ETV Bharat / state

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆ: ಆರೋಗ್ಯ ಸಚಿವರಿಗೆ ಫನಾ ತುರ್ತು ಪತ್ರ

ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆ ಕಂಡು ಬಂದಿದ್ದು, ಈ ಬಗ್ಗೆ ಫನಾ ಸಂಘವು ಆರೋಗ್ಯ ಸಚಿವರಿಗೆ ತುರ್ತು ಪತ್ರ ಬರೆದಿದೆ.

Lack of oxygen cylinder; Fana Association wrote an emergency letter to the Health Minister
ಸಾಂದರ್ಭಿಕ ಚಿತ್ರ
author img

By

Published : Apr 17, 2021, 2:07 PM IST

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ‌ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಆತಂಕ ಹೆಚ್ಚಿಸಿದೆ. ಕೊರೊನಾ ಮೊದಲ ಅಲೆಯಲ್ಲಿ ಕಾಡಿದಂತೆ ಇದೀಗ ಎರಡನೇ ಅಲೆಯಲ್ಲಿಯೂ ಆಕ್ಸಿಜನ್ ಕೊರತೆ ಉಂಟಾಗುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಇದಕ್ಕೆ ಪೂರಕ ಎಂಬಂತೆ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್ ಕೊರತೆ ಸಂಬಂಧ ಆರೋಗ್ಯ ಸಚಿವರಿಗೆ ಫನಾ ಸಂಘವೂ ತುರ್ತು ಪತ್ರ ಬರೆದಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ 10,231 ಕೋವಿಡ್ ಪ್ರಕರಣಗಳು ಪತ್ತೆ!

ಪ್ರಮುಖವಾಗಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆಕ್ಸಿಜನ್​ಗೆ ಹಾಹಾಕಾರ ಶುರುವಾಗಿದ್ದು, ಬೆಂಗಳೂರಿನ ಸಾಕಷ್ಟು ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಔಟ್ ಆಫ್ ಸ್ಟಾಕ್ ಆಗಿದೆ. ಆಕ್ಸಿಜನ್ ಸಪ್ಲೈಯರ್ಸ್ ಪೂರೈಕೆ ಸ್ಥಗಿತಗೊಳಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿರುವ ಸರ್ಕಾರಿ ಕೋವಿಡ್ ಬೆಡ್ ಭರ್ತಿಯಾಗಿದೆ.

Lack of oxygen cylinder; Fana Association wrote an emergency letter to the Health Minister
ಫನಾ ಸಂಘದ ಮುಖಂಡರು

ಲೈಫ್ ಸೇವಿಂಗ್ ಆಕ್ಸಿಜನ್ ಸಪೋರ್ಟ್ ಇಲ್ಲದೇ ಪರದಾಟ ಅನುಭವಿಸುವಂತಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು. ಆಕ್ಸಿಜನ್ ಸಿಲಿಂಡರ್ ಇಲ್ಲದೇ ರೋಗಿಗಳ ಪ್ರಾಣಕ್ಕೆ ಹಾನಿಯಾಗುವ ಸಂಭವ ಹೆಚ್ಚು. ಹೀಗಾಗಿ ಕೂಡಲೇ ಕ್ರಮ ಕೈಗೊಳ್ಳುವಂತೆ ಫನಾ ಅಧ್ಯಕ್ಷ ಡಾ. ಪ್ರಸನ್ನ ರಿಂದ ಪತ್ರ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.