ಬೆಂಗಳೂರು: ಕಳೆದ ವರ್ಷ ಮಾಡಿದ ಬ್ಯಾರಿಕೇಡ್ ಮತ್ತು ಸ್ಯಾನಿಟೈಸೇಷನ್ ಬಿಲ್ನ್ನು ಸರ್ಕಾರ ಈವರೆಗೂ ನೀಡಿಲ್ಲವೆಂದು ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿಯ ವಿವಿಧ ವಲಯಗಳಲ್ಲಿ ಕೋವಿಡ್ ತಡೆಗಟ್ಟಲು ಆಟೋ ಪವರ್ ಸ್ಪ್ರೇ ಮತ್ತು ಪೆಟ್ರೋಲ್ ಚಾಲಿತ ಹ್ಯಾಂಡ್ ಪಂಪ್, ಕಂಟೈನ್ಮೆಂಟ್ ಮಾಡಲು ಬ್ಯಾರಿಕೇಡ್ ಸೇರಿದಂತೆ ವಿವಿಧ ಹಂತದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದ ಸಿಬ್ಬಂದಿಗೆ 2020ರ ಏಪ್ರಿಲ್‌ನಿಂದ 2021ರ ಜನವರಿಯವರೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಗುತ್ತಿಗೆದಾರರು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಕೊರೊನಾ ಸೋಂಕು ಹೆಚ್ಚಿದ್ದರೂ ಪ್ರಾಣ ಭಯ ಬಿಟ್ಟು ಕೆಲಸ ಮಾಡಿದ್ದೇವೆ. ಬಿಬಿಎಂಪಿ ಈಗ ಹಣ ಬಿಡಿಗಡೆ ಮಾಡದೆ ಮೋಸ ಮಾಡ್ತಿದೆ. ಪ್ರತೀ ವಾರ್ಡ್ಗಳಲ್ಲೂ 3-4 ಕೋಟಿ ರೂಪಾಯಿ ಬಿಲ್ ಬಾಕಿ ಇದೆ ಎಂದು ಆರೋಪಿಸಿದರು.
ಇದೀಗ ಗುತ್ತಿಗೆದಾರರು ಆರ್ಥಿಕ ಸಂಕಷ್ಟದಲ್ಲಿದ್ದು, ಆಟೋ ಬಾಡಿಗೆ, ಪೆಟ್ರೋಲ್ ಮತ್ತು ಡೀಸೆಲ್ ಸೇರಿದಂತೆ ಅನೇಕ ಖರ್ಚಿಗೆ ಸಾಲ ಮಾಡಿದ್ದೇವೆ. ಶೀಘ್ರ ಬಾಕಿ ಬಿಲ್ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.