ETV Bharat / state

ಹೃದಯ ಪರೀಕ್ಷೆಗಾಗಿ ಮನೆ ಬಾಗಿಲಿಗೆ ಮೊಬೈಲ್ ವಾಹನ ವ್ಯವಸ್ಥೆ ಲೋಕಾರ್ಪಣೆ - Vehicle System for Heart problems check

ಪೋರ್ಟಿಸ್ ಆಸ್ಪತ್ರೆಯ 15 ವರ್ಷಗಳ ವಾರ್ಷಿಕೋತ್ಸವದ ಅಂಗವಾಗಿ "ರೂಟ್‌ನಂ-15" ಎಂಬ ಶೀರ್ಷಿಕೆಯಡಿ, ಹಾರ್ಟ್‌ ಚೆಕಪ್‌ ಮೊಬೈಲ್‌ ವ್ಯಾನ್‌ನನ್ನು ಪೋರ್ಟೀಸ್ ಆಸ್ಪತ್ರೆಯ ಕಾರ್ಡಿಯಾಕ್‌ ವಿಭಾಗದ ಮುಖ್ಯಸ್ಥ ಡಾ.ವಿವೇಕ್ ಜವಳಿ ಅವರು ಉದ್ಘಾಟಿಸಿದರು.

launch of Mobile Vehicle System for Heart problems check
ಹೃದಯ ಪರೀಕ್ಷೆಗಾಗಿ ಮನೆ ಬಾಗಿಲಿಗೆ ಮೊಬೈಲ್ ವಾಹನ ವ್ಯವಸ್ಥೆ ಲೋಕಾರ್ಪಣೆ
author img

By

Published : Sep 30, 2021, 5:11 PM IST

ಆನೇಕಲ್: ಬೆಂಗಳೂರು-ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿನ ಫೋರ್ಟಿಸ್ ಆಸ್ಪತ್ರೆಯಿಂದ ಮನೆ ಬಾಗಿಲಿಗೆ ಹೃದಯ ತಪಾಸಣೆ ನಡೆಸುವ ಮೊಬೈಲ್ (ಆಂಬ್ಯುಲೆನ್ಸ್) ವಾಹನವನ್ನು ಡಾ. ವಿವೇಕ್ ಜವಳಿ ಲೋಕಾರ್ಪಣೆಗೊಳಿಸಿದ್ದಾರೆ.

ಒತ್ತಡಗಳ ಹಾಗು ಸಂಚಾರ ದಟ್ಟಣೆಯ ಗೋಜಿಲ್ಲದೆ ಒಂದು ಕರೆಯಲ್ಲಿ ಮನೆ ಬಾಗಿಲಿಗೆ ಇಂತಹ ಸೇವೆಯನ್ನು 'ವಿಶ್ವ ಹೃದಯ ದಿನ' ದಂದೇ ಚಾಲನೆಗೊಂಡಿದೆ. ಇದರಿಂದ ಆಸ್ಪತ್ರೆಗೆ ತೆರಳಿ ಹೃದಯ ಪರೀಕ್ಷೆ ಮಾಡಿಸಲು ಹೆದರುವ ಮಂದಿ ಸಾವಕಾಶವಾಗಿ ಈ ಸೇವೆಯನ್ನು ಪಡೆಯಬಹುದಾಗಿದೆ.

ಪೋರ್ಟಿಸ್ ಆಸ್ಪತ್ರೆಯ 15 ವರ್ಷಗಳ ವಾರ್ಷಿಕೋತ್ಸವದ ಅಂಗವಾಗಿ "ರೂಟ್‌ನಂ-15" ಎಂಬ ಶೀರ್ಷಿಕೆಯಡಿ, ಹಾರ್ಟ್‌ ಚೆಕಪ್‌ ಮೊಬೈಲ್‌ ವ್ಯಾನ್‌ನನ್ನು ಪೋರ್ಟೀಸ್ ಆಸ್ಪತ್ರೆಯ ಕಾರ್ಡಿಯಾಕ್‌ ವಿಭಾಗದ ಮುಖ್ಯಸ್ಥ ಡಾ.ವಿವೇಕ್ ಜವಳಿ ಅವರು ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷ ವಿಶ್ವದಲ್ಲಿ 2 ಕೋಟಿಗೂ ಅಧಿಕ ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಭಾರತದಲ್ಲಿಯೇ ಶೇ.60 ರಷ್ಟು ಪ್ರಮಾಣ ಇರುವುದು ಆತಂಕಕಾರಿ. ಬಹುತೇಕರಿಗೆ ಹೃದಯಾಘಾತದ‌ ಬಗ್ಗೆ ಅರಿವಿನ ಕೊರತೆಯಿಂದ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲವಾದ್ದರಿಂದ ಹೃದಯಾಘಾತ ಪ್ರಮಾಣ ಹೆಚ್ಚಾಗಿದೆ. ಜೊತೆಗೆ ಬದಲಾದ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಲೂ ಹೃದಯಾಘಾತದ ಪ್ರಮಾಣ ಹೆಚ್ಚಳವಾಗಿದೆ‌. ಅದರಲ್ಲೂ ಶೇ.25 ರಷ್ಟು ಮಹಿಳೆಯರಲ್ಲಿ ಹೆಚ್ಚಳವಾಗುತ್ತಿದೆ.

ಹೃದಯ ಪರೀಕ್ಷೆಗಾಗಿ ಮನೆ ಬಾಗಿಲಿಗೆ ಮೊಬೈಲ್ ವಾಹನ ವ್ಯವಸ್ಥೆ ಲೋಕಾರ್ಪಣೆ

ಹೀಗಾಗಿ ನಮ್ಮ ಆಸ್ಪತ್ರೆ ವತಿಯಿಂದ ಈ ವಾಹನ ಸಂಚರಿಸಲಿದೆ. ವಾರದ ಎಲ್ಲಾ ದಿನ ಈ ವಾಹನ ನಗರದ ಅಪಾರ್ಟ್‌ಮೆಂಟ್, ಎಲ್ಲಾ ರೆಸಿಡೆನ್ಸಿಯಲ್‌ ಪ್ರದೇಶದಲ್ಲಿ ಓಡಾಡಲಿದೆ ಎಂದು ಮಾಹಿತಿ ನೀಡಿದರು.

ವಾಹನದಲ್ಲಿ ಏನಿರಲಿದೆ? :

ಈ ವಾಹನದಲ್ಲಿಯೇ ಎಕೋಕಾರ್ಡಿಯೋಗ್ರಫಿ ಹಾಗು ಇಸಿಜಿ ಯಂತ್ರವನ್ನು ಅಳವಡಿಸಲಾಗಿದೆ. ಹೀಗಾಗಿ ಹೃದಯದ ಸಂಪೂರ್ಣ ಪರೀಕ್ಷೆ ವಾಹನದಲ್ಲಿಯೇ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಈ ವಾಹನದಲ್ಲಿ 1500 ಜನರ ತಪಾಸಣೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.