ETV Bharat / state

15 ದಿನದೊಳಗೆ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ: ಲಕ್ಷ್ಮಣ ಸವದಿ

ನೌಕರ ವರ್ಗಕ್ಕೆ ಸರ್ಕಾರದ ಮೇಲೆ ಹಾಗೂ ಸರ್ಕಾರಕ್ಕೆ ನೌಕರ ವರ್ಗದ ಮೇಲೆ ಭರವಸೆ ಇದೆ. ಒಂದು ಕುಟುಂಬದಂತೆ ನಾವಿದ್ದೇವೆ. ಮಧ್ಯದಲ್ಲಿ ಯಾರೋ ಬಂದು ಆತಂಕ ಹುಟ್ಟಿಸುವ ಪ್ರಯತ್ನ ಮಾಡುವುದು ಬೇಡ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ‌ ಸವದಿ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

Lakshman savadi
ಸಚಿವ ಲಕ್ಷ್ಮಣ್ ಸವದಿ
author img

By

Published : Feb 2, 2021, 3:01 PM IST

Updated : Feb 2, 2021, 3:10 PM IST

ಬೆಂಗಳೂರು: ಇನ್ನು 15 ದಿನಗಳಲ್ಲಿ ಸಾರಿಗೆ ನೌಕರರ ಪ್ರಮುಖ 3 ಬೇಡಿಕೆ ಈಡೇರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾರಿಗೆ ನೌಕರರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಅವರ 10 ಬೇಡಿಕೆಗಳ ಪೈಕಿ 9ಕ್ಕೆ ಸಹಮತ ಕೊಟ್ಟಿದ್ದೆವು. ಇದರಲ್ಲಿ ತರಬೇತಿ ಅವಧಿ 2ರಿಂದ 1 ವರ್ಷಕ್ಕೆ ಇಳಿಸಲು ಒಪ್ಪಿದ್ದೆವು. ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ಒಪ್ಪಿಗೆ ನೀಡಲಾಗಿತ್ತು. ಇದೀಗ ಬೇಡಿಕೆ ತ್ವರಿತವಾಗಿ ಈಡೇರಿಸುವಂತೆ ಸೂಚಿಸಿದ್ದೇನೆ ಎಂದರು.

15 ದಿನದೊಳಗೆ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಸವದಿ ಹೇಳಿಕೆ

ಪ್ರತಿಭಟನೆ ಮಾಡಿದ್ದ ಸಾರಿಗೆ ನೌಕರರನ್ನು ಅಮಾನತು ಮಾಡಿಲ್ಲ, ಅಪರಾಧ ಎಸಗಿದವರನ್ನು ಅಮಾನತು ಮಾಡಿದ್ದೆವು. ಸಾರಿಗೆ ನೌಕರರ ವೇತನ ಕೊಡುತ್ತೇವೆ. ಅರ್ಧ ವೇತನ ಈಗಾಗಲೇ ಕೊಟ್ಟಿದ್ದೇವೆ. ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಡಿಸೆಂಬರ್, ಜನವರಿ 2 ತಿಂಗಳ ವೇತನ ಕೊಡಲು ನಿರ್ಧರಿಸಿದ್ದೇವೆ ಎಂದರು.

ನೌಕರ ವರ್ಗಕ್ಕೆ ಸರ್ಕಾರದ ಮೇಲೆ ಹಾಗೂ ಸರ್ಕಾರಕ್ಕೆ ನೌಕರ ವರ್ಗದ ಮೇಲೆ ಭರವಸೆ ಇದೆ. ಒಂದು ಕುಟುಂಬದಂತೆ ನಾವಿದ್ದೇವೆ. ಮಧ್ಯದಲ್ಲಿ ಯಾರೋ ಬಂದು ಆತಂಕ ಹುಟ್ಟಿಸುವ ಪ್ರಯತ್ನ ಮಾಡುವುದು ಬೇಡ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ‌ ಸವದಿ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದರು.

ನೌಕರರ ಸಂಬಳ ಕಡಿತ ಮಾಡಿಲ್ಲ. ಡಿಸೆಂಬರ್ ತಿಂಗಳ ಅರ್ಧ ಸಂಬಳ ಕೊಟ್ಟಿದ್ದೇವೆ. ಉಳಿದ 15 ದಿನದ ಸಂಬಳ 2-3 ದಿನಗಳಲ್ಲಿ ನೀಡಲಿದ್ದೇವೆ. ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹೇರಿಕೆ ಹಿನ್ನೆಲೆ ಬಸ್ ಟಿಕೆಟ್ ದರ ಹೆಚ್ಚಳ ಆಗಲ್ಲ. ಬಸ್ ಟಿಕೆಟ್ ದರ ಹೆಚ್ಚಳ ಬಗ್ಗೆ ಚಿಂತನೆ ಇಲ್ಲ. ಟಿಕೆಟ್ ದರ ಪ್ರಸ್ತಾವನೆಯೂ ನಮ್ಮ‌ ಮುಂದೆ ಇಲ್ಲ ಎಂದರು.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಬರಬೇಕಿರುವ ಜಿಎಸ್​ಟಿ ಹಣದಲ್ಲಿ 1,500 ಕೋಟಿ ಕಡಿತ : ಬೊಮ್ಮಾಯಿ

Last Updated : Feb 2, 2021, 3:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.