

ಬೆಂಗಳೂರು: ವಿದ್ಯುತ್​ ತಗುಲಿ ಲೈನ್​​ಮ್ಯಾನ್ ಒಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಆರ್ ಟಿ ನಗರ ವ್ಯಾಪ್ತಿಯಲ್ಲಿ ನಡೆದಿದೆ.

ಅಶೋಕ್ ಮೃತ ದುರ್ದೈವಿ. ಇತ್ತೀಚೆಗೆ ಸುರಿದ ಭಾರಿ ಗಾಳಿ ಮಳೆಗೆ ವಿದ್ಯುತ್​ ತಂತಿ ತುಂಡರಿಸಿ ಬಿದ್ದಿದೆ. ಇದರ ಬಗ್ಗೆ ಆರ್ ಟಿ ನಗರ ಬೆಸ್ಕಾಂ ಕಚೇರಿಗೆ ದೂರು ಬಂದಿತ್ತು. ದೂರಿನ ಅನ್ವಯ ವಿದ್ಯುತ್ ತಂತಿ ಸರಿಪಡಿಸುವ ವೇಳೆ ವಿದ್ಯುತ್ ತಾಗಿ ಲೈನ್​​ಮ್ಯಾನ್ ಅಶೋಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಲೈನ್​ಮ್ಯಾನ್ ಅಜಾಗರೂಕತೆಯೇ ಈ ಅವಘಡಕ್ಕೆ ಕಾರಣವೆಂದು ಬೆಸ್ಕಾಂ ಅಧಿಕಾರಿಗಳು ಹೇಳುತಿದ್ದಾರೆ. ಇನ್ನು ಅಶೋಕ್ ಮೃತಪಟ್ಟ ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಬಾರದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇನ್ನು ಮೃತದೇಹವನ್ನ ಜೈನ್​ ಆಸ್ಪತ್ರೆಗೆ ರವಾನಿಸಲಾಗಿದೆ.

Intro:ಲೈನ್ ಮ್ಯಾನ್ ಗೆ ವಿಧ್ಯುತ್ ತಗುಲಿ ಸ್ಥಳದಲ್ಲೇ ಸಾವು..
ಲೈನ್ ಮ್ಯಾನ್ ಅಜಾಗರುಕತೆಯೇ ಅವಘಡಕ್ಕೆ ಕಾರಣವೆಂದು ಬೆಸ್ಕಾಂ ಅಧಿಕಾರಿಗಳು

ಭವ್ಯ

ಲೈನ್ ಮ್ಯಾನ್ ಗೆ ವಿಧ್ಯುತ್ ತಗುಲಿ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಆರ್ ಟಿ ನಗರ ವ್ಯಾಪ್ತಿಯಲ್ಲಿ ನಡೆದಿದೆ. ಅಶೋಕ್ ಎಂಬ ವ್ಯಕ್ತಿ ಸಾವಿಗೀಡಾದ ದುರ್ಧೈವಿ. ಮೊನ್ನೆ ಸುರಿದ ಬಾರಿ ಗಾಳಿ ಮಳೆಗೆ ವಿದ್ಯುತ್ ತಂತಿ ಕಡಿತಗೊಂಡಿತ್ತು. ಇದ್ರ ಬಗ್ಗೆ ಆರ್ ಟಿ ನಗರ ಬೆಸ್ಕಾಂ ಕಛೇರಿಗೆ ದೂರು ಬಂದಿತ್ತು. ದೂರಿನ ಅನ್ವಯ ವಿಧ್ಯುತ್ ತಂತಿ ಸರಿ ಪಡಿಸುವ ವೇಳೆ ವಿಧ್ಯುತ್ ಪ್ರವರಿಸಿ ಲೈನ್ ಮ್ಯಾನ್ ಅಶೋಕ್ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಲೈನ್ ಮ್ಯಾನ್ ಅಜಾಗರುಕತೆಯೇ ಅವಘಡಕ್ಕೆ ಕಾರಣವೆಂದು ಬೆಸ್ಕಾಂ ಅಧಿಕಾರಿಗಳು ಹೇಳುತಿದ್ದು, ಅಶೋಕ್ ಮೃತ ಪಟ್ರು ಸ್ಥಳಕ್ಕೆ ಬೆಸ್ಕಾಂ ಅಧಿಕಾರಿಗಳು ಬಾರದೆ ಇರುವುದು ಸಿಬ್ಬಂಧಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಮೃತದೇಹವನ್ನ ಜೈನ್ ಆಸ್ಪತ್ರೆಗೆ ಬೆಸ್ಕಾಂ ಸಿಬ್ಬಂಧಿಗಳೆ ರವಾನಿಸಿದ್ದಾರೆ.Body:KN_BNG_06-28_POWERDEATH_BHAVYA_7204498Conclusion:KN_BNG_06-28_POWERDEATH_BHAVYA_7204498

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.