ಬೆಂಗಳೂರು: ಪೊಲೀಸರ ಕರ್ತವ್ಯದ ಒತ್ತಡ ನಿವಾರಣೆಗಾಗಿ ವಿನೂತನ ಕಾರ್ಯಕ್ಕೆ ಮುಂದಾಗಿರುವ ಉತ್ತರ ವಿಭಾಗದ ಪೊಲೀಸರು ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿದರು.
ನಗರದ ಓರಾಯನ್ ಮಾಲ್ ಎದುರು ಉತ್ತರ ವಿಭಾಗದ ಡಿಸಿಪಿ ಎನ್.ಶಶಿಕುಮಾರ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಮನರಂಜನಾ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸದಾ ಕರ್ತವ್ಯದ ಒತ್ತಡದಲ್ಲಿ ನಿರತರಾಗಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರಿಗಾಗಿಯೇ ತಾನಾಜಿ ಚಿತ್ರ ವೀಕ್ಷಣೆಯನ್ನು ಆಯೋಜಿಸಿದ್ದು, ಈ ಚಿತ್ರವನ್ನು ಉತ್ತರ ವಿಭಾಗದ ಸುಮಾರು 500 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ವೀಕ್ಷಿಸಿದರು.
ಓರಿಯನ್ ಮಾಲ್‌ನ ಲೇಕ್ ಸೈಡಿನಲ್ಲಿ ಕಮ್ಯೂನಿಟಿ ಗಾಯಕಿ ಮತ್ತು ನಟಿ ವಸುಂಧರ ದಾಸ್ ಹಾಗೂ ಅವರ ತಂಡದವರು 2 ಗಂಟೆಗಳ ಕಾಲ ಡ್ರಮ್ ಸರ್ಕಲ್ ಅನ್ನು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಾಗಿ ನಡೆಸಿಕೊಟ್ಟರು.