ETV Bharat / state

ಜನಗಣತಿ ನಡೆಸಿ, ಜಾತಿ ಆಧಾರಿತ ವರದಿ ಬಿಡುಗಡೆಗಾಗಿ ಪ್ರಧಾನಿಗೆ ಮಲ್ಲಿಕಾರ್ಜುನ್​ ಖರ್ಗೆ ಪತ್ರ - ಜನಗಣತಿ ನಡೆಸಲು ಪಿಎಂಗೆ ಖರ್ಗೆ ಪತ್ರ

ಜನಗಣತಿ ನಡೆಸುವುದರ ಜೊತೆಗೆ 2011 ರಲ್ಲಿ ಕಾಂಗ್ರೆಸ್​ ಸರ್ಕಾರ ನಡೆಸಿದ್ದ ಜಾತಿ ಆಧಾರಿತ ಗಣತಿಯ ವರದಿಯನ್ನು ಬಿಡುಗಡೆ ಮಾಡುವಂತೆ ಮಲ್ಲಿಕಾರ್ಜುನ್​ ಖರ್ಗೆ ಅವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.

ಪ್ರಧಾನಿಗೆ ಮಲ್ಲಿಕಾರ್ಜುನ್​ ಖರ್ಗೆ ಪತ್ರ
ಪ್ರಧಾನಿಗೆ ಮಲ್ಲಿಕಾರ್ಜುನ್​ ಖರ್ಗೆ ಪತ್ರ
author img

By

Published : Apr 17, 2023, 12:44 PM IST

Updated : Apr 17, 2023, 2:10 PM IST

ಬೆಂಗಳೂರು/ ನವದೆಹಲಿ: ದೇಶಾದ್ಯಂತ ನಿಯಮಿತವಾಗಿ 10 ವರ್ಷಕ್ಕೊಮ್ಮೆ ನಡೆಸಲಾಗುವ ಜನಗಣತಿಯನ್ನು ನಡೆಸಲಾಗಿಲ್ಲ. ಅದನ್ನು ತಕ್ಷಣವೇ ಮಾಡಬೇಕು. ಇದರೊಂದಿಗೆ 2011 ರಲ್ಲಿ ಕಾಂಗ್ರೆಸ್​ ನಡೆಸಿದ ಜಾತಿ ಗಣತಿ ವರದಿಯನ್ನೂ ಪ್ರಕಟಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಪತ್ರ ಬರೆದಿದ್ದಾರೆ. ರಾಹುಲ್​ ಗಾಂಧಿ ಅವರು ಈ ವಿಷಯವಾಗಿ ಒತ್ತಾಯಿಸಿದ ಬೆನ್ನಲ್ಲೇ ಖರ್ಗೆ ಅವರೂ ಆಗ್ರಹಿಸಿದ್ದಾರೆ.

  • My letter to the Prime Minister demanding the publication of Socio Economic Caste Census.

    Regular decennial Census was to be carried out in 2021 but it has not been conducted. We demand that it be done immediately and that a comprehensive Caste Census be made it’s integral part. pic.twitter.com/eoL52gRFC1

    — Mallikarjun Kharge (@kharge) April 17, 2023 " class="align-text-top noRightClick twitterSection" data=" ">

ಪಿಎಂಗೆ ತಾವು ಬರೆದಿರುವ ಪತ್ರವನ್ನು ಟ್ವೀಟ್​ ಮಾಡಿರುವ ಖರ್ಗೆ ಅವರು, 2011-12ರ ಅವಧಿಯಲ್ಲಿ ಯುಪಿಎ ಸರ್ಕಾರವು ಮೊದಲ ಬಾರಿಗೆ ಸುಮಾರು 25 ಕೋಟಿ ಕುಟುಂಬಗಳನ್ನು ಒಳಗೊಂಡ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯನ್ನು ನಡೆಸಿದೆ. ಆದರೆ, ಅದು ಈವರೆಗೂ ಪ್ರಕಟವಾಗಿಲ್ಲ. 2014 ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದ ಮೇಲೆ ಹಲವು ಬಾರಿ ವರದಿಯನ್ನು ಪ್ರಕಟ ಮಾಡಲು ಕೋರಲಾಗಿದೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಶೀಘ್ರವಾಗಿ ಪ್ರಕಟಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನವೀಕೃತ ಜಾತಿ ಗಣತಿಯ ಮಾಹಿತಿ ಇಲ್ಲದೇ ಇರುವುದು, ದಾಖಲೆಗಳ ಬಗ್ಗೆ ಅನುಮಾನವಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯಕ್ರಮಗಳಿಗೆ ಅದರಲ್ಲೂ ವಿಶೇಷವಾಗಿ ಒಬಿಸಿಗಳಿಗೆ ಯಾವ ರೀತಿಯ ಯೋಜನೆಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂಬುದರ ಬಗ್ಗೆ ಮಾಹಿತಿ ನೀಡಿ ಎಂದು ಕೋರಿದ್ದಾರೆ.

2021 ರ ವೇಳೆಗೆ ಮಾಡಬೇಕಿದ್ದ ಜನ ಗಣತಿಯನ್ನು ಸರ್ಕಾರ ಮುಂದೂಡಿದೆ. ಯಾವ ಕಾರಣಕ್ಕಾಗಿ ಗಣತಿ ನಡೆಸಲಾಗಿಲ್ಲ ಎಂಬುದು ಜನರಿಗೆ ಗೊತ್ತಾಗಬೇಕು. ಅಲ್ಲದೇ, ಕೂಡಲೇ ದೇಶದಲ್ಲಿ ಜನಗಣತಿ ನಡೆಸಬೇಕು. ಇದರಿಂದ ದೇಶದಲ್ಲಿರುವ ಜನಸಂಖ್ಯೆ ಮತ್ತು ಜಾತಿವಾರು ಲೆಕ್ಕಾಚಾರ ಲಭ್ಯವಾಗಲಿದೆ ಎಂದು ಟ್ವಿಟರ್​ನಲ್ಲಿ ಹಂಚಿಕೊಂಡ ಪತ್ರದಲ್ಲಿ ಹೇಳಿದ್ದಾರೆ.

  • #WATCH | Congress leader Rahul Gandhi says, "...If we want to take OBC in the country forward and give them their rights, the first step would be for the Prime Minister to release data of the OBC census. PM will never do this as he doesn't want the welfare of OBC. Congress will… pic.twitter.com/WHuuhBZjn3

    — ANI (@ANI) April 17, 2023 " class="align-text-top noRightClick twitterSection" data=" ">

ಕೋಲಾರದಲ್ಲಿ ರಾಹುಲ್​ ಗಾಂಧಿ ಆಗ್ರಹ: ಇದಕ್ಕೂ ಮೊದಲು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಇದೇ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದರು. ಕರ್ನಾಟಕದ ಕೋಲಾರದಲ್ಲಿ ಭಾನುವಾರ ನಡೆದ ಜೈ ಭಾರತ್​ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, 2011 ರಲ್ಲಿ ಕಾಂಗ್ರೆಸ್​ ನೇತೃತ್ವದ ಯುಪಿಎ ಸರ್ಕಾರ ನಡೆಸಿದ ಜಾತಿ ಗಣತಿಯನ್ನು ಕೇಂದ್ರ ಸರ್ಕಾರ ಮರೆಮಾಚಿದೆ. ಮೀಸಲಾತಿ ವಿಚಾರದಲ್ಲಿ ಸಮುದಾಯಗಳಿಗೆ ಅಗೌರವ ತೋರಲಾಗುತ್ತಿದೆ ಎಂದು ಆರೋಪಿಸಿ ವಾಗ್ದಾಳಿ ನಡೆಸಿದ್ದರು.

2011 ರಲ್ಲಿ ಜಾತಿ ಆಧಾತಿಯ ಜನಗಣತಿ ನಡೆಸಲಾಗಿತ್ತು. ಅದರಲ್ಲಿ ದೇಶದ ಜನಸಂಖ್ಯೆಯ ಜೊತೆಗೆ ಯಾವ ಸಮುದಾಯದ ಜನರು ಎಷ್ಟಿದ್ದಾರೆ ಎಂಬ ಮಾಹಿತಿಯೂ ಸಿಗುತ್ತದೆ. 2014 ರಿಂದ ಬಿಜೆಪಿ ಸರ್ಕಾರ ಯಾವ ಸಮುದಾಯಕ್ಕೆ ಏನೇನು ಯೋಜನೆಗಳನ್ನು ಜಾರಿಗೆ ಮಾಡಿದೆ ಎಂಬುದೂ ತಿಳಿಯುತ್ತದೆ. ಅದರಲ್ಲೂ ತಳಸಮುದಾಯದ ಬಗ್ಗೆ ಸರ್ಕಾರಕ್ಕಿರುವ ಕಾಳಜಿಯೂ ಗೊತ್ತಾಗಲಿದೆ ಎಂದು ಸವಾಲು ಹಾಕಿದ್ದರು.

ಜಾತಿ ಗಣತಿ ಸಮೀಕ್ಷೆ: ಸಾಮಾಜಿಕ- ಆರ್ಥಿಕ ಮತ್ತು ಜಾತಿ ಗಣತಿಯು ಗ್ರಾಮೀಣ ಮತ್ತು ನಗರ ಕುಟುಂಬಗಳ ಸಾಮಾಜಿಕ -ಆರ್ಥಿಕ ಸ್ಥಿತಿಯ ಸಮಗ್ರ ಅಧ್ಯಯನವಾಗಿದೆ. ಇದು ಜನಸಂಖ್ಯೆಯ ಜಾತಿ ಆಧಾರಿತ ಮಾಹಿತಿಯನ್ನು ಒದಗಿಸುತ್ತದೆ. 1931 ರ ನಂತರ ಸ್ಥಗಿತಗೊಂಡ ಜಾತಿ ಗಣತಿ ಸಮೀಕ್ಷೆಯನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ 2011 ರಲ್ಲಿ ನಡೆಸಿತ್ತು. ಆದರೆ, ಈವರೆಗೂ ಪ್ರಕಟವಾಗಿಲ್ಲ.

ಓದಿ: ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ; ಲಿಂಗಾಯತ ಮತದಾರರನ್ನು ಕಟ್ಟಿ ಹಾಕಲು ಕಮಲ ಕಲಿಗಳ ರಣತಂತ್ರ, ನಾಳೆ ಹುಬ್ಬಳ್ಳಿಗೆ ನಡ್ಡಾ..

Last Updated : Apr 17, 2023, 2:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.