ETV Bharat / state

ರೂಪಾಯಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಾ ಇರೋ ಕೃಷಿ ತಾಪಂಡ - ಆನಂದ್ ರಾಜವಿಕ್ರಮ್

ಯುವ ಪ್ರತಿಭೆ ವಿಜಯ್ ಜಗದಾಲ್ ನಿರ್ದೇಶಿಸಿ ಹಾಗೂ ಅಭಿನಯಿಸಿರುವ ರೂಪಾಯಿ ಚಿತ್ರದಲ್ಲಿ ಕೃಷಿ ತಾಪಂಡ ಜೋಡಿಯಾಗಿದ್ದಾರೆ‌.

ರೂಪಾಯಿ
ರೂಪಾಯಿ
author img

By

Published : Jan 17, 2023, 10:51 PM IST

ಬೆಂಗಳೂರು: ಅಕಿರ, ಕನ್ನಡಕ್ಕಾಗಿ ಒಂದನ್ ಒತ್ತಿ ಹಾಗೂ ಲಂಕೆ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ಮಲೆನಾಡಿನ ಬೆಡಗಿ ಕೃಷಿ ತಾಪಂಡ. ಸದ್ಯ ರಿಯಾಲಿಟಿ ಶೋ ಹಾಗೂ ಜಾಹೀರಾತುಗಳಲ್ಲಿ ಬ್ಯುಸಿಯಾಗಿರೋ‌ ಕೃಷಿ ತಾಪಂಡ ಈಗ ರೂಪಾಯಿ ಅಂತಾ ಟೈಟಲ್ ಇಟ್ಟುಕೊಂಡು ಹೊಸ ಚಿತ್ರದೊಂದಿಗೆ ಸಿನಿಮಾ ಪ್ರಿಯರ ಮುಂದೆ ಬರ್ತಾ ಇದ್ದಾರೆ‌.

ಯುವ ಪ್ರತಿಭೆ ವಿಜಯ್ ಜಗದಾಲ್ ನಿರ್ದೇಶಿಸಿ ಹಾಗೂ ಅಭಿನಯಿಸಿರುವ ರೂಪಾಯಿ ಚಿತ್ರದಲ್ಲಿ ಕೃಷಿ ತಾಪಂಡ ಜೋಡಿಯಾಗಿದ್ದಾರೆ‌. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿರುವ ರೂಪಾಯಿ ಚಿತ್ರಕ್ಕೆ ನಟ ಧನಂಜಯ್ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದರು.

ಪ್ರತಿಯೊಬ್ಬರ ಜೀವನದಲ್ಲಿ ಹಣ ಎಂಬ ರೂಪಾಯಿ ತುಂಬಾ ಮಹತ್ವ ಹೊಂದಿರುತ್ತೆ‌. ಈ ಚಿತ್ರದಲ್ಲಿ ಕಾಮಿಡಿ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಹೊಂದಿದೆ. ಚಿತ್ರದಲ್ಲಿ ಐದು ಪ್ರಮುಖ ಪಾತ್ರಗಳ ಸುತ್ತ ಈ ಕಥೆ ರೂಪಾಯಿ ಚಿತ್ರದ ಕಥೆ ಸಾಗುತ್ತದೆ. ವಿಜಯ್ ಜಗದಾಲ್ ಮತ್ತು ಕೃಷಿ ತಾಪಂಡ ಮುಖ್ಯಭೂಮಿಕೆಯಲ್ಲಿದ್ದು, ಯಶ್ವಿಕ್, ಚಂದನ ರಾಘವೇಂದ್ರ , ರಾಮ ಚಂದನ್, ಪ್ರಮೋದ್ ಶೆಟ್ಟಿ, ಮೋಹನ್ ಜುನೇಜ, ರಾಕ್ ಲೈನ್ ಸುಧಾಕರ್ , ಅನಿಲ್ ಕುಮಾರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಈಗಾಗಲೇ ಆನಂದ್ ಆಡಿಯೋ ಮೂಲಕ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ವಿವಿಧ್ ಸಿನಿಮಾಸ್ ಲಾಂಛನದಲ್ಲಿ ಮಂಜುನಾಥ್ ಎಂ, ಹರೀಶ್ ಬಿ. ಕೆ ಮತ್ತು ವಿನೋದ್ ಎನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆರ್ ಡಿ ನಾಗಾರ್ಜುನ ಛಾಯಾಗ್ರಹಣ, ಆನಂದ್ ರಾಜವಿಕ್ರಮ್ ಸಂಗೀತ ನಿರ್ದೇಶನ ಹಾಗೂ ಶಿವರಾಜ್ ಮೇಹು ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸುನಿವಿನಿ. ಸದ್ಯ ಹಾಡುಗಳಿಂದ ಸಿನಿ‌ ಪ್ರಿಯರನ್ನ ಇಂಪ್ರೇಸ್ ಮಾಡುತ್ತಿರುವ ರೂಪಾಯಿ ಸಿನಿಮಾ ಫೆಬ್ರವರಿ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರ ಕೃಷಿ ತಾಪಂಡ‌ ಸಿನಿಮಾ‌ ಕೆರಿಯರ್ ಗೆ ಬ್ರೇಕ್ ನೀಡುತ್ತಾ ಎಂಬುದನ್ನು ಕಾದು‌‌ ನೋಡಬೇಕು.

ಕಿಚ್ಚ ಸುದೀಪ್ ಮುಂದಿನ ಸಿನಿಮಾ?: ಕನ್ನಡ ಸಿನಿಮಾ ರಂಗ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿಯೂ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ಸ್ಯಾಂಡಲ್​ವುಡ್​ ಕಿಚ್ಚ ಸುದೀಪ್ ತಮ್ಮ ಮುಂದಿನ ಸಿನಿಮಾ ಕುರಿತು ಕುತೂಹಲತೆ ಹೆಚ್ಚಿಸತೊಡಗಿದ್ದಾರೆ. 'ವಿಕ್ರಾಂತ್ ರೋಣ' ನಂತರ ಅಧಿಕೃತವಾಗಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಆದರೆ, ಅವರ ಮುಂದಿನ ಸಿನಿಮಾಗಳ ಬಗ್ಗೆ ಅಂತೆ-ಕಂತೆಗಳು ಮಾತ್ರ ಸಖತ್​ ಸದ್ದು ಮಾಡುತ್ತಿವೆ. ಇದ್ಯಾವುದನ್ನು ತಲೆಕೆಡಿಸಿಕೊಳ್ಳದ ಅವರು ಸ್ನೇಹಿತರ ಜೊತೆ ಕ್ರಿಕೆಟ್ ಆಡುವ ಮುಖಾಂತರ ರಿಲ್ಯಾಕ್ಸ್ ಮೂಡ್​​ನಲ್ಲಿದ್ದಾರೆ.

ನಟ ಕಿಚ್ಚ ಸುದೀಪ್‌ ಮುಂದಿನ ಸಿನಿಮಾ ಯಾವುದು ಯಾವುದು ಅನ್ನೋ ಕುತೂಹಲಕ್ಕೆ ಶೀಘ್ರದಲ್ಲೇ ತೆರೆ ಬೀಳಲಿದೆ. ಸಾಮಾಜಿಕ ಜಾಲತಾಣದಲ್ಲಿ ಅವರ ಮುಂದಿನ ಚಿತ್ರದ ಬಗ್ಗೆ ಅಂತೆ - ಕಂತೆಗಳು ಶುರುವಾಗಿದ್ದು ಇದಕ್ಕೆ ಸುದೀಪ್‌ ಅವರು ತಲೆ ಬಿಸಿ ಮಾಡಿಕೊಂಡಿಲ್ಲ. ಸ್ನೇಹಿತರ ಜೊತೆ ಕ್ರಿಕೆಟ್ ಆಡುವ ಮುಖಾಂತರ ರಿಲ್ಯಾಕ್ಸ್ ಮೂಡ್​​ನಲ್ಲಿದ್ದಾರೆ.

ಇತ್ತೀಚೆಗಷ್ಟೇ ಬಿಗ್​ಬಾಸ್​ ರಿಯಾಲಿಟಿ ಶೋ‌ ಮುಗಿಸಿರುವ ಅವರು ಶೀಘ್ರದಲ್ಲೇ ತಮ್ಮ ಹೊಸ ಚಿತ್ರವನ್ನು ಘೋಷಣೆ ಮಾಡಲಿದ್ದಾರೆ ಎಂದು ಅಭಿಮಾನಿಗಳು ಊಹೆ ಆಗಿತ್ತು. ಆದರೆ, ಸದ್ಯಕ್ಕೆ ಕೊಂಚ ಬ್ರೇಕ್​ ತೆಗೆದುಕೊಳ್ಳುವ ಮೂಲಕ ಆ ಕಾತುರತೆಯನ್ನು ಮತ್ತಷ್ಟು ಹೆಚ್ಚಿಸಿತೊಡಗಿದ್ದಾರೆ. 'ಪೈಲ್ವಾನ್' ಮತ್ತು 'ವಿಕ್ರಾಂತ್ ರೋಣ' ಸಿನಿಮಾ ನಂತರ ದೊಡ್ಡ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳೊಂದಿಗೆ ಚರ್ಚೆ ನಡೆಯುತ್ತಿರುವುದು ನಿಜ. ಆದರೆ, ಯಾವ ನಿರ್ಮಾಣ ಸಂಸ್ಥೆ ಅವರ ಚಿತ್ರಕ್ಕೆ ಹಣ ಹೂಡಲಿದೆ ಅನ್ನೋದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ಇತ್ತ ಅವರನ್ನು ಹುಡುಕಿಕೊಂಡು ಹಲವು ಆಫರ್​ಗಳು ಬರುತ್ತಿದ್ದು ಯಾವ ರೀತಿಯ ಸಿನಿಮಾ ಮಾಡಬೇಕು? ಅಂತಾ ಸುದೀಪ್ ತಲೆಯಲ್ಲಿ ಸಾಕಷ್ಟು ಯೋಚನೆಗಳು ಓಡುತ್ತಿವೆ.

ಓದಿ: 'ವಿಕ್ರಾಂತ್ ರೋಣ' ನಂತರ ಸುದೀಪ್​ ಮುಂದಿನ ಸಿನಿಮಾ ಯಾವುದು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.