ಬೆಂಗಳೂರು: ಕ್ಷತ್ರಿಯ ಜನಾಂಗದ ಎಲ್ಲಾ ಪಂಗಡಗಳನ್ನೂ ಒಗ್ಗೂಡಿಸುವ ಸಲುವಾಗಿ ನಿನ್ನೆ ಬೃಹತ್ ಕ್ಷತ್ರಿಯ ಏಕತಾ ರಥ ಯಾತ್ರೆ ನಡೆಸಲಾಗಿತ್ತು.
ನಗರದಲ್ಲಿರುವ ಜನ ಸಮೃದ್ಧಿ ಸಂಘದಿಂದ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಸದಾಶಿವನಗರದ ಭಾಷ್ಯಂ ವೃತ್ತದಿಂದ ನಾಡದೇವಿ ಚಾಮುಂಡೇಶ್ವರಿ ದೇವಿ, ಶಿವಾಜಿ ಮಹಾರಾಜ ಹಾಗೂ ಆರಾಧ್ಯ ದೈವ ಪಾಂಡುರಂಗನ ರಥ ಯಾತ್ರೆ ನಡೆಯಿತು. ಯಾತ್ರೆ ಉದ್ದಕ್ಕೂ ವೇದಬ್ರಹ್ಮರಿಂದ ವೇದ ಘೋಷ, ಪಂಡರಾಪುರ ವಾರ್ಕರಿ ಸಂಪ್ರದಾಯದವರಿಂದ ಭಜನೆಗಳಿಂದ ಸಾಗಿದ ಮೆರವಣಿಗೆ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಮುಕ್ತಾಯಗೊಂಡಿತು.
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ನಾಡ ದೇವಿಗೆ ಪುಷ್ಪಾರ್ಚನೆ, ಗುರು ಹಿರಿಯರಿಂದ ಆಶೀರ್ವಾಚನ ನಡೆಯಿತು. ಸಂಜೆ ಸಮಾರೋಪ ಸಮಾರಂಭದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಶೈಲೇಶ್ ನಾಜರೆ ಅಶೋಕ ಸಾರಥ್ಯದಲ್ಲಿ ಸಮಾರಂಭ ಜರುಗಿತು.