ETV Bharat / state

ಲೈಫ್ ಸೈನ್ಸ್ ಪಾರ್ಕ್​​ಗೆ ನಾಳೆ ಭೂಮಿ ಪೂಜೆ: ₹ 5,000 ಕೋಟಿ ಹೂಡಿಕೆ ನಿರೀಕ್ಷೆ - Life Science Park

ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಾಳೆ ಲೈಫ್ ಸೈನ್ಸ್ ಪಾರ್ಕ್​​ಗೆ ಭೂಮಿ‌ ಪೂಜೆ‌ ನಡೆಯಲಿದ್ದು, ಸುಮಾರು 5,000 ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ‌ನಾರಾಯಣ್ ತಿಳಿಸಿದರು.

Ashwath Narayan
ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ‌ನಾರಾಯಣ್ ಸುದ್ದಿಗೋಷ್ಠಿ
author img

By

Published : Jul 28, 2020, 4:30 PM IST

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಸಹಯೋಗದಲ್ಲಿ ಲೈಫ್ ಸೈನ್ಸ್ ಪಾರ್ಕ್​​ಗೆ ನಾಳೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಭೂಮಿ‌ ಪೂಜೆ‌ ನಡೆಯಲಿದ್ದು, ಸುಮಾರು 5,000 ಕೋಟಿ ರೂ. ಹೂಡಿಕೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ‌ನಾರಾಯಣ್ ತಿಳಿಸಿದರು.

ವಿಧಾನಸೌಧದಲ್ಲಿ ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 52 ಎಕರೆ ಪ್ರದೇಶದಲ್ಲಿ ಬಯೋ ಟೆಕ್ನಾಲಜಿ ಪಾರ್ಕ್ ತಲೆ ಎತ್ತಲಿದೆ. 20 ವರ್ಷಗಳಿಂದ ಈ ಪಾರ್ಕ್​​ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ‌. ಐಟಿ-ಬಿಟಿ ಇಲಾಖೆಯಿಂದ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು‌ ಸಾಕಾರ ಮಾಡುತ್ತಿದ್ದೇವೆ ಎಂದರು.

20 ವರ್ಷಗಳ ಕನಸಿದು. ಇವತ್ತಿನ ಆರ್ಥಿಕ‌ ಮುಗ್ಗಟ್ಟಿನ ಹಿನ್ನೆಲೆಯಲ್ಲೂ ಈ ಯೋಜ‌ನೆ ಸಾಕಾರ ಮಾಡಲು ಸಾಕಷ್ಟು ಕಾರಣಗಳಿವೆ. ಮಾಹಿತಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನಲ್ಲಿ ಬಯೋ ಪಾರ್ಕ್​​ಗೆ ಸಾಕಷ್ಟು ಬೇಡಿಕೆಯಿದೆ. ಈ ಪಾರ್ಕ್​ನಿಂದ ಸಾಕಷ್ಟು ನಿರೀಕ್ಷೆ ಇದೆ ಎಂದರು.

ಉಪಮುಖ್ಯಮಂತ್ರಿ ಡಾ. ಅಶ್ವತ್ಥ್ ‌ನಾರಾಯಣ್ ಸುದ್ದಿಗೋಷ್ಠಿ

ಆರ್ಥಿಕ ಏಳಿಗೆ ಮತ್ತು ಗುಣಮಟ್ಟದ ಜೀವನಕ್ಕೆ ಬಯೋ ತಂತ್ರಜ್ಞಾನ ದೊಡ್ಡ ಕೊಡುಗೆ ನೀಡಲಿದೆ. ಕೃಷಿ ಕ್ಷೇತ್ರದ ಜತೆಗೆ ಬಯೋ ಮೆಡಿಸಿನ್ ವಲಯದಲ್ಲೂ ಈ ಪಾರ್ಕ್ ದೊಡ್ಡ ಕೊಡುಗೆ ನೀಡಲಿದೆ. ಖಾಸಗಿ ಕಂಪನಿಗಳ ಜತೆ ರಾಜ್ಯ ಸರ್ಕಾರ ಮಾನ್ಯತೆ ನೀಡಿರುವ 34 ಕಂಪನಿಗಳು ಈ ಪಾರ್ಕ್​​ನಲ್ಲಿ ಕೆಲಸ ಮಾಡಲಿವೆ. ಅಂದಾಜು 5 ಸಾವಿರ ಕೋಟಿ ರೂ. ಇಲ್ಲಿ ಬಂಡಾಳ‌ ಹೂಡಿಕೆ ಆಗಲಿದೆ. ಸುಮಾರು 50,000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ವಿವರಿಸಿದರು.

ಈ ಪಾರ್ಕ್​​ನಲ್ಲಿ ಪ್ರಥಮ ಹಂತದ 10 ಲಕ್ಷ ಚದರಡಿ ಪ್ರದೇಶದಲ್ಲಿ ಮೊದಲ ಕಟ್ಟಡ ನಿರ್ಮಾಣವಾಗಲಿದೆ. 2020ಗೆ ಕಟ್ಟಡ ಕಾಮಗಾರಿ‌ ಪೂರ್ಣಗೊಳ್ಳಲಿದೆ. ಸುಮಾರು 150 ಕಂಪನಿಗಳು ಈ ಪಾರ್ಕ್‌ನಲ್ಲಿ ಕಾರ್ಯಾರಂಭಿಸಲಿದೆ. ಒಟ್ಟು ಜಾಗದ ಪೈಕಿ ಶೇ 60ರಷ್ಟು ಆಫ್ ಬಯೋ ಟೆಕ್ನಾಲಜಿ ಸಂಸ್ಥೆಗೆ ಮೀಸಲಿಡಲಾಗುವುದು. ಉಳಿದ 40% ವಾಣಿಜ್ಯ ಉದ್ದೇಶಕ್ಕೆ ಬಳಸಬಹುದಾಗಿದೆ. ಭೂಮಿಯನ್ನು 64 ವರ್ಷ ಲೀಸ್​ಗೆ ಕೊಡಲಾಗುವುದು ಎಂದು ತಿಳಿಸಿದರು.

'20 ವರ್ಷದ ಕನಸು ನನಸಾಗಿದೆ':

ಇದೇ ವೇಳೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಕಿರಣ್ ಮಜುಂದಾರ್, 20 ವರ್ಷಗಳ ಸತತ ಪ್ರಯತ್ನದ ಬಳಿಕ ಲೈಫ್ ಸೈನ್ಸ್​​ಪಾರ್ಕ್ ಆರಂಭಗೊಳ್ಳುತ್ತಿರುವುದು ಖುಷಿ ತಂದಿದೆ ಎಂದು ತಿಳಿಸಿದರು.

ಬೆಂಗಳೂರು ನಾವಿನ್ಯತೆಯಲ್ಲಿ ಈಗಲೇ ಮುಂಚೂಣಿಯಲ್ಲಿರುವ ನಗರವಾಗಿದೆ. ಈ ಪಾರ್ಕ್ ಮೂಲಕ ಬಿಟಿ ಕ್ಷೇತ್ರದಲ್ಲಿ ಹಲವು ನಾವಿನ್ಯತೆಗಳು ಹೊರ ಹೊಮ್ಮಲಿದೆ. ಆ ಮೂಲಕ ಬೆಂಗಳೂರು ಐಟಿ ಸಿಟಿ‌ ಖ್ಯಾತಿಯ ಜೊತೆಗೆ ಬಿಟಿ ಸಿಟಿ ಎಂಬ ಹೆಗ್ಗಳಿಕೆಯನ್ನೂ ಪಡೆಯಲಿದೆ ಎಂದು ವಿವರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.