ETV Bharat / state

ಶಿರಹಟ್ಟಿ ಬಿಜೆಪಿ ಅಭ್ಯರ್ಥಿಗೆ ಬಿ ಫಾರಂ ನೀಡಲು ಕಾನೂನು ತೊಡಕು: ತನಗೇ ಟಿಕೆಟ್ ಕೊಡುವಂತೆ ಹಾಲಿ ಶಾಸಕ ಪಟ್ಟು - ಈಟಿವಿ ಭಾರತ ಕರ್ನಾಟಕ

ಸರ್ಕಾರಿ ವೈದ್ಯ ಆಗಿರುವ ಬಿಜೆಪಿ ಅಭ್ಯರ್ಥಿ ಡಾ. ಚಂದ್ರು ಲಮಾಣಿ ವಿರುದ್ಧ ಭ್ರಷ್ಟಾಚಾರ ಆರೋಪದ ಮೇಲೆ ತನಿಖೆ ಬಾಕಿ ಇದ್ದು, ಅವರ ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ.

Etv Bharatlegal-problem-in-issuing-b-form-to-the-bjp-candidate-dr-chandru-lamani
ಶಿರಹಟ್ಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ಬಿ ಫಾರಂ ನೀಡಲು ಕಾನೂನು ತೊಡಕು
author img

By

Published : Apr 15, 2023, 3:53 PM IST

ಬೆಂಗಳೂರು: ಶಿರಹಟ್ಟಿ ಮೀಸಲು ಕ್ಷೇತ್ರದ ಅಭ್ಯರ್ಥಿ ಡಾ. ಚಂದ್ರು ಲಮಾಣಿ ಬಿ ಫಾರಂ ನೀಡಲು ಕಾನೂನು ತೊಡಕು ಎದುರಾಗಿದೆ. ಸರ್ಕಾರಿ ವೈದ್ಯ ಆಗಿರುವ ಡಾ.ಚಂದ್ರು ಲಮಾಣಿ ಮೇಲೆ 2019 ರಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಲೋಕಾಯುಕ್ತ ದಾಳಿ ಆಗಿತ್ತು. ಇಲಾಖಾ ಹಂತದಲ್ಲಿ ಚಂದ್ರು ವಿರುದ್ಧ ತನಿಖೆ ಬಾಕಿ ಇದೆ. ತಾಂತ್ರಿಕ ಕಾರಣದಿಂದ ಇನ್ನೂ ರಾಜೀನಾಮೆ ಅಂಗೀಕಾರ ಆಗಿಲ್ಲ. ಈ ಕಾರಣಕ್ಕೆ ಡಾ. ಚಂದ್ರು ಲಮಾಣಿಗೆ ಬಿ ಫಾರಂ ನೀಡಲು ಸಾಧ್ಯವಾಗುತ್ತಿಲ್ಲ.

ಇತ್ತ ಶಿರಹಟ್ಟಿ ಬಿಜೆಪಿ ಅಭ್ಯರ್ಥಿ ಡಾ.ಚಂದ್ರು ಲಮಾಣಿ ವಿರುದ್ಧ ಹಾಲಿ ಶಾಸಕ ರಾಮಪ್ಪ ಲಮಾಣಿ ದೂರು ನೀಡಿದ್ದಾರೆ. ಚಂದ್ರು ಲಮಾಣಿ ವಿರುದ್ಧ ಸಾಕಷ್ಟು ಆರೋಪಗಳಿವೆ. ಅವರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಈ ಹಿನ್ನೆಲೆಯಲ್ಲಿ ತಮಗೆ ಟಿಕೆಟ್ ಕೊಡುವಂತೆ ಶಾಸಕ ರಾಮಪ್ಪ ಲಮಾಣಿ ಆಗ್ರಹಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ದೂರು ಕೊಟ್ಟಿದ್ದಾರೆ. ಇಂದು ಬಿಜೆಪಿ ಕಚೇರಿಗೆ ಆಗಮಿಸಿ ಈ ದೂರು ಕೊಟ್ಟಿದ್ದಾರೆ.

ಚಂದ್ರು ಲಮಾಣಿ ಒಬ್ಬ ವೈದ್ಯರು, ಅವರು ನಮ್ಮ ತಾಲೂಕಿನವರಲ್ಲ. ಮೂರು ತಿಂಗಳಷ್ಟೇ ಆಯ್ತು ಅವರು ಬಂದು, ಅವರ ರಾಜೀನಾಮೆ ಅಂಗೀಕಾರ ಆಗಿಲ್ಲ. ಅವರ ಮೇಲೆ ಲೋಕಾಯುಕ್ತ ಕೇಸ್ ಇದೆ. ನಾನು ಸಿಎಂ, ಕಟೀಲ್, ಸಂತೋಷ್​ರಿಗೆ ದೂರು ಕೊಟ್ಟಿದ್ದೇನೆ. ಎಲ್ಲ ಸರಿಪಡಿಸ್ತೀವಿ ಅಂದಿದ್ದಾರೆ ನಾಯಕರು. ಅವರ ರಾಜೀನಾಮೆ ಸದ್ಯಕ್ಕೆ ಅಂಗೀಕಾರ ಆಗಲ್ಲ. ಸಿಎಂ ಎರಡು ದಿನ ಸಮಯ ಪಡೆದಿದ್ದಾರೆ, ಸರಿಪಡಿಸ್ತೀವಿ ಅಂದಿದ್ದಾರೆ. ನನಗೇ ಟಿಕೆಟ್ ಕೊಡುವ ನಿರೀಕ್ಷೆ ಇದೆ ಎಂದು ರಾಮಪ್ಪ ಲಮಾಣಿ ವಿಶ್ವಾಸ ವ್ಯಕ್ತಪಡಿಸಿದರು.

ನನಗೆ ಟಿಕೆಟ್ ಕೊಡದಿದ್ರೆ ಕ್ಷೇತ್ರ ಕಳೆದುಕೊಳ್ಳಬೇಕಾಗುತ್ತೆ. ಟಿಕೆಟ್ ಕೊಡದಿದ್ರೆ ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ನಿರ್ಧಾರ ತಗೋತೇನೆ. ಚಂದ್ರುಗೆ ಟಿಕೆಟ್ ಕೊಟ್ಟಿರೋದ್ರಿಂದ ಮೂರು ತಾಲ್ಲೂಕಿನ ಜನ ಬೇಸರಗೊಂಡಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ:ಲಂಚ ಪ್ರಕರಣ: ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಮಂಜೂರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.