ETV Bharat / state

ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ಮುನ್ನ ಟೆಂಪಲ್ ರನ್ ಮಾಡಿದ ಕುಸುಮಾ - Kusuma Hanumantharayappa latest news

ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಆದಿಚುಂಚನಗಿರಿ ಮಠದ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿದರು.

Kusuma Hanumantharayappa visits Temple
ಆದಿಚುಂಚನಗಿರಿ ಮಠದ ಶಿವನ ದೇವಸ್ಥಾನಕ್ಕೆ ಕುಸುಮಾ ಭೇಟಿ..
author img

By

Published : Nov 10, 2020, 8:59 AM IST

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಮತ ಎಣಿಕೆ ಕೇಂದ್ರಕ್ಕೆ ಆಗಮಿಸುವ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಟೆಂಪಲ್ ರನ್ ನಡೆಸಿದ್ದಾರೆ.

ಆದಿಚುಂಚನಗಿರಿ ಮಠದ ಶಿವನ ದೇವಸ್ಥಾನಕ್ಕೆ ಕುಸುಮಾ ಭೇಟಿ..

ನಿವಾಸದಿಂದ ಇಂದು ಬೆಳಗ್ಗೆ ಹೊರಟ ಅವರು, ರಾಜರಾಜೇಶ್ವರಿನಗರ ಕೆಂಚೇನಹಳ್ಳಿ ಸಮೀಪದ ಜ್ಞಾನಾಕ್ಷಿ ವಿದ್ಯಾನಿಕೇತನ ಮತ ಎಣಿಕೆ ಕೇಂದ್ರ ತಲುಪುವ ಮುನ್ನ ಬೆಳಗ್ಗೆ 8 ಗಂಟೆಗೆ ವಿಜಯನಗರದ ಆದಿಚುಂಚನಗಿರಿ ಮಠದ ಶಿವನ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ರಾಜರಾಜೇಶ್ವರಿ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆಯಲಿರೋ ಕುಸುಮ‌ ಬಳಿಕ ಮತಗಟ್ಟೆಗೆ ಆಗಮಿಸಲಿದ್ದಾರೆ.

Kusuma Hanumantharayappa

ಹೊರಡುವ ಮುನ್ನ ನಿವಾಸದ ಬಳಿ ಮಾತನಾಡಿ, ಗೆಲ್ಲುವ ವಿಶ್ವಾಸ ಇದೆ. ಮತದಾರರ ಮೇಲೆ ನಂಬಿಕೆ ಇದೆ. ಗೆಲ್ಲುತ್ತೇನೆ ಅನ್ನೊ ನಂಬಿಕೆ ಇದೆ. ಗೆದ್ದ ನಂತರ ಕೃತಜ್ಞತೆ ಸಲ್ಲಿಸುತ್ತೇನೆ. ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯಲಿದ್ದೇನೆ. ಎಲ್ಲರ ಭವಿಷ್ಯ ನಿರ್ಧಾರ ಆಗೋ ದಿನ ಇಂದು. ವಿದ್ಯಾವಂತ ಮಹಿಳೆ ಆದ ಕಾರಣ ನನಗೆ ಇದೇ ಪ್ಲಸ್ ಪಾಯಿಂಟ್ ಆಗುತ್ತೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.