ಬೆಂಗಳೂರು : ರಾಬರಿ ಮತ್ತು ಮನೆಗಳ್ಳತನ ಮಾಡಿತ್ತಿದ್ದ ಕುಖ್ಯಾತ ಗ್ಯಾಂಗ್ ಅನ್ನು ಕೋಡಿಗೆಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಸೈಮನ್, ಜೀವನ್, ಮೋಹನ್, ಸಲ್ಮಾನ್ ಟಿಪ್ಪು ಮತ್ತು ಪುನೀತ್‌ಕುಮಾರ್ ಬಂಧಿತ ಆರೋಪಿಗಳು. ಸದ್ಯ ಬಂಧಿತರಿಂದ 25 ಲಕ್ಷ ಮೌಲ್ಯದ 650 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳು ಈ ಮೊದಲು ಮೇ 26ರಂದು ಟಿಆರ್ಬಿಆರ್ ಲೇಔಟನ್ ಶಶಿಕಲಾ ಎಂಬುವರ ಮನೆಗೆ ನುಗ್ಗಿ ದರೋಡೆ ಮಾಡಿದ್ದರು. ಮನೆಗೆ ನುಗ್ಗಿದ ಆರೋಪಿಗಳು ಮನೆಯವರಿಗೆ ಪಿಸ್ತೂಲ್ ತೋರಿಸಿ ಹೆದರಿಸಿ ಮನೆಯಲಿದ್ದ ವಸ್ತುಗಳನ್ನ ದರೋಡೆ ಮಾಡಿದ್ದರು.
ಈ ದರೋಡೆಕೋರರ ಗ್ಯಾಂಗ್ ಜೂಜಾಟ ಹಾಗೂ ಮೋಜಿನ ಜೀವನಕ್ಕಾಗಿ ರಾಬರಿ ಮಾಡುತ್ತಿದ್ದರು. ಮತ್ತೊಂದು ರಾಬರಿ ಮಾಡಲು ಹೊಂಚು ಹಾಕುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸದ್ಯ ಬಂಧಿತ ಆರೋಪಿಗಳಿಂದ ಪಿಸ್ತೂಲ್ ವಶಪಡಿಸಿಕೊಂಡ ಪೊಲೀಸರು, ಬಂಧನದ ನಂತರ ಆರೋಪಿಗಳಿಂದ 8 ಪ್ರಕರಣ ಪತ್ತೆಯಾಗಿವೆ. ಹೀಗಾಗಿ, ಉಳಿದ ಪ್ರಕರಣಗಳ ತನಿಖೆಯನ್ನ ಪೊಲೀಸರು ಮುಂದುವರೆಸಿದ್ದಾರೆ.