ETV Bharat / state

ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿದ್ದ ಆರು ಮಂದಿ ಕಿಡ್ನಾಪರ್ಸ್​ ಅಂದರ್​

author img

By

Published : Aug 3, 2019, 4:39 AM IST

ವ್ಯಕ್ತಿವೋರ್ವನನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಕಿಡ್ನಾಪರ್ಸ್​ ತಂಡವನ್ನು ಹೆಡೆಮುರಿ ಕಟ್ಟುವಲ್ಲಿ ಬೆಂಗಳೂರು ಚಾಮರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ 6 ಜನ ಆರೋಪಿಗಳನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.

ಆರು ಮಂದಿ ಅಪಹರಣಕಾರರ ಬಂಧನ

ಬೆಂಗಳೂರು : ಅಪಹರಣ ಪ್ರಕರಣವೊಂದರಲ್ಲಿ ಬಂಧಿಸಲು ಹೋಗಿದ್ದ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಆರು ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಚಾಮರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಸದ್ಯ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಇವರ ವಿರುದ್ಧ ವ್ಯಕ್ತಿವೋರ್ವನನ್ನು ಅಪಹರಿಸಿ, ಹಣಕ್ಕಾಗಿ ಬೆದರಿಕೆಯೊಡ್ಡಿದ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರು ಅವಿನ್ಯೂ ರಸ್ತೆಯ ಎಂ.ಆರ್.ಆರ್ ಲೈನ್ ನಿವಾಸಿ ಸತೀಶ್ ಬೋಹ್ರಾ ಎಂಬಾತನನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿತ್ತು. ಅಪಹರಣಕ್ಕೆ ಒಳಗಾಗಿದ್ದವ ಬೋಹ್ರಾ ಫ್ಯಾಬ್ರಿಕೇಷನ್ ಎಂಬ ಸ್ಟೀಲ್ ಅಂಗಡಿ ಮಾಲೀಕನಾಗಿದ್ದು, ಸ್ಟೀಲ್ ಅಂಗಡಿಯಲ್ಲಿ ದಿನವೊಂದಕ್ಕೆ ಸುಮಾರು ಒಂದೂವರೆ ಲಕ್ಷ ರೂಪಾಯಿ ವಹಿವಾಟು ನಡೆಯುತಿತ್ತು. ಕಳೆದ ಜುಲೈ 15 ರಂದು ಅಪಹರಣಕಾರರು ಸತೀಶ್ ಬೋಹ್ರಾನನ್ನು ಆಪಹರಿಸಿ 20 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದರು.

ಹಣ ಕೊಡಲಿಲ್ಲ ಅಂದರೆ ಜೀವ ತೆಗೆಯುವುದಾಗಿ ಸತೀಶ್ ಮನೆಯವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು. ಈ ಸಂಬಂಧ ಸತೀಶ್ ತಂದೆ ಮಾಂಗೀಲಾಲ್ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು‌ ನೀಡಿದ್ದರು. ದೂರು ಪಡೆದು ತನಿಖೆಗಿಳಿದ ಪೊಲೀಸರು ಸತೀಶ್ ಮನೆಯವರಿಂದಲೇ ಅಪಹರಣಕಾರರ ಬಳಿ ಮಾತನಾಡಿಸಿದ್ದರು. ಈ ವೇಳೆ 20 ಲಕ್ಷಕ್ಕೆ ಬದಲಾಗಿ 15 ಲಕ್ಷ ಕೊಡುವುದಾಗಿ ಒಪ್ಪಿಸಿ, ಮಫ್ತಿಯಲ್ಲಿ ಆರೋಪಿಗಳು ಹೇಳಿದ ಜಾಗಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳು ಹೇಳಿದಂತೆ 15 ಲಕ್ಷ ರೂಪಾಯಿ ಹಣವನ್ನು ರಸ್ತೆಯಲ್ಲಿಟ್ಟು ಕಾಯುತ್ತಿದ್ದ ಪೊಲೀಸರನ್ನೇ ವಂಚಿಸಿ ದುಡ್ಡನ್ನು ತೆಗೆದುಕೊಂಡು ಬೋಹ್ರಾನನ್ನು ತಳ್ಳಿ ಅಲ್ಲಿಂದ ಎಸ್ಕೇಪ್ ಆಗಿದ್ದರು. ಎಲ್ಲವನ್ನು ಕಣ್ಣಾರೆ ನೋಡುತ್ತಿದ್ದ ಪೊಲೀಸರು ಆರೋಪಿಗಳನ್ನ ಹಿಡಿಯುವಲ್ಲಿ ವಿಫಲರಾಗಿದ್ದರು. ಇದೀಗ ಪ್ರಕರಣವನ್ನ ಭೇದಿಸಿರುವ ಚಾಮರಾಜಪೇಟೆ ಪೊಲೀಸರು ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅಪಹರಣಕಾರರ ಬಂಧನ ಕುರಿತು ಪೊಲೀಸರಿಂದ ಮಾಹಿತಿ

ಆರೋಪಿಗಳ ಪೈಕಿ ಅಕ್ಬರ್ ಎಂಬಾತ ಇಡೀ ಅಪಹರಣ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗ್ತಿದೆ. ಈತ ಒಂದು ಕಾಲಕ್ಕೆ ಬೋಹ್ರಾನ ಸ್ಟೀಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಬೋಹ್ರಾ ಅಂಗಡಿಯಲ್ಲಿ ನಡೆಯುವ ವ್ಯವಹಾರಗಳ ಬಗ್ಗೆ ಮೊದಲೇ ತಿಳಿದುಕೊಂಡಿದ್ದ ಆತ, ತನ್ನ ಇತರ ಸ್ನೇಹಿತರ ಸಹಾಯದಿಂದ ಅಪಹರಣ ಮಾಡಿಸಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದ ಇನ್​ಸ್ಪೆಕ್ಟರ್ ಕುಮಾರಸ್ವಾಮಿ ಮತ್ತು ತಂಡ ಪ್ರಕರಣ ದಾಖಲಾಗಿ 10 ದಿನಗಳಲ್ಲಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Intro:nullBody:ಹಿಡಿಯಲು ಹೋದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಆರು ಮಂದಿ ಅಪಹರಣಕಾರರ ಬಂಧನ

ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಹಿಡಿಯಲು ಹೋಗಿದ್ದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಆರು ಮಂದಿ ಆರೋಪಿಗಳನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಸದ್ಯ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಸತೀಶ್ ಬೋಹ್ರಾ ಅಪಹರಣಕ್ಕೆ ಒಳಗಾಗಿದ್ದವ.
ಅವಿನ್ಯೂ ರಸ್ತೆಯ ಎಂ.ಆರ್.ಆರ್ ಲೈನ್ ನಲ್ಲಿರುವ ಬೋಹ್ರಾ ಫ್ಯಾಬ್ರಿಕೇಷನ್ ಮಾಲೀಕನಾಗಿದ್ದು, ಸ್ಟೀಲ್ ಅಂಗಡಿಯಲ್ಲಿ ದಿನವೊಂದಕ್ಕೆ ಸುಮಾರು ಒಂದೂವರೆ ಲಕ್ಷ ವಹಿವಾಟು ನಡೆಯುತಿತ್ತು. ತಂದೆ ಮಾಂಗೀಲಾಲ್ ರಿಂದ ಬಂದ ಆಸ್ತಿ ಇದೀಗ ಸತೀಶ್ ತಲೆಮಾರಿಗೆ ಬಂದಿತ್ತು‌. ಕಳೆದ ಜುಲೈ 15 ರಂದು ಅಪಹರಣಕಾರರು ಸತೀಶ್ ಬೋಹ್ರಾನ ಕಿಡ್ನ್ಯಾಪ್ ಮಾಡಿ 20 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದರು.
ಹಣ ಕೊಡಲಿಲ್ಲ ಅಂದರೆ ಜೀವ ತೆಗೆಯುವುದಾಗಿ ಸತೀಶ್ ಮನೆಯವರಿಗೆ ಫೋನ್ ಮಾಡಿ ಬೆದರಿಕೆ ಹಾಕಿದ್ಧರು.
ಈ ಸಂಬಂಧ ಸತೀಶ್ ತಂದೆ ಮಾಂಗೀಲಾಲ್ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ದೂರು‌ ನೀಡಿದ್ದರು. ದೂರು ಪಡೆದು ತನಿಖೆಗಿಳಿದ ಪೊಲೀಸರು ಸತೀಶ್ ಮನೆಯವರಿಂದಲೇ ಕಿಡ್ನ್ಯಾಪರ್ಸ್ ಬಳಿ ಮಾತನಾಡಿಸಿ, 20 ಲಕ್ಷಕ್ಕೆ ಬದಲಾಗಿ 15 ಲಕ್ಷ ಒಪ್ಪಿಸಿ, ಮಫ್ತಿಯಲ್ಲಿ ಹೊಸೂರು ರಸ್ತೆಗೆ ಹೋಗಿ, ಆರೋಪಿಗಳು ಹೇಳಿದ ಜಾಗಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳು ಹೇಳಿದಂತೆ 15 ಲಕ್ಷ ರಸ್ತೆಯಲ್ಲಿಟ್ಟು ಕಾಯುತ್ತಿದ್ದ ಪೊಲೀಸರನ್ನೇ ವಂಚಿಸಿ 15 ಲಕ್ಷ ಹೊತ್ತೊಯ್ದ ಅಪಹರಣಕಾರರು ಬೋಹ್ರನನ್ನ ತಳ್ಳಿ ಅಲ್ಲಿಂದ ಎಸ್ಕೇಪ್ ಆಗಿದ್ದರು. ಎಲ್ಲವನ್ನು ಕಣ್ಣಾರೆ ನೋಡ್ತಿದ್ದ ಪೊಲೀಸ್ರು ಆರೋಪಿಗಳನ್ನ ಹಿಡಿಯುವಲ್ಲಿ ವಿಫಲರಾಗಿದ್ದರು. ಸದ್ಯ, ಪ್ರಕರಣವನ್ನ ಬೇಧಿಸಿರುವ ಚಾಮರಾಜಪೇಟೆ ಪೊಲೀಸರು ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ಅಕ್ಬರ್ ಎಂಬಾತ ಇಡೀ ಕಿಡ್ನ್ಯಾಪ್ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗಿದ್ದು, ಈತ ಒಂದು ಕಾಲಕ್ಕೆ ಬೋಹ್ರಾರ ಸ್ಟೀಲ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ. ಬೋಹ್ರಾ ಅಂಗಡಿಯಲ್ಲಿ ನಡೆಯುವ ವ್ಯವಹಾರಗಳ ಬಗ್ಗೆ ಮೊದಲೇ ತಿಳಿದುಕೊಂಡಿದ್ದ ಆತ, ತನ್ನ ಇತರ ಸ್ನೇಹಿತರನ್ನ ಕರೆಯಿಸಿ ಕಿಡ್ನ್ಯಾಪ್ ಮಾಡಿಸಿದ್ದ.. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಇನ್ ಸ್ಪೆಕ್ಟರ್ ಕುಮಾರಸ್ವಾಮಿ ಮತ್ತು ತಂಡ ಪ್ರಕರಣ ದಾಖಲಾಗಿ 10 ದಿನಗಳಲ್ಲಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.
Conclusion:Mojo byte

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.