ಬೆಂಗಳೂರು: ಕೆ.ಪಿ.ಎಲ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕೆಲ ಪ್ರತಿಷ್ಟಿತ ಆಟಗಾರರು ಹಾಗೂ ಕೆಲ ಬುಕ್ಕಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೆಲ ನಟಿಮಣಿಯರ ಪಾತ್ರದ ಕುರಿತು ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಸಿಸಿಬಿ ಪೊಲೀಸರು ಖ್ಯಾತ ಆಟಗಾರರು, ಬೌಲರ್, ಬುಕ್ಕಿಗಳು, ಕೆಪಿಎಲ್ ಮಾಲೀಕರನ್ನು ಬಿಟ್ಟರೆ ಪ್ರಕರಣದಲ್ಲಿ ಭಾಗಿಯಾದ ನಟಿಯರನ್ನು ಇಲ್ಲಿಯವರೆಗೆ ವಿಚಾರಣೆ ನಡೆಸಿಲ್ಲ. ಕಾರಣಾಂತರಗಳಿಂದ ತನಿಖೆಗೆ ಕೊಂಚ ಬ್ರೇಕ್ ನೀಡಿದ್ದ ಸಿಸಿಬಿ, ಸದ್ಯ ಮತ್ತೆ ಪ್ರಕರಣದಲ್ಲಿ ಭಾಗಿಯಾಗಿ ಆರೋಪ ಹೊತ್ತಿರುವ ಕೆಲ ನಟಿಯರ ವಿಚಾರಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಯಾಕೆ ನಟಿಯರ ವಿಚಾರಣೆ:
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಈ ಹಿಂದೆ ಹೇಳಿದಂತೆ ಕೆ.ಪಿಎಲ್ ಹಗರಣದಲ್ಲಿ ಹನಿಟ್ರಾಪ್ ನಡೆದಿದೆ. ಕೆಲ ಪ್ರತಿಷ್ಟಿತ ನಟಿಯರು ಆಟಗಾರರಮನವೊಲಿಸಿ ಕೆಪಿಎಲ್ ಫಿಕ್ಸಿಂಗ್ ಖೆಡ್ಡಕ್ಕೆ ಬೀಳಿಸಿದ್ದಾರೆಂಬ ಆರೋಪ ಇದೆ. ಸದ್ಯ ಆರೋಪ ಎಷ್ಟರ ಮಟ್ಟಿಗೆ ಸತ್ಯ. ಕೆ.ಪಿಎಲ್ ನಿಂದ ಪಡೆದ ಸಂಭಾವಣೆ ಎಷ್ಟು. ಯಾರ ಜೊತೆ ಸಂಪರ್ಕದಲ್ಲಿದ್ದರು ಎಂಬ ಸಂಪೂರ್ಣ ಮಾಹಿತಿಯನ್ನ ಸಿಸಿಬಿ ತನಿಖಾಧಿಕಾರಿಗಳು ಪಡೆಯಲಿದ್ದಾರೆ.