ETV Bharat / state

ಬಿಜೆಪಿ ಕಚೇರಿಯ ಲಿಫ್ಟ್ ನಲ್ಲಿ ತಾಂತ್ರಿಕ ದೋಷ: ಲಿಫ್ಟ್ ನಲ್ಲಿ ಸಿಲುಕಿದ್ದ ಸಂಸದ ಜಾಧವ್ ರಕ್ಷಣೆ

ಬೆಂಗಳೂರಿನ ಬಿಜೆಪಿ ಕಚೇರಿ ಲಿಫ್ಟ್​​ನಲ್ಲಿ ತೆರಳುತ್ತಿದ್ದ ವೇಳೆ ಆಕಸ್ಮಿಕ ವಿದ್ಯುತ್ ವ್ಯತ್ಯಯ ಉಂಟಾಗಿ ಸಂಸದ ಉಮೇಶ್ ಜಾಧವ್ ಸಿಲುಕಿದ್ದು, ಅರ್ಧಗಂಟೆ ಕಸರತ್ತಿನ ನಂತರ ತಾಂತ್ರಿಕ ಸಿಬ್ಬಂದಿ ಸಹಾಯದಿಂದ ಸಂಸದ ಸೇರಿ ಮೂವರನ್ನು ಹೊರಗೆ ಕರೆತರಲಾಯಿತು.

MP Umesh Jadhav Rescue
ಲಿಪ್ಟ್​​ನಲ್ಲಿ ಸಿಲುಕಿದ್ದ ಸಂಸದ ಉಮೇಶ್ ಜಾಧವ್ ರಕ್ಷಣೆ
author img

By ETV Bharat Karnataka Team

Published : Jan 4, 2024, 8:53 PM IST

ಲಿಫ್ಟ್​ನಲ್ಲಿ ಸಿಲುಕಿದ ಸಂಸದ ಉಮೇಶ್ ಜಾಧವ್

ಬೆಂಗಳೂರು: ವಿದ್ಯುತ್ ವ್ಯತ್ಯಯದಿಂದ ಲಿಫ್ಟ್​ ಸ್ಥಗಿತಗೊಂಡು ಅದರಲ್ಲಿ ಅರ್ಧಗಂಟೆ ಕಾಲ ಸಿಲುಕಿದ್ದ ಸಂಸದ ಉಮೇಶ್ ಜಾಧವ್ ಸೇರಿ ಮೂವರನ್ನು ರಕ್ಷಿಸಲಾಗಿದೆ. ಇಂದು ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ್​ ಭವನದಲ್ಲಿ ಈ ಘಟನೆ ಜರುಗಿದೆ. ಲಿಫ್ಟ್ ನಲ್ಲಿ ಸಿಲುಕಿ ಆತಂಕಗೊಂಡಿದ್ದ ಸಂಸದ ಉಮೇಶ್ ಜಾಧವ್ ಸೇರಿ ಮೂವರನ್ನು ತಾಂತ್ರಿಕ ಸಿಬ್ಬಂದಿ ಸಹಾಯದಿಂದ ಹೊರತೆಗೆಯಲಾಗಿದೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಗುರುವಾರ ಆಗಮಿಸಿದ್ದ ಕಲಬುರಗಿ ಸಂಸದ ಉಮೇಶ್ ಜಾಧವ್ ಅವರು, ಕಚೇರಿ ಎರಡನೇ ಮಹಡಿಗೆ ತೆರಳಲು ತಮ್ಮ ಇಬ್ಬರು ಆಪ್ತರ ಜೊತೆ ಲಿಫ್ಟ್ ಪ್ರವೇಶಿಸಿದರು. ಲಿಫ್ಟ್ ಮೇಲೆ ಹೋಗುವಾಗ ವಿದ್ಯುತ್ ಕಡಿತವಾಗಿ ಲಿಫ್ಟ್ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಲಿಫ್ಟ್ ಒಳಗಡೆಯೇ ಸಂಸದ ಉಮೇಶ್ ಜಾಧವ್ ಮತ್ತು ಅವರ ಇಬ್ಬರು ಆಪ್ತರು ಸಿಲುಕಿಕೊಂಡಿದ್ದರು. ಅವರೆಲ್ಲರೂ ರಕ್ಷಣೆಗೆ ಮೊರೆಯಿಟ್ಟಿದ್ದರು. ತಕ್ಷಣ ವಿದ್ಯುತ್ ಬಂದರೂ ತಾಂತ್ರಿಕ ತೊಂದರೆಯಿಂದ ಲಿಫ್ಟ್ ತೆರೆದಿರಲಿಲ. ಕೊನೆಗೆ ಟೆಕ್ನಿಷಿಯನ್​ಗಳನ್ನು ಕರೆಸಿ ಲಿಫ್ಟ್ ಓಪನ್ ಮಾಡಿಲಾಯಿತು. ಅರ್ಧಗಂಟೆ ನಂತರ ಲಿಫ್ಟ್ ಒಳಗಿನಿಂದ ಸಂಸದ ಜಾಧವ್ ಹಾಗೂ ಅವರ ಆಪ್ತರು ಸೇರಿ ಮೂವರನ್ನು ಸಂರಕ್ಷಿಸಿ ಹೊರಗೆ ಕರೆತರಲಾಯಿತು.

ಸುರಕ್ಷಿತವಾಗಿ ಲಿಫ್ಟ್ ನಿಂದ ಹೊರ ಬಂದ ಉಮೇಶ್ ಜಾಧವ್, ತಕ್ಷಣ ರಕ್ಷಣೆ ಮಾಡಿದವರ ಕೈಕುಲುಕಿ ಕೃತಜ್ಞತೆ ಸಲ್ಲಿಸಿದರು. ಲಿಫ್ಟ್ ಒಳಗೆ ಸಿಲುಕಿದಾಗ ಇದ್ದ ಆತಂಕ ಅವರ ಮುಖದಿಂದ ಮಾಯವಾಗಿತ್ತು, ನಿರಾಳತೆಯಿಂದ ನಿಟ್ಟುಸಿರು ಬಿಟ್ಟು ಅಲ್ಲಿಂದ ನಿರ್ಗಮಿಸಿದರು.

ಇದನ್ನೂಓದಿ: ಬಿಜೆಪಿ ರಾಜ್ಯ ವಕ್ತಾರ, ಮಾಧ್ಯಮದ ಘಟಕ ಪುನಾರಚನೆ ಮಾಡಿದ ಬಿ ವೈ ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.