ETV Bharat / state

ಆನೇಕಲ್ ನ್ಯಾಯಾಲಯದ ಎದುರು ವಕೀಲರ ಸಂರಕ್ಷಣಾ ಕಾಯ್ದೆಗೆ ಒತ್ತಾಯಿಸಿ ಪ್ರತಿಭಟನೆ - ETv Bharat kannada news

ಆನೇಕಲ್ ನ್ಯಾಯಾಲಯದ ಮುಂಭಾಗ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ವಕೀಲರು ಪ್ರತಿಭಟನೆಯನ್ನ ನಡೆಸಿದರು.

Lawyers protest
ವಕೀಲರು ಪ್ರತಿಭಟನೆ
author img

By

Published : Dec 19, 2022, 5:34 PM IST

ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಆನೇಕಲ್ ವಕೀಲರು ಪ್ರತಿಭಟನೆಯನ್ನ ನಡೆಸಿದರು.

ಆನೇಕಲ್ (ಬೆಂಗಳೂರು): ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿ ಆನೇಕಲ್ ನ್ಯಾಯಾಲಯದ ಮುಂಭಾಗ ಆನೇಕಲ್ ವಕೀಲರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ನೂರಾರು ಮಂದಿ ವಕೀಲರು ಭಾಗಿಯಾಗಿದ್ದರು. ವಕೀಲರ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ವಕೀಲರ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದೆ ಎಂದು ಕಾಯ್ದೆಗಾಗಿ ಒತ್ತಾಯಿಸಿದರು.

ಕಾನೂನು ಸಚಿವ ಮಾಧುಸ್ವಾಮಿ ವಕೀಲರಿಗೆ ಸಂರಕ್ಷಣಾ ಕಾಯ್ದೆ ಬೇಕಾಗಿಲ್ಲ ಎನ್ನುವಂತಹ ಹೇಳಿಕೆಗಳನ್ನು ನೀಡಿರುವುದು ಸರಿಯಲ್ಲ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆಯನ್ನು ಮಂಡನೆ ಮಾಡಿ ಕಾರ್ಯರೂಪಕ್ಕೆ ತರಬೇಕು. ವಕೀಲರ ಮೇಲೆ, ಹಲ್ಲೆ, ಕೊಲೆ ಬೆದರಿಕೆ ಹೀಗೆ ಅನೇಕ ದೌರ್ಜನ್ಯ ದಿನನಿತ್ಯ ನಡೆಯುತ್ತಲೇ ಇದೆ. ಆದ್ದರಿಂದ ಕಾಯ್ದೆಯನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸದೆ ಇದರೇ ರಾಜ್ಯಾದ್ಯಂತ ಎಲ್ಲಾ ವಕೀಲರು ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎನ್ನುವ ಎಚ್ಚರಿಕೆ ರವಾನಿಸಿದರು.

ಇದನ್ನೂ ಓದಿ : ಕರ್ನಾಟಕ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗಾಗಿ ವಕೀಲರಿಂದ ಧರಣಿ ಸತ್ಯಾಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.