ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ನೂತನವಾಗಿ ಬಂದ ವೋಲ್ವೋ ಬಸ್ ಪರೀಕ್ಷಿಸಲು ಟೆಸ್ಟ್ ಡ್ರೈವ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ನೂತನ ವೋಲ್ವೋ ಬಸ್ನ್ನು ಚಲಾಯಿಸಿದರು. ಆದರೆ ಕಳಸದ್ ಅವರ ಈ ಬಸ್ ಯಾವ ಗೇರಿನಲ್ಲಿ ಇದೆ ಎಂಬ ಪ್ರಶ್ನೆ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಈ ಹಿಂದೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಕೂಡ ಲೈಸನ್ಸ್ ಇಲ್ಲದೆ ಬಸ್ ಚಲಾಯಿಸಿದ್ದು ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರು. ಅಲ್ಲದೆ ಕೆಲ ದಿನಗಳ ಹಿಂದೆ ಶಾಸಕ ರೇಣುಕಾಚಾರ್ಯ ಕೂಡ ಲೈಸನ್ಸ್ ಇಲ್ಲದೆ ಬಸ್ ಓಡಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.