ಬೆಂಗಳೂರು: ಕೆಪಿಜೆಪಿ ಕಾಂಗ್ರೆಸ್ ಜತೆ ವಿಲೀನವಾಗಿಲ್ಲ ಎಂದು ಅನರ್ಹ ಶಾಸಕ ಆರ್ ಶಂಕರ್ ತಿಳಿಸಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸದ ಎದುರು ಮಾತನಾಡಿದ ಅವರು, ನಾನು ರಮೇಶ್ ಜಾರಕಿಹೊಳಿ ಜೊತೆ ಬಹಳ ದಿನಗಳಿಂದ ಇದ್ದೇನೆ. ಇದಕ್ಕೆ ಸ್ಪೀಕರ್ ಸಹ ನನಗೆ ಕ್ರಮಬದ್ಧವಾಗಿ ದಾಖಲೆ ಮತ್ತು ಮನವಿ ಕೊಡಿ ಅಂತ ಹೇಳಿದ್ರು. ಆದ್ರೆ ನಾನು ದಾಖಲೆ ಕೊಡದೆ ಇರುವುದಕ್ಕೆ ನನ್ನನ್ನು ಅನರ್ಹ ಮಾಡಿದ್ದಾರೆ. ಇದನ್ನ ಸುಪ್ರೀಂಕೋರ್ಟ್ ಒಪ್ಪಲ್ಲ. ನನ್ನ ಕ್ಷೇತ್ರದಲ್ಲಿ ಉಪಚುನಾವಣೆ ಆಗಲ್ಲ. ನಾನು ಈಗಲೂ ಪಕ್ಷೇತರ ಶಾಸಕ ಅಂತ ಹೇಳಿದ್ದಾರೆ.
ಸರ್ಕಾರದ ಜೊತೆ ಇರಬೇಕು ಅಂದುಕೊಂಡಿದ್ವಿ. ಆದ್ರೆ ಸರ್ಕಾರದಲ್ಲಿ ಆದ ಕೆಲ ಘಟನೆಗಳಿಂದ ಬೆಂಬಲ ವಾಪಸ್ ಪಡೆಯುವ ನಿರ್ಧಾರ ಮಾಡಬೇಕಾಯಿತು. ಸುಪ್ರೀಂ ಕೋರ್ಟ್ನಲ್ಲಿ ನಮಗೆ ನ್ಯಾಯ ಸಿಗುವುದು ಖಚಿತವೆಂದು ಶಂಕರ್ ಭವಿಷ್ಯ ನುಡಿದಿದ್ದಾರೆ.