ಬೆಂಗಳೂರು: ನಾಡನ್ನು ಕಾಡುವ ಹುಲಿಯನ್ನು ಕಾಡಿಗಟ್ಟದೇ ಬಿಡೆವು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹರಿಹಾಯ್ದಿದ್ದಾರೆ.
ಕಾಡಿಗೆ ಹುಲಿ ಓಡಿಸುತ್ತೇನೆ, ಬಂಡೆ ಒಡೆಯುತ್ತೇನೆ ಎಂದು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಒಬ್ಬ ಕಾಡು ಮನುಷ್ಯ. ನಾಗರಿಕ ಜಗತ್ತಲ್ಲಿ ಇರಲು ನಾಲಾಯಕ್ ಆಗಿರುವ ಈ ವ್ಯಕ್ತಿಯನ್ನು ನಾಡಿನ ಜನರ ಹಿತದೃಷ್ಟಿಯಿಂದ ಬಿಜೆಪಿ ತಕ್ಷಣ ಕಾಡಿಗೆ ಕೊಂಡು ಹೋಗಿ ಬಿಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಕ್ಕೆ ಬಿಜೆಪಿ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
![twitter](https://etvbharatimages.akamaized.net/etvbharat/prod-images/kn-bng-01-kota-pujari-tweet-script-7208080_23102020000736_2310f_1603391856_217.jpg)
ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕರ್ತರ ಸಂತೋಷಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾರೆ. ಬಂಡೆ ಒಡೆಯುವುದು, ಟಗರಿಗೆ ಡಿಕ್ಕಿ ಹೊಡೆಯುವುದು, ಸಾಂದರ್ಭಿಕ ಮಾತು ಎನ್ನುವುದು ನೆನಪಿರಲಿ ಎಂದು ಕಟೀಲ್ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಕಳೆದ ಉಪಚುನಾವಣೆಯಲ್ಲಿ 15ರಲ್ಲಿ 12ಕ್ಷೇತ್ರ ಗೆದ್ದಿದ್ದೇವೆ. ಮುಂದೆಯೂ ಶಿರಾ, ಆರ್.ಆರ್ ನಗರ ಗೆಲ್ಲುವುದು ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ. ನಾಡು ಕಾಡುವ ಹುಲಿಯನ್ನು ಕಾಡಿಗಟ್ಟದೆ ಬಿಡೆವು ಎಂದು ಕೋಟಾ ಶ್ರೀನಿವಾಸ ಪೂಜಾರಿ ಟ್ವೀಟ್ ಮಾಡಿದ್ದಾರೆ.