ಬೆಂಗಳೂರು: ರೈತ ಆರೋಗ್ಯ ಸಂಜೀವಿನಿ ಆ್ಯಂಬುಲೆನ್ಸ್ ಸೇವೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಚಾಲನೆ ನೀಡಲಿದ್ದಾರೆ.
ಕರ್ನಾಟಕ ಕಿಸಾನ್ ಕಾಂಗ್ರೆಸ್ ಆಯೋಜಿಸಿರುವ ಈ ಕಾರ್ಯಕ್ರಮ ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿದೆ. ಈ ಸಂದರ್ಭ ರಾಜ್ಯದಲ್ಲಿ 8 ರೈತ ಆರೋಗ್ಯ ಸಂಜೀವಿನಿ ಆ್ಯಂಬುಲೆನ್ಸ್ ಸೇವೆಗೆ ಲಭ್ಯವಾಗಲಿವೆ. ದಾವಣಗೆರೆ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಗಂಗಾ ಬಸವರಾಜ್ ನೇತೃತ್ವದಲ್ಲಿ ಚನ್ನಗಿರಿ ವಿಧಾನಸಭೆ ವ್ಯಾಪ್ತಿಯಲ್ಲಿ 3 ರೈತ ಆರೋಗ್ಯ ಸಂಜೀವಿನಿ ಆ್ಯಂಬುಲೆನ್ಸ್ ಇಂದಿನಿಂದ ಸೇವೆಗೆ ಲಭ್ಯವಾಗಲಿವೆ.
ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಮಂಜುನಾಥ್ ಉತ್ತರ ಕರ್ನಾಟಕ, ಉತ್ತರ ಕನ್ನಡ ವ್ಯಾಪ್ತಿಯ ಕಿಸಾನ್ ಕಾಂಗ್ರೆಸ್ ನಾಯಕ ಶಿವಾನಂದ ಹೆಗ್ಡೆ ಕುಮಟ, ರಾಜ್ಯ ಕಿಸಾನ್ ಕಾಂಗ್ರೆಸ್ ಸಂಚಾಲಕರುಗಳಾದ ಸಿದ್ದು ಕೊಣ್ಣೂರು ಹಾಗು ಪದ್ಮಜೀತ್ ಜೈನ್ ತೆರೆದಾಳ್ ಅವರ ನೇತೃತ್ವದಲ್ಲಿ 5 ರೈತ ಆರೋಗ್ಯ ಸಂಜೀವಿನಿ ಆ್ಯಂಬುಲೆನ್ಸ್ ಸೇವೆ ಆರಂಭಿಸಿದೆ.
ರೈತರಿಗೆ ಉಚಿತ ಸೇವೆ:
ಕರ್ನಾಟಕ ಕಿಸಾನ್ ಕಾಂಗ್ರೆಸ್ ವತಿಯಿಂದ ರಾಜ್ಯಾದ್ಯಂತ ಸರ್ಕಾರದ ಮುಖ್ಯಕಾರ್ಯದರ್ಶಿಗಳ ಸುತ್ತೋಲೆ ಅಡಿಯಲ್ಲಿ ಕಿಸಾನ್ ಪದಾಧಿಕಾರಿಗಳು ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ನೇರವಾಗಿ ರೈತರಿಂದ ತರಕಾರಿಗಳನ್ನು ಅಂದಿನ ಮಾರುಕಟ್ಟೆ ದರಕ್ಕೆ ಖರೀದಿಸಿ ಗ್ರಾಮೀಣ ಜನರಿಗೆ ಉಚಿತವಾಗಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.
ಚನ್ನಗಿರಿಯಲ್ಲಿ ಖರೀದಿಸಿದ ತರಕಾರಿಗಳನ್ನು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಾಂಕೇತಿಕವಾಗಿ ವಿತರಣೆ ಮಾಡುವ ಮೂಲಕ ಇಂದು ಚಾಲನೆ ನೀಡಲಿದ್ದಾರೆ. ನಾಳೆಯಿಂದ ಇತರ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ತಿಳಿಸಿದ್ದಾರೆ.
ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದ ವಿಶೇಷ ಚೇತನ : ಆಸ್ಪತ್ರೆಗೆ ಸೇರಿಸಿ ಸಂಸದ ಡಿ ಕೆ ಸುರೇಶ್ ಮಾನವೀಯತೆ