ETV Bharat / state

ಆರ್‌.ಆರ್‌.ನಗರ: ಸಿಖ್ ಸಮುದಾಯದ ಮತ ಸಳೆಯಲು ಕುಸುಮಾ ಕಸರತ್ತು - ಆರ್​ ಆರ್​ ನಗರ ಸಿಖ್​​ ಸಮುದಾಯ

ಆರ್.ಆರ್.ನಗರದ ಉಪ ಚುನಾವಣಾ ಕಣ ರಂಗೇರುತ್ತಿದ್ದು, ಕಾಂಗ್ರೆಸ್​​ ಅಭ್ಯರ್ಥಿ ಕುಸುಮಾ ಹನುಮಂತಪ್ಪ ಇಂದು ಸಿಖ್​ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಬೆಂಬಲ ಕೋರಿದ್ದಾರೆ.

Kusuma Hanumanthappa
ಸಿಖ್ ಸಮುದಾಯವನ್ನು ಭೇಟಿ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ ಕುಸುಮ
author img

By

Published : Oct 29, 2020, 5:55 PM IST

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ, ಕಾಂಗ್ರೆಸ್​​ ಅಭ್ಯರ್ಥಿ ಕುಸುಮಾ.ಹೆಚ್ ಇಂದು ​​ಸಿಖ್ ಸಮುದಾಯದ ಮುಖಂಡರನ್ನು ಭೇಟಿ ಮಾಡಿ ಸಭೆ ನಡೆಸಿದ್ದಾರೆ.

ಯಶವಂತಪುರದ ಮೋಹನ್ ಕುಮಾರ ನಗರದಲ್ಲಿ ಈ ಸಭೆ ಜರುಗಿದ್ದು, ಉಪ ಚುನಾವಣೆಯ ಗೆಲುವಿಗಾಗಿ ಸಿಖ್ ಸಮುದಾಯದ ಮತಗಳನ್ನು ಸೆಳೆದುಕೊಳ್ಳಲು ಸಮುದಾಯದ ಮುಖಂಡರ ಬೆಂಬಲ ಕೋರಿರುವ ಕುಸುಮಾ ಹನುಮಂತಪ್ಪ, ಈ ಉಪ ಚುನಾವಣೆಯಲ್ಲಿ ನನಗೆ ಮತ ನೀಡುವ ಮೂಲಕ ಗೆಲ್ಲಿಸಿ ಎಂದು ಸಭೆಯಲ್ಲಿ ಮನವಿ ಮಾಡಿದ್ದಾರೆ.

ಸಿಖ್ ಸಮುದಾಯವನ್ನು ಭೇಟಿ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ ಕುಸುಮ

ಅಲ್ಪಸಂಖ್ಯಾತ ಸಮುದಾಯದವರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಅಂತಿಮ ಹಂತದ ಕಸರತ್ತು ನಡೆಸಿದ್ದು, ಈ ಪ್ರಯತ್ನದ ಭಾಗವಾಗಿಯೇ ಸಮುದಾಯದ ಮುಖಂಡರನ್ನು ಭೇಟಿ ಮಾಡಿದ್ದಾರೆ.

ಇನ್ನೊಂದೆಡೆ ಪ್ರಮುಖ ಅಲ್ಪಸಂಖ್ಯಾತ ಸಮುದಾಯ ವ್ಯಾಪ್ತಿಯಲ್ಲಿ ಬರುವ ಕ್ರಿಶ್ಚಿಯನ್ ಸಮುದಾಯದವರನ್ನು ಇಂದು ಡಿಕೆಶಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಕ್ಷೇತ್ರವ್ಯಾಪ್ತಿಯಲ್ಲಿ ಸುಮಾರು 20 ಸಾವಿರ ಕ್ರಿಶ್ಚಿಯನ್ ಮತದಾರರಿದ್ದು, ಈ ಎಲ್ಲಾ ಮತಗಳನ್ನು ಪಡೆದು ಕುಸುಮಾರನ್ನು ಗೆಲ್ಲಿಸಿಕೊಳ್ಳಬೇಕೆಂಬ ಪ್ರಯತ್ನದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.