ಬೆಂಗಳೂರು: ಕೆಲವರು ಪಕ್ಷಕ್ಕೆ ಬಂದು ಸುಮ್ಮನೆ ಕೂರ್ತಾರೆ, ಒಂದು ಬಾವುಟ ಕಟ್ಟಲ್ಲ, ನಾಲ್ಕು ವೋಟ್ ಹಾಕಿಸಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚ್ಯವಾಗಿ ಹೇಳಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಸಿಎಂ ಡಿ.ದೇವರಾಜ್ ಅರಸು ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿನ ನಿಷ್ಕ್ರಿಯ ನಾಯಕರ ಬಗ್ಗೆ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲವರು ಪಕ್ಷಕ್ಕೆ ಬಂದು ಸುಮ್ಮನೆ ಕೂರ್ತಾರೆ. ಒಂದು ಬಾವುಟ ಕಟ್ಟಲ್ಲ, ನಾಲ್ಕು ವೋಟ್ ಹಾಕಿಸಲ್ಲ. ಕೆಲಸ ಮಾಡೋರ ಬಗ್ಗೆ ಕ್ಯಾರೆಕ್ಟರ್ ಸರಿಯಿಲ್ಲ ಅಂತಾರೆ. ಚಾಕು, ಚೂರಿ ಎಂದು ದೂರು ಹೇಳುತ್ತಾರೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜೀವ್ ಗಾಂಧಿ ಯೂತ್ ಕಾಂಗ್ರೆಸ್ ಸದಸ್ಯರನ್ನ ಕೊರಿಯಾಗೆ ಕಳಿಸಿದರು. ನನ್ನ ಹೆಸರು ನೋಡಿ ಕೆಲ ಸಂಸದರು ದೂರು ಹೇಳಿದ್ದರು. ಅವನನ್ನು ಕಳಿಸಿದರೆ ಪಕ್ಷದ ಮರ್ಯಾದೆ ಹೋಗುತ್ತೆ ಎಂದು ಹೇಳಿದ್ದರು. ಆ ಮೇಲೆ ನನ್ನ ಬಗ್ಗೆ ಮಾಹಿತಿ ಪಡೆಯುವಂತೆ ಅವರ ಆಪ್ತ ಕಾರ್ಯದರ್ಶಿಗೆ ಸೂಚನೆ ಕೊಟ್ಟರು. ಅವರು ರಿಪೋರ್ಟ್ ಕೊಟ್ಟ ಬಳಿಕ ಎಂಟು ಜನ ಸಂಸದರಿಗೆ ರಾಜೀವ್ ಗಾಂಧಿ ತಿಳಿ ಹೇಳಿದರು. ಯಾರನ್ನೂ ಕಾಂಟ್ರವರ್ಸಿ ಎಂದು ತಿಳಿದುಕೊಳ್ಳಬೇಡಿ. ಅಂತವರೇ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದನ್ನ ಸ್ಮರಿಸಿದರು.
ನಮಗೊಂದು ಕಾನೂನು, ಅವರಿಗೊಂದು ಕಾನೂನು: ಈ ಕಾರ್ಯಕ್ರಮ ನಡೆಸಲು ನಮಗೆ ಸರ್ಕಾರ ಅನುಮತಿ ಕೊಟ್ಟಿಲ್ಲ. ಆದರೆ, ಬಿಜೆಪಿಯವರ ಜನಾಶೀರ್ವಾದ ಯಾತ್ರೆ ನಡೆಯುತ್ತಿದೆ. ಅವರಿಗೆಲ್ಲ ಅವಕಾಶ ಕೊಡುತ್ತಿದ್ದಾರೆ. ನಮಗೊಂದು ಕಾನೂನು, ಅವರಿಗೊಂದು ಕಾನೂನು ಎಂದು ಇದೇ ವೇಳೆ ಸರ್ಕಾರದ ವಿರುದ್ಧ ಡಿಕೆಶಿ ಹರಿಹಾಯ್ದರು.
ಇದನ್ನೂ ಓದಿ : ಸುಳ್ಳು ಹೇಳೋದ್ರಲ್ಲಿ ಕುಮಾರಸ್ವಾಮಿ ನಿಸ್ಸೀಮರು : ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ
ಖೂಬಾ ಸ್ವಾಗತಕ್ಕೆ ಬಂದೂಕು ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊನ್ನೆ ಒಬ್ಬರು ಕೇಂದ್ರ ಸಚಿವರು ಹೋಗಿದ್ದರು. ಆಗ ಡಿವೈಎಸ್ ಪಿ ಎಲ್ಲರೂ ಇದ್ದರು. ಎಸ್ ಪಿ ಅಲ್ಲಿ ಇದ್ರೋ ಇಲ್ವೋ ಗೊತ್ತಿಲ್ಲ. ನಾವು ಈಗ ಪೊಲೀಸರ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ. ಎಲ್ಲರಿಗೂ ಈ ರೀತಿ ಬಿಟ್ಟುಕೊಂಡು ಬಂದರೆ ಹೇಗೆ?. ಇದರ ಬಗ್ಗೆ ನಾವು ಗಮನಹರಿಸುತ್ತೇವೆ ಎಂದರು.