ಬೆಂಗಳೂರು : ಕೆಂಪೇಗೌಡ ಜಯಂತಿ ಆಚರಣೆಗೆ ಸೆ.10 ದಿನಾಂಕ ಮರುನಿಗದಿಯಾಗಿದೆ. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನದಿಂದ ಸೆ.2 ರ ದಿನ ಮುಂದೂಡಿಕೆಯಾಗಿ, ಸೆ.10 ಕ್ಕೆ ಮರುನಿಗದಿಯಾಗಿದೆ.
ಅಂದು ಪಾಲಿಕೆ ಸದಸ್ಯರೆಲ್ಲರ ಆಡಳಿತ ಅವಧಿಯೂ ಮುಕ್ತಾಯಗೊಳ್ಳಲಿದೆ. ಸರ್ಕಾರದ ಮಾರ್ಗಸೂಚಿಯಂತೆ ಹೆಚ್ಚಿನ ಜನ ಸೇರದೆ, ಆನ್ ಲೈನ್ ಮೂಲಕವೇ ಜಯಂತಿ ಆಚರಣೆಗೆ ಚಿಂತನೆ ನಡೆಸಲಾಗ್ತಿದೆ.
ಪಾಲಿಕೆ ಆವರಣದಲ್ಲಿ ನಡೆಯುವ ಕೊರೊನಾ ವಾರಿಯರ್ಗಳಿಗೆ ಕೆಂಪೇಗೌಡ ಪ್ರಶಸ್ತಿ ಪ್ರಧಾನ ಸಮಾರಂಭವೂ ಆನ್ ಲೈನ್ ಮೂಲಕವೇ ಮಾಡಿಕೊಡಲಾಗ್ತದೆ. ಆಯಾ ವಲಯಗಳಿಂದಲೇ ಕಾರ್ಪೊರೇಟರ್ಗಳಿಗೆ ವೀಕ್ಷಣೆಗೆ ಸಿದ್ಧತೆ ನಡೆಸುವ ಬಗ್ಗೆ ಚಿಂತನೆ ಇದೆ.
ಇನ್ನು ಸೆ.8ಕ್ಕೆ ಕೊನೆಯ ಪಾಲಿಕೆ ಕೌನ್ಸಿಲ್ ಸಭೆ ನಡೆಯಲಿದೆ. ಆದರೆ ಯಾವುದೇ ನಿರ್ಣಯಗಳಿಲ್ಲದೆ, ಪರಸ್ಪರ ಶುಭಕೋರುವ ಸಭೆ ಇದಾಗಲಿದೆ.