ETV Bharat / state

ಕೆಎಸ್​​ಆರ್​​​ಪಿ: 10 ಕೆ.ಜಿಗಿಂತ ಹೆಚ್ಚು ತೂಕ ಇಳಿಸಿದ ಪೊಲೀಸ್‌ ಸಿಬ್ಬಂದಿಗೆ ಪ್ರಶಂಸನಾ ಪತ್ರ

ಕೊರಮಂಗಲದಲ್ಲಿ ಕೆಎಸ್​​ಆರ್​​ಪಿ ಪೊಲೀಸರು ಸೇವಾ ಕವಾಯತು ನಡೆಸಿದ್ದು, ಈ ವೇಳೆ ಎಡಿಜಿಪಿ ಅಲೋಕ್ ಕುಮಾರ್‌ ಅವರು, ಆರೋಗ್ಯ ಮತ್ತು ತೂಕದ ಮೇಲ್ವಿಚಾರಣೆ ವ್ಯವಸ್ಥೆಯ ಅನುಷ್ಠಾನದ ಕುರಿತಂತೆ ಪರಿವೀಕ್ಷಣೆ ನಡೆಸಿದರು.

ಕೆಎಸ್​​ಆರ್​​​ಪಿ ಪೊಲೀಸರಿಂದ ಸೇವಾ ಕವಾಯತು
KSRP Police service exercise in Bangalore
author img

By

Published : Jul 16, 2021, 8:35 PM IST

ಬೆಂಗಳೂರು: ಕೆಎಸ್​​ಆರ್​​ಪಿ ಸಿಬ್ಬಂದಿಯ ಕುಂದುಕೊರತೆಗಳ ಬಗ್ಗೆ ಕೆಎಸ್​​ಆರ್​​ಪಿ ಎಡಿಜಿಪಿ ಅಲೋಕ್ ಕುಮಾರ್‌ ಪರಿಶೀಲನೆ ನಡೆಸಿದರು.

ಕೆಎಸ್​​ಆರ್​​​ಪಿ ಪೊಲೀಸರಿಂದ ಸೇವಾ ಕವಾಯತಿನಲ್ಲಿ ಅಲೋಕ್​ ಕುಮಾರ್​ ಭಾಗಿ

ಕವಾಯತು ಕಾರ್ಯಕ್ರಮ ನಂತರ ಅಲೋಕ್​ ಕುಮಾರ್ ಮಾತನಾಡಿ, ಪೊಲೀಸ್​ ಸಿಬ್ಬಂದಿಯ ಆರೋಗ್ಯ ಮತ್ತು ತೂಕದ ಮೇಲ್ವಿಚಾರಣೆಗಾಗಿ ಇಂದು ಕವಾಯತು ನಡೆಸಲಾಗಿದೆ. ಆರೋಗ್ಯ ಸಮಸ್ಯೆಯಿಂದ ಸಾಕಷ್ಟು ಸಿಬ್ಬಂದಿ ಸಾವನ್ನಪ್ಪಿದ್ದು, 400ಕ್ಕೂ ಅಧಿಕ ಜನರು ತೂಕ ಇಳಿಸಿಕೊಂಡಿದ್ದಾರೆ. ಸುಮಾರು 100 ಮಂದಿ ಡಿ ಅಡಿಕ್ಷನ್ ಸೆಂಟರ್​​​​ನಲ್ಲಿ ಮದ್ಯ ವ್ಯಸನ ನಿಲ್ಲಿಸಿದ್ದಾರೆ ಎಂದು ಹೇಳಿದರು.

ಪ್ರಶಂಸನಾ ಪತ್ರ ಹಸ್ತಾಂತರ:

ಈ ಸಂದರ್ಭದಲ್ಲಿ 10 ಕೆ.ಜಿಗಿಂತ ಹೆಚ್ಚು ತೂಕ ಇಳಿಸಿದ ಪೊಲೀಸ್ ಸಿಬ್ಬಂದಿಗೆ ಪ್ರಶಂಸನಾ ಪತ್ರಗಳನ್ನು ವಿತರಿಸಲಾಯಿತು.

ಇದನ್ನೂ ಓದಿ: ಪ್ರಧಾನಿ ಭೇಟಿಯಾದ ಬಿಎಸ್​ವೈ: ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಒಪ್ಪಿಗೆ ನೀಡಲು ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.