ETV Bharat / state

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ತಲೆ ಎತ್ತಲಿದೆ 'ಬೃಹತ್ ಕೆಂಪೇಗೌಡ ವನ' - ಕಬ್ಬನ್ ಪಾರ್ಕ್ ಮಾದರಿಯ ಉದ್ಯಾನವನ

ಬೃಹತ್ ಕೆಂಪೇಗೌಡ ವನದಲ್ಲಿ ದೇಶ-ವಿದೇಶಗಳಿಂದ ತರಿಸಿದ ಹಣ್ಣಿನ ಗಿಡಗಳು ಮತ್ತು ವಿವಿಧ ಜಾತಿಯ ಮರ, ಗಿಡಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
author img

By

Published : Mar 21, 2023, 7:39 PM IST

ಬೆಂಗಳೂರು : ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ರಾಷ್ಟ್ರದ ಗಮನ ಸೆಳೆಯುವ 'ಬೃಹತ್ ಕೆಂಪೇಗೌಡ ವನ ' ನಿರ್ಮಾಣವಾಗಲಿದೆ. ಬೆಂಗಳೂರು-ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಯಲಹಂಕ ವ್ಯಾಪ್ತಿಯ ಬೆಟ್ಟಹಲಸೂರಿನಲ್ಲಿ 173 ಎಕರೆ ಪ್ರದೇಶದಲ್ಲಿ ಈ ಕೆಂಪೇಗೌಡ ವನ ತಲೆ ಎತ್ತಲಿದೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರಿಗೆ ಈ ಕುರಿತು ಮಾಹಿತಿ ನೀಡಿದ ಕಂದಾಯ ಸಚಿವ ಆರ್ ಅಶೋಕ್ ಅವರು, ಈ ವನದಲ್ಲಿ ದೇಶ- ವಿದೇಶಗಳಿಂದ ತರಿಸಿದ ಹಣ್ಣಿನ ಗಿಡಗಳು ಮತ್ತು ವಿವಿಧ ಜಾತಿಯ ಮರ, ಗಿಡಗಳನ್ನು ಅಭಿವೃದ್ದಿಪಡಿಸಲಾಗುವುದು ಎಂದು ಹೇಳಿದರು.

ಭೂ ಮಾಫಿಯಾದಿಂದ ಸರ್ಕಾರಿ ಭೂಮಿಯನ್ನು ರಕ್ಷಿಸಲು ಈ ವನ ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ.‌ ಬೆಟ್ಟಹಲಸೂರಿನ ಈ ಭೂಮಿ ಸುಮಾರು 700 ಕೋಟಿ ರೂ. ಮೌಲ್ಯದ್ದಾಗಿದ್ದು, ಇದು ಭೂ ಮಾಫಿಯ ಕೈ ಸೇರದಂತೆ ನೋಡಿಕೊಳ್ಳಲು ಮತ್ತು ಬೆಂಗಳೂರಿನ ಉತ್ತರ ಭಾಗಕ್ಕೆ ಬೃಹತ್ ಉದ್ಯಾನವನ್ನು ನೀಡುವ ಉದ್ದೇಶದಿಂದ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದರು.

ಹಳ್ಳಕೊಳ್ಳವನ್ನು ಬಳಸಿಕೊಂಡು ಕೆಂಪೇಗೌಡ ವನ ನಿರ್ಮಾಣ: ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬೆಟ್ಟಹಲಸೂರು ಬೆಟ್ಟ ಗುಡ್ಡಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿ ಲಭ್ಯವಾದ ಕಲ್ಲುಗಳಿಂದಲೇ ನಾಡಿನ ಆಡಳಿತ ಕೇಂದ್ರ ವಿಧಾನಸೌಧವನ್ನು ನಿರ್ಮಿಸಲಾಗಿದೆ. ಈಗಲೂ ಬೆಟ್ಟಹಲಸೂರು ಪ್ರದೇಶದಲ್ಲಿ ಬೃಹತ್ ಬಂಡೆಗಳಿವೆ. ಮತ್ತು ಇಲ್ಲಿ ಗಣಿಗಾರಿಕೆ ಮಾಡಿದ ನಂತರ ಸಹಜವಾಗಿಯೇ ರೂಪುಗೊಂಡ ಹಳ್ಳ ಕೊಳ್ಳಗಳನ್ನು ಬಳಸಿಕೊಂಡು ಕೆಂಪೇಗೌಡ ವನವನ್ನು ವಿಶೇಷವಾಗಿ ನಿರ್ಮಿಸಲಾಗುವುದು ಎಂದು ಹೇಳಿದರು.

500 ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ವನ ನಿರ್ಮಾಣ: ನಾಡಪ್ರಭು ಕೆಂಪೇಗೌಡರ ವಂಶಸ್ಥರು ಬೆಂಗಳೂರಿಗೆ ಬಂದಾಗ ಇಲ್ಲಿನ ಆವತಿ ಸಮೀಪ ನೆಲೆಸಿದ್ದರು. ಈ ಹಿನ್ನೆಲೆಯಲ್ಲಿ ಆವತಿಗೆ ಸಮೀಪದಲ್ಲಿರುವ ಬೆಟ್ಟಹಲಸೂರಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಉದ್ಯಾನವನಕ್ಕೆ ಕೆಂಪೇಗೌಡರ ಹೆಸರು ಇಡಲು ತೀರ್ಮಾನಿಸಲಾಗಿದೆ. ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಈ ಕೆಂಪೇಗೌಡ ವನ ತಲೆ ಎತ್ತಲಿದ್ದು, ರಾಷ್ಟ್ರದಲ್ಲೇ ಅತ್ಯಪರೂಪದ ಸ್ಥಳವಾಗಲಿದೆ. ಕೆಂಪೇಗೌಡ ವನ ಕೇವಲ ಉದ್ಯಾನವನವಲ್ಲ, ಆಗಮಿಸುವ ಜನರಿಗೆ ಉಲ್ಲಾಸ ನೀಡುವ ದೃಷ್ಟಿಯಿಂದ ಇಲ್ಲಿ ಥೀಮ್ ಪಾರ್ಕ್ ಸ್ಥಾಪಿಸಲಾಗುವುದು ಮತ್ತು ಇಲ್ಲಿನ ಎರಡು ಕೆರೆಗಳು ದೋಣಿ ವಿಹಾರದ ಕೇಂದ್ರಗಳಾಗಲಿವೆ ಎಂದು ಸಚಿವರು ವಿವರಿಸಿದರು.

ವಿವಿಧ ಸರ್ವೇ ನಂಬರ್​ಗಳಿಗೆ ಸೇರಿದ ಈ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಮರ, ಗಿಡಗಳನ್ನು ಬೆಳೆಸಲು ಮತ್ತು ಸಂರಕ್ಷಿಸಲು ಉದ್ದೇಶಿಸಲಾಗಿತ್ತು. ಆದರೆ ಈಗ ಅದನ್ನು ತೋಟಗಾರಿಕೆ ಇಲಾಖೆಗೆ ವರ್ಗಾವಣೆ ಮಾಡಲಾಗುವುದು. ಆ ಮೂಲಕ ಬೆಂಗಳೂರು ಉತ್ತರ ಭಾಗದಲ್ಲಿ ಲಾಲ್​ಬಾಗ್​, ಕಬ್ಬನ್ ಪಾರ್ಕ್ ಮಾದರಿಯ ಉದ್ಯಾನವನ ನಿರ್ಮಾಣಗೊಂಡಂತಾಗುತ್ತದೆ. ಇನ್ನೊಂದು ವಾರದ ಒಳಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ : ಪಾಳುಬಿದ್ಧಿದ್ದ ಕೆರೆಗೆ ಕಾಯಕಲ್ಪ; ವಿದೇಶಿ ಪ್ರವಾಸಿ ತಾಣಗಳಂತೆ ಕಂಗೊಳಿಸುತ್ತಿದೆ ಭೀಮಕೋಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.