ಬೆಂಗಳೂರು : KSRTC ಸಂಸ್ಥೆಗೆ ಮತ್ತೊಂದು ಪ್ರಶಸ್ತಿಯ ಗರಿ ಸಿಕ್ಕಿದೆ. ಇಂದು ನಡೆದ ಸ್ಕೋಚ್ 76ನೇ ಸ್ಟೇಟ್ಸ್ ಗವರ್ನನೆನ್ಸ್ ವರ್ಚುವಲ್ ಸಮಾರಂಭದಲ್ಲಿ ನಿಗಮದ ಉಪಕ್ರಮಕ್ಕೆ ಪ್ರಶಸ್ತಿಯನ್ನು ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರಿಗೆ ಪ್ರದಾನ ಮಾಡಿದರು.
-
ಕೆ ಎಸ್ ಆರ್ ಟಿ ಸಿ ಯ ಉಪಕ್ರಮವಾದ "ಸಾರಿಗೆ ಸುರಕ್ಷಾ" (ಸಂಚಾರಿ ಐ ಸಿ ಯು) ಗೆ ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ -2021.
— KSRTC (@KSRTC_Journeys) November 16, 2021 " class="align-text-top noRightClick twitterSection" data="
…1 pic.twitter.com/3mssHs7wEj
">ಕೆ ಎಸ್ ಆರ್ ಟಿ ಸಿ ಯ ಉಪಕ್ರಮವಾದ "ಸಾರಿಗೆ ಸುರಕ್ಷಾ" (ಸಂಚಾರಿ ಐ ಸಿ ಯು) ಗೆ ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ -2021.
— KSRTC (@KSRTC_Journeys) November 16, 2021
…1 pic.twitter.com/3mssHs7wEjಕೆ ಎಸ್ ಆರ್ ಟಿ ಸಿ ಯ ಉಪಕ್ರಮವಾದ "ಸಾರಿಗೆ ಸುರಕ್ಷಾ" (ಸಂಚಾರಿ ಐ ಸಿ ಯು) ಗೆ ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿ -2021.
— KSRTC (@KSRTC_Journeys) November 16, 2021
…1 pic.twitter.com/3mssHs7wEj
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, ನಿಗಮವು ಕೋವಿಡ್ ಸಮಯದಲ್ಲಿ ಹಲವಾರು ಸಾರ್ವಜನಿಕ-ಆರೋಗ್ಯ ಸ್ನೇಹಿ ಉಪಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ.
ಸಾರಿಗೆ ಸುರಕ್ಷಾ ಸಂಚಾರಿ ಐಸಿಯು ಉಪಕ್ರಮವನ್ನು ಪುತ್ತೂರು ವಿಭಾಗದ 38 ಹಳ್ಳಿಗಳ ಸುಮಾರು 4,900 ಜನರು ಕಳೆದ 81 ದಿನಗಳಲ್ಲಿ ಉಪಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಸಮಯದಲ್ಲಿ ನಿಗಮದ ಈ ಸಾಮಾಜಿಕ ಕಳಕಳಿಯ ಉಪಕ್ರಮವನ್ನು ಆಯೋಜಕರು ಶ್ಲಾಘಿಸಿ ದೇಶದ ಇತರೆ ಸಂಸ್ಥೆಗಳಿಗೆ ಇದು ಮಾದರಿ ಹಾಗೂ ಅನುಕರಣೀಯ ಎಂದು ತಿಳಿಸಿದರು. ಇದೇ ವೇಳೆ ವ್ಯವಸ್ಥಾಪಕ ನಿರ್ದೇಶಕರು ಈ ಪ್ರಶಸ್ತಿಯನ್ನು ನಿಗಮದ ಸಮಸ್ತ ಸಿಬ್ಬಂದಿಗೆ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸಮರ್ಪಿಸಿದರು.