ETV Bharat / state

'ಕೈ'ನಲ್ಲಿ ಎರಡು ಶಕ್ತಿ ಕೇಂದ್ರಗಳ ನಡುವೆ ತಿಕ್ಕಾಟ: ಕೆಪಿಸಿಸಿ ವಿವಿಧ ಸಮಿತಿಗಳಿಗೆ ನೇಮಕ ಪ್ರಕ್ರಿಯೆ ನೆನೆಗುದಿಗೆ - ಕಾಂಗ್ರೆಸ್​ ಲೇಟೆಸ್ಟ್ ನ್ಯೂಸ್​

2019ರ ಜೂನ್ ತಿಂಗಳಲ್ಲಿ ರಾಜ್ಯಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಉಳಿದೆಲ್ಲಾ ಸಮಿತಿಗಳು, ಪದಾಧಿಕಾರಿಗಳನ್ನು ವಿಸರ್ಜಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಅದಾಗಿ ವರ್ಷವಾಗುತ್ತಾ ಬಂದಿದೆ.

KPCC has not appointed members to various committees
ಕೆಪಿಸಿಸಿ ವಿವಿಧ ಸಮಿತಿ ನೇಮಕ ನನೆಗುದಿಗೆ
author img

By

Published : May 30, 2020, 11:07 AM IST

Updated : May 30, 2020, 2:17 PM IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಎರಡು ಶಕ್ತಿ ಕೇಂದ್ರಗಳು ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ವಿವಿಧ ಸಮಿತಿಗಳಿಗೆ ನೇಮಕ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ ಎಂಬ ಮಾತು ಕೇಳಿ ಬರುತ್ತಿದೆ.

2019ರ ಜೂನ್ ತಿಂಗಳಲ್ಲಿ ರಾಜ್ಯಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರನ್ನು ಹೊರತುಪಡಿಸಿ ಉಳಿದೆಲ್ಲಾ ಸಮಿತಿಗಳು, ಪದಾಧಿಕಾರಿಗಳನ್ನು ವಿಸರ್ಜಿಸಿ ಆದೇಶ ಹೊರಡಿಸಲಾಗಿತ್ತು. ಆದರೆ ಅದಾಗಿ ವರ್ಷವಾಗುತ್ತಾ ಬಂದಿದೆ. ಅಧ್ಯಕ್ಷರು ಬದಲಾಗಿದ್ದಾರೆ. ಕಾರ್ಯಾಧ್ಯಕ್ಷರು ಒಬ್ಬರ ಜಾಗದಲ್ಲಿ ಮೂವರಿದ್ದಾರೆ. ಆದರೆ ಹೊಸದಾಗಿ ಪದಾಧಿಕಾರಿಗಳನ್ನು ನೇಮಿಸಲು ಇನ್ನೂ ಕಾಲ ಕೂಡಿ ಬರುತ್ತಿಲ್ಲ. ಇದಕ್ಕೆ ಎರಡು ಶಕ್ತಿ ಕೇಂದ್ರಗಳು ಕಾಂಗ್ರೆಸ್​​ನಲ್ಲಿ ನಿರ್ಮಾಣ ಆಗಿರುವುದು ಹಾಗೂ ಅವರು ತಮ್ಮದೇ ಆದ ಮೇಲಾಟದಲ್ಲಿ ತೊಡಗಿರುವುದು ಕಾರಣ ಎನ್ನಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಎರಡು ಪ್ರಬಲ ಶಕ್ತಿ ಕೇಂದ್ರಗಳು ಕಾಂಗ್ರೆಸ್​​​ನಲ್ಲಿವೆ. ಇವರಿಬ್ಬರ ಮೇಲಾಟಕ್ಕೆ ಇಂದು ಸಮಿತಿಗಳ ನೇಮಕ ನನೆಗುದಿಗೆ ಬಿದ್ದಿದೆ. ತಮ್ಮ ಆಪ್ತರನ್ನು ನೇಮಿಸಬೇಕೆಂದು ಸಿದ್ದರಾಮಯ್ಯ ಹಾಗೂ ತಮಗೆ ಸರಿ ಹೊಂದುವವರನ್ನು ನೇಮಿಸಿಕೊಳ್ಳಬೇಕೆಂದು ಡಿ.ಕೆ.ಶಿವಕುಮಾರ್ ಯತ್ನ ನಡೆಸಿದ್ದು, ನೇಮಕ ಪ್ರಕ್ರಿಯೆಗೆ ಚಾಲನೆ ಸಿಗದಂತೆ ಆಗಿದೆ.

ಕೆಪಿಸಿಸಿ ಅಧ್ಯಕ್ಷ ಗಾದಿಗೆ ತಮ್ಮ ಆಪ್ತರನ್ನು ನೇಮಿಸಿಕೊಳ್ಳಲು ಸಾಧ್ಯವಾಗದೆ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ. ಅಲ್ಲದೇ ತಮಗೆ ಪರ್ಯಾಯ ಶಕ್ತಿಯಾಗಿ ಬೆಳೆಯುವ ಎಲ್ಲಾ ಅವಕಾಶ ಹೊಂದಿರುವ ಡಿಕೆಶಿ ಕೆಪಿಸಿಸಿ ಗಾದಿಗೆ ಏರಿರುವುದು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಂತ ಹಂತವಾಗಿ ಡಿಕೆಶಿ ಪಕ್ಷದಲ್ಲಿ ಸಿದ್ದರಾಮಯ್ಯರನ್ನು ಮೀರಿ ಮುಂದೆ ಹೋಗಲು ಯತ್ನಿಸುತ್ತಿದ್ದು, ಅದರಲ್ಲಿ ಸಫಲವಾಗುತ್ತಿದ್ದಾರೆ. ಈ ಹಂತದಲ್ಲಿ ಕೆಪಿಸಿಸಿ ಸಮಿತಿಗಳಿಗಾದರೂ ತಮ್ಮವರನ್ನು ನೇಮಿಸಿ ಕೊಂಚ ಹಿಡಿತ ಸಾಧಿಸಲು ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ತಮ್ಮ ಆಪ್ತ ಶಾಸಕರನ್ನು ಡಿಕೆಶಿ ಸುತ್ತ ಬಿಟ್ಟು ಪಕ್ಷದ ಮೇಲಿನ ಹಿಡಿತ ಇನ್ನಷ್ಟು ಬಲಪಡಿಸಿಕೊಳ್ಳಲು ನೋಡುತ್ತಿದ್ದಾರೆ. ಆದರೆ ಇದನ್ನೆಲ್ಲಾ ಅರಿತ ಡಿಕೆಶಿ ಇದಕ್ಕೆ ಅವಕಾಶ ನೀಡುತ್ತಿಲ್ಲ ಎನ್ನಲಾಗುತ್ತಿದೆ.

ಶಾಸಕರ ಮೇಲಿನ ಹಿಡಿತದ ಜೊತೆಗೆ ಪಕ್ಷದ ಮೇಲೂ ಒಂದಿಷ್ಟು ಹಿಡಿತ ಹೊಂದಿದ್ದರೆ ಹೇಗಾದರೂ 2023ರ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಬಂದರೆ ತಾವೇ ಸಿಎಂ ಆಗಬಹುದು ಎನ್ನುವ ಉದ್ದೇಶ ಸಿದ್ದರಾಮಯ್ಯರದ್ದು. ಆದರೆ ಅವರ ವಿಶ್ವಾಸದಿಂದಲೇ ಕೆಪಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿಕೆಶಿ ಈಗ ವರಸೆ ಬದಲಿಸಿದ್ದಾರೆ ಎನ್ನಲಾಗುತ್ತಿದೆ. 2023ರಲ್ಲಿ ತಾವು ಸಿಎಂ ಎಂದು ಹಿಂದೆಯೇ ಹೇಳಿದ್ದೆ. ಆ ನಿಟ್ಟಿನಲ್ಲಿ ಹೈಕಮಾಂಡ್ ಪಕ್ಷ ಕಟ್ಟಿ ಬೆಳೆಸುವ ಜವಾಬ್ದಾರಿ ನೀಡಿದೆ. ಇದರ ಜೊತೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುಂದುವರಿಯುತ್ತೇನೆ ಎಂದು ಆಪ್ತರ ಬಳಿ ಡಿಕೆಶಿ ಹೇಳಿಕೊಂಡಿದ್ದು ಸಿದ್ದರಾಮಯ್ಯಗೆ ತಿಳಿದಿದೆ ಎನ್ನಲಾಗಿದೆ.

ಹೇಗಾದರೂ ಪಕ್ಷದ ಹಿಡಿತ ಗಟ್ಟಿಗೊಳಿಸಿಕೊಳ್ಳಬೇಕೆಂದು ಸಿದ್ದರಾಮಯ್ಯನವರಿಗೆ ಬಿಟ್ಟು ಕೊಡಬಾರದು ಎಂದು ಡಿಕೆಶಿ ನಡೆಸಿರುವ ಹೋರಾಟದಿಂದಾಗಿ ಕೆಪಿಸಿಸಿ ವಿವಿಧ ಸಮಿತಿಗಳಿಗೆ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳ ನೇಮಕ ಕಾರ್ಯಕ್ಕೆ ಕಲ್ಲು ಬಿದ್ದಿದೆ. ಪಕ್ಷ ಸಂಘಟನೆ ಮಾಡಿ 2023ಕ್ಕೆ ಅಧಿಕಾರಕ್ಕೆ ತರುವ ಜವಾಬ್ದಾರಿ ಹೊತ್ತ ನಾಯಕರು ನಡೆದುಕೊಳ್ಳುತ್ತಿರುವ ರೀತಿ ಪಕ್ಷದ ಹಲವು ಹಿರಿಯ ನಾಯಕರಿಗೆ ಬೇಸರ ತರಿಸಿದ್ದು, ಏನೂ ಹೇಳಲೂ ಆಗದೆ, ಬಿಡಲೂ ಆಗದೆ ಪಕ್ಷದ ಚಟುವಟಿಕೆಯಿಂದಲೇ ದೂರ ಉಳಿದು ಬಿಟ್ಟಿದ್ದು ಸಮಿತಿ ರಚನೆ ಯತ್ನ ನಡೆದಿದೆ.

ವರ್ಷದ ಹಿಂದೆ ಹೈಕಮಾಂಡ್ ಸೂಚನೆ ಮೇರೆಗೆ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಕೆಪಿಸಿಸಿಯ ಎಲ್ಲಾ ಸಮಿತಿಗಳನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದರು. ಇದಾದ ಬಳಿಕ ಚುನಾವಣೆಗಳು ನಡೆದಿವೆ. ಸರ್ಕಾರ ಬದಲಾಗಿದೆ. ಕೆಪಿಸಿಸಿ ಅಧ್ಯಕ್ಷರು ಬದಲಾಗಿದ್ದಾರೆ. ಸಾಕಷ್ಟು ಪ್ರಮುಖ ಚಟುವಟಿಕೆಗಳು ಹಾಗೂ ಬೆಳವಣಿಗೆಗಳು ನಡೆದ ಹಿನ್ನೆಲೆ ಸಮಿತಿ ರಚನೆ ಸಾಧ್ಯವಾಗಿಲ್ಲ. ಇದೀಗ ಈ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರು ಗಮನ ಹರಿಸಿದ್ದು, ಆದಷ್ಟು ಬೇಗ ನೂತನ ಸಮಿತಿಗಳ ರಚನೆ ಆಗಲಿದೆ. ಈ ಮೂಲಕ ಪಕ್ಷದ ಸಂಘಟನೆ ಅತ್ಯಂತ ವ್ಯವಸ್ಥಿತವಾಗಿ ನಡೆಯಲಿದೆ.

2023ರಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಮ್ಮ ಆಶಯವಾಗಿದ್ದು, ಅದಕ್ಕೆ ಪೂರಕ ಬೆಳವಣಿಗೆಗಳನ್ನು ಮಾಡಿಕೊಳ್ಳಲಿದ್ದೇವೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.

ಸಮಿತಿಗಳ ರಚನೆಯಲ್ಲಿ ಇಬ್ಬರು ಹಿರಿಯ ನಾಯಕರ ನಡುವೆ ತಿಕ್ಕಾಟ ಸೃಷ್ಟಿಯಾಗಿರುವ ಬೆನ್ನಲ್ಲೇ ಪಕ್ಷದ ನಾಯಕರು ಇದಕ್ಕೆ ಸಮಜಾಯಿಷಿ ನೀಡುವ ಪ್ರಯತ್ನ ನಡೆಸಿದ್ದು, ಇವೆಲ್ಲ ಎಷ್ಟರ ಮಟ್ಟಿಗೆ ಫಲ ಕೊಡಲಿವೆ ಎನ್ನುವುದಕ್ಕೆ ಕಾಲವೇ ಉತ್ತರ ನೀಡಲಿದೆ.

Last Updated : May 30, 2020, 2:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.