ಬೆಂಗಳೂರು: ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಕರ್ನಾಟಕದ ಬಫೂನ್ಗಳು. ಅವರು ಯಾಕೆ ಮಾತನಾಡುತ್ತಾರೆ, ಏನು ಮಾತನಾಡುತ್ತಾರೆ ಗೊತ್ತಿಲ್ಲ. ಜನ ಅವರನ್ನ ಬಫೂನ್ಗಳ ಹಾಗೆ ನೋಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ವ್ಯಂಗ್ಯವಾಡಿದರು.
ಶಾಸಕರ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾನು ಮಾಜಿ ಸಿಎಂ ಸಿದ್ದರಾಮಯ್ಯಗೆ ಪಾಠ ಮಾಡಲು ರೆಡಿ ಇದ್ದೀನಿ. ಸಿದ್ದರಾಮಯ್ಯ ಯಾವ ಹೋರಾಟ ಮಾಡಿದ್ದಾರೆ? ದೇವೇಗೌಡರು ಜೆಡಿಎಸ್ನಿಂದ ಹೊರ ಹಾಕಿದ್ದರು... ಕಾಂಗ್ರೆಸ್ಗೆ ಬಂದರು. ಆಗ ನಾವು ಅವರನ್ನು ಸಿಎಂ ಮಾಡಿದ್ವಿ ಎಂದು ತಿಳಿಸಿದರು.
ಇದನ್ನೂ ಓದಿ: ಸ್ವಾಮಿ 15 ಲಕ್ಷ ಮಾತ್ರ ನನ್ನ ಖಾತೆಗೆ ಹಾಕಿದ್ದು: ನಟಿ ರಾಧಿಕಾ ಕುಮಾರಸ್ವಾಮಿ
ಸಂಪುಟ ವಿಸ್ತರಣೆ ಹೈಕಮಾಂಡ್ಗೆ ಬಿಟ್ಟ ವಿಚಾರ: ಸಚಿವ ಸಂಪುಟದ ಬಗ್ಗೆ ಯಾರೂ ಮಾತನಾಡಬಾರದು. ಮುಖ್ಯ ಮಂತ್ರಿಯಾಗಲಿ ಬೇರೆ ಯಾರೇ ಆಗಲಿ ಅದರ ಬಗ್ಗೆ ದಿನ ಬೆಳಿಗ್ಗೆ ಮಾತನಾಡಬಾರದು. ಹೈಕಮಾಂಡ್ ಯಾವಾಗ ಗ್ರೀನ್ ಸಿಗ್ನಲ್ ಕೊಡುತ್ತೋ ಆವಾಗ ಸಂಪುಟ ವಿಸ್ತರಣೆ ಆಗುತ್ತೆ. ದಿನ ಬೆಳಗ್ಗೆ ಅದನ್ನು ಮಾತನಾಡುವ ಬದಲು ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ಹಿರಿಯನಾಗಿ ನನ್ನ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ ಎಂದರು.