ಬೆಂಗಳೂರು : ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ಬೆನ್ನತ್ತಿರುವ ಸಿಸಿಬಿ ತಂಡ ಪ್ರತಿ ದಿನ ತನಿಖೆಯಲ್ಲಿ ಒಂದೊದು ವಿಚಾರವನ್ನ ಬಯಲಿಗೆಳೆಯುತ್ತಿದೆ. ಇಂದು ಕೂಡಾ ಬೆಳಗಾವಿ ಪ್ಯಾಂಥರ್ಸ್ ತಂಡದ ಕೋಚ್ ಸುಧೀಂದ್ರ ಶಿಂಧೆಯವರನ್ನ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಳಗಾವಿ ಪ್ಯಾಂಥರ್ಸ್ ತಂಡದ ಕೋಚ್ ಆಗಿರುವ ಶಿಂಧೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಕೂಡ ಆಗಿದ್ದಾರೆ. ಸದ್ಯ ಶಿಂಧೆ ಮ್ಯಾಚ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿರುವ ಶಂಕೆ ಮೇರೆಗೆ ತನಿಖೆ ಮುಂದುವರೆಸಿದ್ದಾರೆ. ಮತ್ತೊಂದೆಡೆ ಸೈಯದ್ ಮುಷ್ತಾಕ್ ಅಲಿ ಟ್ರೋಪಿ ಸದ್ಯ ಮುಗಿದಿದ್ದು ಈ ತಂಡದಲ್ಲಿ ಆಟವಾಡಿದ ಕೆಲ ಆಟಗಾರರು ಕೆಪಿಎಲ್‌ನಲ್ಲಿಯೂ ಆಟವಾಡಿದ್ದರು.
ಹೀಗಾಗಿ ಸೈಯದ್ ಮುಷ್ತಾಕ್ ಅಲಿ ತಂಡದಲ್ಲಿ ಆಟವಾಡಿದ ಆಟಗಾರ ಅಭಿಮನ್ಯು ಸೇರಿದಂತೆ ಕೆಲವರು ಕೆಪಿಎಲ್ ಹಗರಣದಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆ ನೋಟಿಸ್ ನೀಡಿದ್ದರು. ಸದ್ಯ ಮ್ಯಾಚ್ ಮುಗಿದ ಹಿನ್ನೆಲೆ ನಾಳೆಯಿಂದ ಹಲವಾರು ಆಟಗಾರರು ವಿಚಾರಣೆಗೆ ಹಾಜರಾಗಲಿದ್ದಾರೆ.