ETV Bharat / state

ಬಡವರ ಪರವಾಗಿ ನಾನು ಭಿಕ್ಷೆ ಎತ್ತಿ ಹಣ ಕೊಡುವೆ: ಊರಿಗೆ ಹೋಗುವವರಿಗೆ ಸೂಕ್ತ ವ್ಯವಸ್ಥೆ ಮಾಡಿ ಎಂದ ಡಿಕೆಶಿ - KSRTC bus stop

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಂದು ಕಾರ್ಮಿಕರ ಸಮಸ್ಯೆ ಆಲಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅವರಿಗೆ ತಮ್ಮ ತಮ್ಮ ಊರಿಗೆ ಕಳುಹಿಸಿಕೊಡಲು ಏನಾದರೂ ವ್ಯವಸ್ಥೆ ಮಾಡಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಲ್ಲಿ ವಿನಂತಿಸಿದರು.

DK Shivakumar
ಜನರ ಅಹವಾಲು ಆಲಿಸುತ್ತಿರುವ ಡಿಕೆ ಶಿವಕುಮಾರ್
author img

By

Published : May 2, 2020, 9:03 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಕೆಂಪೇಗೌಡ ಬಸ್ (ಕೆಎಸ್​ಆರ್​ಟಿಸಿ) ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿ ಪ್ರಯಾಣಿಕರ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಇದ್ದರು.

KPCC president DK Shivakumar listened workers problem in KSRTC bus stop
ಜನರ ಅಹವಾಲು ಆಲಿಸುತ್ತಿರುವ ಡಿ.ಕೆ.ಶಿವಕುಮಾರ್

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾರ್ಮಿಕರನ್ನು ಕರೆದೊಯ್ಯಲು ಇಲ್ಲಿಂದ ಬಸ್ ವ್ಯವಸ್ಥೆ ಮಾಡಲಾಗಿದ್ದು, ಇದು ಅತ್ಯಂತ ವ್ಯವಸ್ಥಿತವಾಗಿದೆ. ಮಧ್ಯಾಹ್ನದಿಂದ ಸಾಕಷ್ಟು ಕರೆಗಳನ್ನು ಸ್ವೀಕರಿಸಿದ್ದೇನೆ. ಇಲ್ಲಿ ಜನ ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ತಿಳಿದುಕೊಂಡಿದ್ದೇನೆ. ನಮ್ಮ ಬಡ ಜನರ ಸಮಸ್ಯೆಯನ್ನು ನೋಡಿ ತಿಳಿದುಕೊಳ್ಳಲು ಬಂದಿದ್ದೇನೆ. ಆದರೆ, ಕಾರ್ಮಿಕರು ಯಾರೂ ಇಲ್ಲಿಂದ ವಾಪಸ್ ತೆರಳುತ್ತಿಲ್ಲ. ಹೀಗಾಗಿ ಅವರನ್ನು ಊರಿಗೆ ಕಳುಹಿಸಿಕೊಡಲು ಏನಾದರೂ ವ್ಯವಸ್ಥೆ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಕಾರ್ಮಿಕರ ಸಮಸ್ಯೆ ಪರಿಹರಿಸಲಿ:

ಕಾರ್ಮಿಕ ಸಚಿವರು ಈ ಸಮಸ್ಯೆಯಿಂದ ನುಣುಚಿಕೊಳ್ಳುವ ಯತ್ನ ಮಾಡುವುದು ಸರಿಯಲ್ಲ. ಯಾರಾದರೂ ಸರಿ, ಇಲ್ಲಿಗೆ ಬಂದು ಕಾರ್ಮಿಕರ ಸಮಸ್ಯೆ ಪರಿಹರಿಸಲಿ. ನಗರದ ವಿವಿಧ ಭಾಗಗಳಿಂದ ಇಲ್ಲಿಗೆ ಸಾವಿರಾರು ಕಾರ್ಮಿಕರು ಆಗಮಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಗೆ ತೆರಳುವ ಸಲುವಾಗಿ ಇವರು ಆಗಮಿಸಿದ್ದು, ಸೂಕ್ತ ಸಾರಿಗೆ ವ್ಯವಸ್ಥೆ ಆಗಿಲ್ಲ. ಅದು ಆಗುವವರೆಗೂ ಪರ್ಯಾಯ ವ್ಯವಸ್ಥೆ ಹಾಗೂ ವಸತಿ ಊಟದ ಸೌಲಭ್ಯ ಕಲ್ಪಿಸಬೇಕು. ರಾಜ್ಯದ ವಿವಿಧ ಭಾಗಗಳಿಗೆ ಮಾತ್ರವಲ್ಲ, ದೇಶದ ವಿವಿಧ ರಾಜ್ಯಗಳಿಗೆ ತೆರಳುವ ಸಲುವಾಗಿ ಇಲ್ಲಿಗೆ ಆಗಮಿಸಿದ್ದಾರೆ. ಇಂಥವರಿಗೆ ಸೌಲಭ್ಯ ಕಲ್ಪಿಸಿಕೊಡಬೇಕು ಎಂದರು.

ಅಂತಹ ಅಧಿಕಾರ ನಿಮಗೆ ಯಾಕೆ ಬೇಕು?

ಇಲ್ಲಿಗೆ ಬಂದು ಸಮಸ್ಯೆ ಅನುಭವಿಸುತ್ತಿರುವ ಕಾರ್ಮಿಕರಿಗೆ ರಕ್ಷಣೆ ಕೊಡುವವರು ಯಾರು? ಕನಿಷ್ಠ 200 ಬಸ್ಸುಗಳು ಸಾಕು. ಅದನ್ನು ನೀಡಿದರೆ ಅಗತ್ಯ ಪ್ರಮಾಣದ ಮೊತ್ತವನ್ನು ನಾನೇ ಭರಿಸುತ್ತೇನೆ. ಬಡವರ ಪರವಾಗಿ ನಾನು ಭಿಕ್ಷೆ ಎತ್ತಿ ಹಣ ಕಟ್ಟುತ್ತೇನೆ. ಸಾಕಷ್ಟು ಜನ ಡೊನೇಶನ್ ನೀಡಿದ್ದಾರೆ. ನಾನು ಹಣ ಕಟ್ಟಲು ಸಿದ್ಧವಿದ್ದೇನೆ. ನಾವು ಸಂಗ್ರಹಿಸಿದ ಹಣದಲ್ಲಿ ಬಡವರಿಗೆ ನೀಡಲು ಸಿದ್ಧವಿದ್ದೇನೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಅನುಸರಿಸಿರುವ ಕ್ರಮವನ್ನು ಅನುಸರಿಸಿ. ವಿವಿಧ ಸಂಘ-ಸಂಸ್ಥೆಗಳು ನಗರದ ವಿವಿಧೆಡೆ ಊಟ-ಉಪಹಾರ ಹಂಚುತ್ತಿದ್ದು, ದಯವಿಟ್ಟು ಇಲ್ಲಿ ಬಂದು ಹಂಚಿ ಎಂದು ಮನವಿ ಮಾಡುತ್ತೇನೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಸರ್ಕಾರಕ್ಕೆ ಯಾವ ರೀತಿ ಕಾರ್ಯನಿರ್ವಹಣೆ ಮಾಡಬೇಕೆಂಬ ಬಗ್ಗೆ ಅರಿವಿಲ್ಲ. ಯಾವೊಬ್ಬ ಕಾರ್ಮಿಕರಿಗೂ ನ್ಯಾಯ ಒದಗಿಸಲು ಇವರಿಂದ ಸಾಧ್ಯವಾಗುತ್ತಿಲ್ಲ. ಹತ್ತರಿಂದ ಇಪ್ಪತ್ತು ಕಿ.ಮೀ. ನಡೆದು ಇಲ್ಲಿಗೆ ಬಂದು ತಲುಪಿರುವ ಅವರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಊರಿಗೆ ತೆರಳಲು ಇವರೆಲ್ಲ ಈಗಾಗಲೇ ಹಣ ಸಂದಾಯ ಮಾಡಿದ್ದಾರೆ. ಆದರೆ ಬಸ್​ನಲ್ಲಿ ಇಂತಿಷ್ಟೇ ಮಂದಿ ತೆರಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿ, ಕೆಲವರನ್ನು ಇಲ್ಲಿಯೇ ಬಿಡಲಾಗಿದೆ. ಕೆಲ ಬಸ್​ಗಳನ್ನು ರದ್ದು ಮಾಡಲಾಗಿದ್ದು, ಇಂದು ಇಲ್ಲಿಂದ ಕಳಿಸಿಕೊಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲಾಗಿದೆ. ಇವರಲ್ಲಿ ಹೆಚ್ಚಿನವರು ಹಾಸ್ಟೆಲ್​ಗಳನ್ನು ಖಾಲಿ ಮಾಡಿ ಹೊರ ಬಂದಿದ್ದಾರೆ. ವಾಪಸ್ ತೆರಳಲು ಸಾಧ್ಯವಿಲ್ಲ.

ಬೇರೆ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಶ್ರಮಿಕ ರೈಲು ಸಂಚಾರ ಆರಂಭಿಸಿದೆ. ಆದರೆ, ನಾವು ಕೇಂದ್ರ ರೈಲ್ವೆ ಸಚಿವರನ್ನು ಹೊಂದಿದ್ದರೂ ಒಂದು ರೈಲು ಸಂಚಾರ ಮಾಡಿಸಲು ಇವರ ಕೈಯಲ್ಲಿ ಸಾಧ್ಯವಾಗಿಲ್ಲ. ಅಕ್ಕಪಕ್ಕದ ರಾಜ್ಯಗಳು ಉಚಿತ ರೈಲು ಸಂಚಾರ ವ್ಯವಸ್ಥೆ ಮಾಡಿವೆ. ಆದರೆ, ಇಲ್ಲಿ ವ್ಯವಸ್ಥೆ ಆಗುತ್ತಿಲ್ಲ. ಕೇರಳ, ಗುಜರಾತ್, ರಾಜಸ್ಥಾನ ಮತ್ತು ಇತರ ರಾಜ್ಯಗಳು ಉಚಿತವಾಗಿ ಅಲ್ಲಿದ್ದ ಬೇರೆ ರಾಜ್ಯದ ಕಾರ್ಮಿಕರನ್ನು ಕರೆದುಕೊಂಡು ಬಂದಿರುವುದನ್ನು ನೋಡಿದ್ದೇವೆ. ನಗರದಲ್ಲಿರುವ 100ರಿಂದ 150 ಬಸ್​​ಗಳನ್ನು ತಂದು ಇವರನ್ನು ಕಳಿಸಿಕೊಡುವ ಪ್ರಯತ್ನ ಮಾಡಿ ಎಂದು ಸಿಎಂಗೆ ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರೆ ಸಚಿವರನ್ನು ಕಳಿಸಿ ಜನರ ಕಷ್ಟ ಆಲಿಸಿ. ಜನರು ನನಗೆ ಪರಿಹಾರದ ರೂಪದಲ್ಲಿ ನೀಡಿರುವ ಹಣವನ್ನು ಇವರ ಸಮಸ್ಯೆ ಪರಿಹರಿಸಲು ನೀಡುತ್ತೇನೆ. ಎಷ್ಟು ಮೊತ್ತವನ್ನು ನಾವು ಕೊಡಬೇಕು ಎಂದು ತಿಳಿಸಿ, ನಾನು ಕೈಯಿಂದ ಪಾವತಿಸಲು ಸಿದ್ಧ ಎಂದರು.

ಅಂತರ ಕಾಪಾಡದ ಡಿಕೆಶಿ:

ಸ್ಥಳದಲ್ಲೇ ನೆಲದ ಮೇಲೆ ಕುಳಿತು ಜನರ ಅಹವಾಲನ್ನು ಡಿಕೆಶಿ ಇದೇ ಸಂದರ್ಭ ಆಲಿಸಿದರು. ಊರಿಗೆ ತೆರಳುವ ವ್ಯವಸ್ಥೆ ಆಗುವವರೆಗೂ ನಾವು ಇಲ್ಲಿಂದ ಹೊರಡುವುದಿಲ್ಲ ಎಂದು ಕೆಲ ಮಹಿಳೆಯರು ಇದೇ ವೇಳೆ ತಮ್ಮ ನೋವನ್ನು ತೋಡಿಕೊಂಡರು. ನೂರಾರು ಮಂದಿ ಸೇರಿದ್ದ ಸ್ಥಳದಲ್ಲಿ ಯಾರೊಬ್ಬರೂ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದು ಕಂಡು ಬರಲಿಲ್ಲ. ಖುದ್ದು ಜನರನ್ನ ಮಾತನಾಡಿಸುವ ಸಂದರ್ಭ ಡಿಕೆಶಿ ಮಾಸ್ಕ್ ತೆಗೆದಿರಿಸಿದ್ದು ಕಂಡು ಬಂತು. ಜನ ತಮ್ಮೂರಿಗೆ ತೆರಳುವ ಭರಾಟೆಯಲ್ಲಿ ಸೂಕ್ತ ಮುಂಜಾಗ್ರತೆಯನ್ನು ಮರೆತಿದ್ದು ಕೆಂಪೇಗೌಡ ಬಸ್ ನಿಲ್ದಾಣದ ಮುಂಭಾಗ ಗೋಚರಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.