ಬೆಂಗಳೂರು: ಕ್ಷೇತ್ರದ ಮತದಾರ ವಿಶ್ವಾಸಕ್ಕೆ ಚ್ಯುತಿ, ಬರದಂತೆ ಜನರ ಗೌರವಕ್ಕೆ ಧಕ್ಕೆಯಾಗದಂತೆ ಭ್ರಷ್ಟಾಚಾರ ರಹಿತ, ಸಚ್ಚಾರಿತ್ರ್ಯದ ಆಡಳಿತ ನೀಡುತ್ತೇನೆ ಎಂದು ಮತದಾರರಿಗೆ ನೂತನ ಸಂಸದ ಡಿ.ವಿ.ಸದಾನಂದಗೌಡ ಅಭಯ ನೀಡಿದ್ದಾರೆ.
ಮತ ಎಣಿಕಾ ಕೇಂದ್ರದಲ್ಲಿ ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಎರಡನೇ ಬಾರಿಗೆ ಸಂಸದನನ್ನಾಗಿ ಬೆಂಗಳೂರು ಉತ್ತರದಿಂದ ಜನ ನನ್ನ ಆಯ್ಕೆ ಮಾಡಿದ್ದಾರೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಿದೆ. ಪಕ್ಷ ಇನ್ನಷ್ಟು ಹೆಚ್ಚು ಕೆಲಸ ಮಾಡಬೇಕು. ಮೋದಿ ವಿಚಾರಕ್ಕೆ ಬದ್ಧನಾಗಿ ಎಲ್ಲಾ ಅಧಿಕಾರ ಮುಂದುವರೆಸಬೇಕು ಎಂದು ಜನಾದೇಶ ಕೊಟ್ಟಿದ್ದಾರೆ. ಅದರಂತೆ ಕ್ಷೇತ್ರದ, ಜನತೆಯ ಹಿತಾಸಕ್ತಿಯ ಬಗ್ಗೆ ಹಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡುತ್ತೇನೆ ಎಂದರು.
ದೇಶದ ವಿಚಾರಗಳಿಗೆ ಒತ್ತು ಕೊಡುವ ಕೆಲಸ ಇಲ್ಲಿನ ಶಾಕಸರು ಮಾಡದೆ ಕೇವಲ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ದೇಶದ ಹಿತಾಸಕ್ತಿ, ರಾಜ್ಯಕ್ಕೆ ಬೇಕಾದ ಕೇಂದ್ರದ ಅನುದಾನ ತರುವ ಕೆಲಸದ ತೀರ್ಮಾನ ಮಾಡಿ, ನಮಗೆ ಜನ ಮತ ಹಾಕುವ ಮೂಲಕ ಆದೇಶ ನೀಡಿದ್ದಾರೆ. ಹಾಗಾಗಿ ನನ್ನ ವಿರುದ್ಧ 7 ಶಾಸಕರಿದ್ದರೂ ನನಗೆ ಗೆಲುವು ಸಿಕ್ಕಿದೆ ಎಂದರು.
ಘಟಾನುಘಟಿ ನಾಯಕರು ಈ ಬಾರಿ ಸೋತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವರಿಗೆ ಸಾಕಷ್ಟು ಅವಕಾಶ ಕೊಟ್ಟಿದ್ದೇವೆ. ನೀವು ಯಾರನ್ನೂ ಉದ್ಧಾರ ಮಾಡಿಲ್ಲ, ದೇಶವನ್ನು ಉದ್ಧಾರ ಮಾಡಿಲ್ಲ. ಹಾಗಾಗಿ ನೀವು ಸಾಕು, ಈಗ ದೇಶ ಉದ್ಧಾರಕ ಮೋದಿ ಆಡಳಿತ ವೈಖರಿ ಬೇಕು. ಹಾಗಾಗಿ ನೀವೆಲ್ಲಾ ಹಳಬರು, ಸ್ವಲ ನಿಮ್ಮ ಹಳೆಯ ಚಾಳಿ ಬಿಟ್ಟು ಹೊಸ ರೀತಿಯ ರಾಜನೀತಿಗೆ ಬರಬೇಕು ಎಂದು ಈ ಜನಾದೇಶ ಸಿಕ್ಕದೆ ಎಂದರು.