ETV Bharat / state

ಭೂ ಸುಧಾರಣೆ ಕಾಯ್ದೆ ಹಿನ್ನೆಲೆ : ನಾಳೆಯೂ ಮುಂದವರೆಯಲಿರುವ ರೈತರ ಪ್ರತಿಭಟನೆ - ಭೂ ಸುಧಾರಣೆ ಕಾಯ್ದೆ ಲೇಟೆಸ್ಟ್​ ನ್ಯೂಸ್

ಮೆಜೆಸ್ಟಿಕ್​ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ರಾಜಭವನವರೆಗೆ ಪಾದಯಾತ್ರೆ ಮೂಲಕ ತೆರಳಿ ಅದನ್ನು ಮುತ್ತಿಗೆ ಹಾಕಲಿದ್ದೇವೆ. ಭೂ ಸುಧಾರಣೆ ಕಾಯ್ದೆಯಲ್ಲಿ17/ಎ/ಬಿ ಯನ್ನು ತೆಗೆದು ಹಾಕಿದರೆ ಆ ಕಾಯ್ದೆಯನ್ನು ಕಸಕ್ಕೆ ಎಸೆಯೋದು ಸೂಕ್ತ..

ರೈತರ ಪ್ರತಿಭಟನೆ
farmers protest
author img

By

Published : Dec 9, 2020, 8:14 PM IST

ಬೆಂಗಳೂರು : ಭೂ ಸುಧಾರಣಾ ಕಾಯ್ದೆ ವಿರೋಧಿಸಿ ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟ ಸಮಿತಿ ಕಾರ್ಯಕರ್ತರು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಹೋರಾಟಗಾರ ಪ್ರಕಾಶ್, ನಾಳೆ ಕರ್ನಾಟಕ ವಿಧಾನಸಭೆ ಅಧಿವೇಶನ ಮುಕ್ತಾಯಗೊಳ್ಳುತ್ತಿದೆ. ರೈತರಿಗೆ ಮಾರಕವಾಗಿರುವಂತಹ ಮೂರು ಕಾಯ್ದೆಗಳು ಜಾರಿಯಾಗಬಾರದು ಎಂಬುದು ನಮ್ಮ ಆಗ್ರಹವಾಗಿತ್ತು.

ನಿನ್ನೆ ಭೂಸುಧಾರಣಾ ಕಾಯ್ದೆ ಅಂತಿಮವಾಗಿ ಅನುಮೋದನೆ ಹಂತಕ್ಕೆ ಬಂದಿದೆ. ಬಿಜೆಪಿ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ. ಇದನ್ನು ಐಕ್ಯ ಹೋರಾಟ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ ಎಂದರು. ನಾಳೆ ಅಧಿವೇಶನದ ಅಂತಿಮ ದಿನವಾಗಿರುವುದರಿಂದ ನಾವು ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದೇವೆ.

ಮೆಜೆಸ್ಟಿಕ್​ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ರಾಜಭವನವರೆಗೆ ಪಾದಯಾತ್ರೆ ಮೂಲಕ ತೆರಳಿ ಅದನ್ನು ಮುತ್ತಿಗೆ ಹಾಕಲಿದ್ದೇವೆ. ಭೂ ಸುಧಾರಣೆ ಕಾಯ್ದೆಯಲ್ಲಿ17/ಎ/ಬಿ ಯನ್ನು ತೆಗೆದು ಹಾಕಿದರೆ ಆ ಕಾಯ್ದೆಯನ್ನು ಕಸಕ್ಕೆ ಎಸೆಯೋದು ಸೂಕ್ತ.

ಕಳೆದ ಬಾರಿ ಕೆಳ ಮನೆಯಲ್ಲಿ ಭೂ ಸುಧಾರಣೆ ಕಾಯ್ದೆಯನ್ನು ಪಾಸ್ ಮಾಡಿಕೊಂಡಿದ್ದೆವು. ನಾವು ಮೇಲ್ಮೆನೆಯಲ್ಲಿ ಈ ಕಾಯ್ದೆ ಪಾಸ್ ಆಗೋದಕ್ಕೆ ಬಿಡೋದಿಲ್ಲ ಎಂದಿದ್ದರು. ಆದರೆ, ಜೆಡಿಎಸ್ ಮಾಡಿದ್ದೇನು ಎಂದು ಪ್ರಶ್ನಿಸಿದರು.

ಬಳಿಕ ಬಡಗಲಪುರ ನಾಗೇಂದ್ರ ಮಾತನಾಡಿ, ಯಡಿಯೂರಪ್ಪ ಕೊನೆಗೂ ರೈತ ವಂಶಕ್ಕೆ ವಿಷ ಹಾಕಿ ಬಿಟ್ಟರು. ನಮಗೆ ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿತ್ತು. ರೈತರ ವಂಶವನ್ನೇ ನಿರ್ನಾಮ ಮಾಡುವ ಕೆಲಸ ಮಾಡಿ ರೈತರ ಪರ ಇದ್ದೇವೆ ಅಂತಿದ್ದಾರೆ ಎಂದು ಸಿಎಂ ವಿರುದ್ಧ ಹರಿಹಾಯ್ದರು.

ಇದು ಇನ್ವೆಸ್ಟ್ಮೆಂಟ್ ಸರ್ಕಾರ. ಹಾಗಾಗಿ ಯಾರು ಬಂಡವಾಳ ಹಾಕಿದರೋ ಅವರಿಗಾಗಿ ಕೆಲಸ ಮಾಡೋ ಸರ್ಕಾರವಾಗಿದೆ. 7 ರಿಂದ 15ರವರೆಗೂ ನಡೆಯಬೇಕಿದ್ದ ಅಧಿವೇಶನವನ್ನು ನಾಳೆಗೆ ಮೊಟಕುಗೊಳಿಸುತ್ತಿದ್ದಾರೆ. ಕಿಕ್ ಬ್ಯಾಕ್ ಕೊಟ್ಟಿರುವವರಿಗೆ ಅನುಕೂಲ ಮಾಡಿಕೊಡಲು ಆತರದಲ್ಲಿ ಬಿಲ್ ಪಾಸ್ ಮಾಡಿಸಿಕೊಂಡಿದ್ದಾರೆ.

ಕಾವೇರಿ, ಕೃಷ್ಣ ನದಿ ‌ಮೇಲೆ ಆಣೆ ಮಾಡಿ ಮುಖ್ಯಮಂತ್ರಿಯಾದ್ರು ಯಡಿಯೂರಪ್ಪ. ಜೆಡಿಎಸ್​​ನವರು ಮಣ್ಣಿನ ಮಕ್ಕಳು ಅಂತಾರೆ. ಇವರಿಬ್ಬರು ಸೇರಿ ರೈತರನ್ನು ‌ಬೀದಿಗೆ ತಂದಿದ್ದಾರೆ ಎಂದು ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದರು.

ಇನ್ನೂ ಇವರನ್ನು ಏನು ಕೇಳೋದಕ್ಕೆ ಆಗೋದಿಲ್ಲ. ನಾವು ರಾಜ್ಯಪಾಲರ ಬಳಿಯೇ ಹೋಗಬೇಕು. ಹಾಗಾಗಿ ಈ ಬಿಲ್​​ಗೆ ಸಹಿ ಹಾಕಬೇಡಿ ಎಂದು ಮನವಿ ಮಾಡ್ತಾ, ನಾಳೆ ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದೇವೆ.

ನಾಳೆ ಕರ್ನಾಟಕ ವಿಧಾನಸಭೆಯ ಅಧಿವೇಶನ ಮುಕ್ತಾಯಗೊಳ್ಳುತ್ತಿದೆ. ನಾಳೆ ಅಧಿವೇಶನದ ಅಂತಿಮ ದಿನವಾಗಿರೋದರಿಂದ ನಾವು ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.