ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಲಸಿಕೆ ಅಭಿಯಾನ ಮುಂದುವರೆದಿದ್ದು, ಲಸಿಕೆ ವ್ಯರ್ಥವಾಗದಂತೆ ನೋಡಿಕೊಳ್ಳಲಾಗಿದೆ. ಎಂಟು ಜಿಲ್ಲೆಗಳಲ್ಲಿ ಮೈನಸ್ ವೇಸ್ಟೇಜ್ ದಾಖಲಾಗಿದ್ದು, ಲಸಿಕೆ ವ್ಯರ್ಥವಾಗದಂತೆ ಜಿಲ್ಲಾಡಳಿತಗಳು ಎಚ್ಚರ ವಹಿಸಿವೆ.
ಹಾವೇರಿ, ಧಾರಾವಾಡ, ಬೆಂಗಳೂರು, ಮೈಸೂರಿನಲ್ಲಿ ಲಸಿಕೆ ನೀಡಿಕೆ ಉತ್ತಮವಾಗಿದೆ. ಈ ಎಲ್ಲಾ ಜಿಲ್ಲೆಗಳಲ್ಲಿ 10 ಜನರ ಇರುವಿಕೆಯನ್ನು ನೋಡಿಕೊಂಡು ವ್ಯಾಕ್ಸಿನ್ ವಯಲ್ ತೆರೆಯುವ ತಂತ್ರ ಅನುಸರಿಸಿವೆ. ಹೀಗಾಗಿ, ಲಸಿಕೆ ವ್ಯರ್ಥವಾಗದಂತೆ ಕ್ರಮಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ಒಂದು ವಯಲ್‌ಗೆ ಒಂದು ಡೋಸ್ ಲಸಿಕೆ ವ್ಯರ್ಥ ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ಜಿಲ್ಲೆಗಳಲ್ಲಿ ವ್ಯರ್ಥ ಎಂದು ಪರಿಗಣಿಸುವ ಡೋಸ್‌ಗಳನ್ನೂ ಬಳಕೆ ಮಾಡಲಾಗಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಲಸಿಕೆ ವ್ಯರ್ಥ ಮಾಡಿರುವುದರಲ್ಲಿ ಬಾಗಲಕೋಟೆ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಇದುವರೆಗೆ ಬಾಗಲಕೋಟೆಯಲ್ಲಿ ಶೇ. 12.6 ರಷ್ಟು ಲಸಿಕೆ ವ್ಯರ್ಥವಾಗಿದೆ.
ಲಸಿಕೆ ಕಡಿಮೆ ವ್ಯರ್ಥವಾಗಿರುವ ಜಿಲ್ಲೆಗಳು (ಶೇಖಡವಾರು)
ಕ್ರ.ಸಂ | ಜಿಲ್ಲೆ | ಡೋಸ್ | ಲಸಿಕೆ ವ್ಯರ್ಥ ( ಶೇ.) |
1 | ಮೈಸೂರು | -497 | -0.1 |
2 | ಬಿಬಿಎಂಪಿ | -33,785 | -1.2 |
3 | ಕೊಡಗು | -1,285 | -1.3 |
4 | ಬೆಳಗಾವಿ | -7,139 | -1.7 |
5 | ಚಿಕ್ಕಮಗಳೂರು | -3,776 | -2.5 |
6 | ಉತ್ತರ ಕನ್ನಡ | -6,381 | -3.6 |
7 | ಹಾವೇರಿ | -5,156 | -4.1 |
8 | ಧಾರವಾಡ | -8,786 | -4.2 |