ETV Bharat / state

'ಅನುಭವಸ್ಥ, ಹಿರಿಯ ರಾಜಕಾರಣಿಗಳ ಕೊರತೆ ನಿವಾರಣೆಗೆ ದೇವೇಗೌಡರಿಂದ ರಾಜ್ಯಸಭೆ ಪ್ರವೇಶ' - kumarswamy latest news updates'

ಹಿರಿಯ ರಾಜಕಾರಣಿಗಳ ಕೊರತೆ ನಿವಾರಣೆಗಾಗಿ ಎಚ್​​​.ಡಿ. ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ ಎಂದು ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

kumarswamy reaction about devegowda
ಎಚ್​​.ಡಿ.ಕುಮಾರಸ್ವಾಮಿ ಹೇಳಿಕೆ
author img

By

Published : Jun 9, 2020, 1:41 PM IST

ಬೆಂಗಳೂರು: ಅನುಭವಸ್ಥ ಹಾಗೂ ಹಿರಿಯ ರಾಜಕಾರಣಿಗಳ ಕೊರತೆ ನಿವಾರಣೆಗಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯಸಭೆಗೆ ತೆರಳುವ ಪ್ರಯತ್ನ ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಎಚ್​​.ಡಿ.ಕುಮಾರಸ್ವಾಮಿ ಹೇಳಿಕೆ

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಇಂದು ಬೆಳಗ್ಗೆ ಸಹ ದೇವೇಗೌಡರ ಜತೆ ವಿವರವಾಗಿ ಚರ್ಚಿಸಿದ್ದೇನೆ. ಸೋನಿಯಾ ಗಾಂಧಿ ಸಹ ನಾಮಪತ್ರ ಸಲ್ಲಿಕೆಗೆ ಸಲಹೆ ಕೊಟ್ಟಿದ್ದಾರೆ. ಸಾಕಷ್ಟು ಒತ್ತಡ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಮಾಡಿದ್ದಾರೆ. ಯಾವುದೇ ರೀತಿಯಲ್ಲಾದರೂ ಸರಿ, ರಾಜಕೀಯದಲ್ಲಿ ಉಳಿಯಬೇಕೆಂಬ ಆಸೆಯಿಂದ ಅವರು ಈ ಕಾರ್ಯ ಮಾಡಿಲ್ಲ. ಈ ಇಳಿವಯಸ್ಸಿನಲ್ಲಿ ರಾಜಕೀಯದಲ್ಲಿದ್ದು ಬೇಳೆ ಬೇಯಿಸಿಕೊಳ್ಳುವ ಅನಿವಾರ್ಯ ಅವರಿಗಿಲ್ಲ ಎಂದರು.

'ಸರ್ಕಾರದ ಪರವಾಗಿ ಮಾತಾಡಿಲ್ಲ':
ಸರ್ಕಾರ ಅಸ್ಥಿರಗೊಳಿಸುವ ಬಗ್ಗೆ ಒಂದಿಬ್ಬರು ಮಾತನಾಡುತ್ತಿದ್ದಾರೆ. ಸರ್ಕಾರ ಬೀಳಿಸುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಎಚ್ಚರವಾಗಿರಿ ಎಂದಿದ್ದೇನೆ. ಅಂದರೆ ಬಿಜೆಪಿ ಪರ ಇದ್ದೇನೆ ಅಂತಲ್ಲ. ಈ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸಲ್ಲ ಎಂದರು.

ನಾಲ್ಕನೇ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಮತದ ಕೊರತೆ ಇರಬಹುದು, ಆದರೆ ಉಳಿದ ಎರಡು ಪಕ್ಷಕ್ಕೆ ಉಳಿಯುವ ಮತಕ್ಕಿಂತ ನಮ್ಮ ಮತ ಹೆಚ್ಚಿದೆ ಎಂದು ಸ್ಪಷ್ಟನೆ ನೀಡಿದರು.

ದೇವೇಗೌಡರು ಜನರ ಮುಂದೆ ನಿಂತು ಚುನಾವಣೆ ಎದುರಿಸಿದ್ದಾರೆ. ಪ್ರಧಾನಿ ಆದಾಗ ಅನಿವಾರ್ಯವಾಗಿ ರಾಜ್ಯಸಭೆ ಆಯ್ಕೆ ಮಾಡಿಕೊಂಡಿದ್ದರು. ಈಗ ಎರಡನೇ ಬಾರಿ ಆಯ್ಕೆ ಮಾಡಿಕೊಂಡಿದ್ದಾರೆ. ಅನಿವಾರ್ಯವಾಗಿ ಈಗಿನ ಸಂದರ್ಭದಲ್ಲಿ ಹಿರಿಯ ರಾಜಕಾರಣಿಗಳ ಅನಿವಾರ್ಯವಿದೆ. ಅನುಭವಸ್ಥ ನಾಯಕರ ಕೊರತೆ ರಾಷ್ಟ್ರ ರಾಜಕಾರಣದಲ್ಲಿ ಇರುವುದರಿಂದ ಈ ಆಯ್ಕೆ ಬಯಸಿದ್ದಾರೆ ಎಂದು ತಿಳಿಸಿದ್ರು.

ಯಾವುದೇ ರಾಷ್ಟ್ರೀಯ ಪಕ್ಷದ ನಾಯಕರನ್ನು ಸಂಪರ್ಕ ಮಾಡಿಲ್ಲ. ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳಿಸುವ ವೈಯಕ್ತಿಕ ಅಭಿಪ್ರಾಯ ಅಲ್ಲ. ಇಲ್ಲಿ ಹೊಂದಾಣಿಕೆ ರಾಜಕಾರಣ ಆಗಿಲ್ಲ. ಹೊಂದಾಣಿಕೆ, ರಾಜಿಗೆ ಒಳಗಾಗುವ ಪ್ರಶ್ನೆ ಇಲ್ಲ. ರಾಜ್ಯ ಹಾಗೂ ರಾಷ್ಟ್ರದ ಹಲವು ಸಮಸ್ಯೆಗಳಿಗೆ ದನಿಯಾಗಿ ಇರುತ್ತಾರೆ. ರಾಷ್ಟ್ರೀಯ ಪಕ್ಷಗಳು ಇವರ ಆಯ್ಕೆಗೆ ನಮ್ಮ ಸಹಕಾರ ಇದೆ ಎನ್ನುತ್ತಿದ್ದಾರೆ. ಯಾರು ಬೇಕಾದರೂ ಇದರ ಕ್ರೆಡಿಟ್ ಪಡೆಯಲಿ. ರಾಜಕೀಯ ವಿಶ್ಲೇಷಣೆ ಏನು ಬೇಕಾದರೂ ಆಗಲಿ. ಅವರ ಪಕ್ಷಗಳ ತೀರ್ಮಾನದ ಬಗ್ಗೆ ನಾನು ಏನನ್ನೂ ಹೇಳಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.