ಬೆಂಗಳೂರು : ಕರ್ನಾಟಕದ ಗಡಿಭಾಗವಾಗಿರುವ ಕೇರಳ ರಾಜ್ಯಕ್ಕೊಳಪಟ್ಟಿರುವ ಕಾಸರಗೋಡು ಜಿಲ್ಲೆಯ ಹಲವು ಗ್ರಾಮಗಳ ಕನ್ನಡ ಹೆಸರನ್ನು ಮಲಯಾಳಂ ಭಾಷೆಗೆ ಅಲ್ಲಿನ ಸರ್ಕಾರದ ಸ್ಥಳೀಯ ಸಂಸ್ಥೆಗಳು ಬದಲಾಯಿಸಲು ಮುಂದಾಗಿವೆ. ಯಾವುದೇ ಅಭಿಪ್ರಾಯವನ್ನೂ ಕೇಳದೆ ಕೇರಳ ಸರ್ಕಾರ ಮಂಜೇಶ್ವರ ಹಾಗೂ ಕಾಸರಗೋಡಿನ ಕೆಲವು ಹಳ್ಳಿಗಳ ಹೆಸರನ್ನು ಬದಲಾಯಿಸಿರುವುದು ಆ ಭಾಗದ ಕನ್ನಡಿಗರ ಪರಂಪರಾಗತ ಭಾವನೆಗಳಿಗೆ ಧಕ್ಕೆ ತಂದಿದೆ.
ಅಲ್ಲಿನ ಕನ್ನಡಪರ ಸಂಘ-ಸಂಸ್ಥೆಗಳೂ ಕೂಡ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿವೆ. ಹೀಗಾಗಿ, ಈ ಬಗ್ಗೆ ಕರ್ನಾಟಕದ ಗಡಿ ಪ್ರದೇಶ ಅಭಿವೃದ್ಧಿಯ ಅಧ್ಯಕ್ಷರು, ಕೇರಳ ಸರ್ಕಾರದ ಮತ್ತು ಲೋಕೋಪಯೋಗಿ ಹಾಗೂ ಕಂದಾಯ ಸಚಿವರಿಗೆ 24-06-21ರಂದು ಪತ್ರ ಬರೆದು ಕಾಸಗೋಡಿನಲ್ಲಿರುವ ಗ್ರಾಮಗಳ ಹೆಸರನ್ನು ಯಾವುದೇ ಕಾರಣಕ್ಕೂ ಬದಲಾಯಿಸಬಾರದೆಂದು ಕೋರಿದ್ದಾರೆ.
ಅಲ್ಲದೆ ಕೇರಳ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳ ಕಾರ್ಯದರ್ಶಿಯಾದ ಪಿ.ರವಿಕುಮಾರ್ ಪತ್ರ ಬರೆಯಬೇಕೆಂದು, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನ ಡಾ.ಸಿ ಸೋಮಶೇಖರ್ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಕೇರಳ ಸರ್ಕಾರ ಬದಲಾಯಿಸಲು ಹೊರಟಿರುವ ಗ್ರಾಮದ ಹೆಸರುಗಳು
ಕನ್ನಡ ಗ್ರಾಮಗಳು ಮಲಯಾಳಂ
ಮಧೂರು ಮಧುರಮ್
ಕಾರಡ್ಕ ಕಡಗಮ್
ಪಿಳಿಕುಂಜೆ ಪಿಳಿಕುನ್ನು
ಮಂಜೇಶ್ವರ ಮಂಜೇಶ್ವರಮ್
ಕುಂಬಳೆ ಕುಂಬ್ಳಾ
ನೆಲ್ಲಿಕುಂಜ ನೆಲ್ಲಿಕುನ್ನಿ
ಮಲ್ಲ ಮಲ್ಲಮ್
ಬೇದಡ್ಕ ಬೇಡಗಮ್
ಆನೆಬಾಗಿಲು ಆನೆವಾಗಿಲ್
ಹೊಸದುರ್ಗ ಪುದಿಯಕೋಟ
ಸಸಿಹಿತ್ಲು ಶೈವಲಪ್