ETV Bharat / state

ಗುರಿ ಮೀರಿ ತೆರಿಗೆ ಸಂಗ್ರಹ: ಆರ್ಥಿಕ ವರ್ಷದ ಆರಂಭದಲ್ಲೇ ರಾಜ್ಯದ ಖಜಾನೆ ಚೇತರಿಕೆ - ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಏಪ್ರಿಲ್-ಜೂನ್‍ವರೆಗಿನ ಮೊದಲ ತ್ರೈಮಾಸಿಕದಲ್ಲಿ ಉತ್ತಮ ಆದಾಯ ಸಂಗ್ರಹಿಸಿದ ಕಾರಣ ಜುಲೈ - ಸೆಪ್ಟೆಂಬರ್​ ವರೆಗಿನ ಎರಡನೇ ತ್ರೈಮಾಸಿಕದಲ್ಲಿ ಆರ್​ಬಿಐ ಮೂಲಕ ಸಾಲ ತೆಗೆದುಕೊಳ್ಳದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

karnataka-state-tax-collection-increase-in-first-quarterly
ಗುರಿ ಮೀರಿ ತೆರಿಗೆ ಸಂಗ್ರಹ: ಆರ್ಥಿಕ ವರ್ಷದ ಆರಂಭದಲ್ಲೇ ರಾಜ್ಯದ ಖಜಾನೆ ಚೇತರಿಕೆ
author img

By

Published : Jul 7, 2022, 5:37 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮತ್ತು ಲಾಕ್​ಡೌನ್​ ನಿಂದ ಕಳೆದ ಎರಡು ವರ್ಷಗಳಿಂದ ಸೊರಗಿದ್ದ ರಾಜ್ಯದ ಖಜಾನೆ ಈ ಆರ್ಥಿಕ ವರ್ಷದ ಆರಂಭದಲ್ಲೇ ಉತ್ತಮ ಚೇತರಿಕೆ ಕಾಣುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ತೆರಿಗೆ ಮೂಲಗಳಿಂದ ನಿರೀಕ್ಷಿತ ಗುರಿಗಿಂತ ಉತ್ತಮ ಆದಾಯ ಸಂಗ್ರಹವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂದಿನ ತ್ರೈಮಾಸಿಕದಲ್ಲೂ ಸಾಲ ಎತ್ತುವಳಿ ಮಾಡದಿರಲು ನಿರ್ಧರಿಸಿದೆ.

ಬೊಕ್ಕಸಕ್ಕೆ ನಿರೀಕ್ಷಿತ ಗುರಿ ಮೀರಿ ತೆರಿಗೆಗಳ ಮೂಲಕ ಆದಾಯ ಸಂಗ್ರಹವಾಗಿದೆ. ಏಪ್ರಿಲ್ - ಜೂನ್‍ವರೆಗಿನ ಮೊದಲ ತ್ರೈಮಾಸಿಕದಲ್ಲಿ ಪ್ರಮುಖ ತೆರಿಗೆ ಸಂಗ್ರಹ ಇಲಾಖೆಗಳು ಗುರಿ ಮೀರಿ ಆದಾಯ ಸಂಗ್ರಹಿಸಿರುವುದು, ರಾಜ್ಯ ಸರ್ಕಾರಕ್ಕೆ ನಿಟ್ಟುಸಿರು ಬಿಡುವಂತಾಗಿದೆ. ಅದರಲ್ಲೂ ವಾಣಿಜ್ಯ ಇಲಾಖೆ ಭರ್ಜರಿ ತೆರಿಗೆ ಸಂಗ್ರಹ ಮಾಡಿದೆ.

ಮೊದಲ ತ್ರೈಮಾಸಿಕದಲ್ಲಿ 21,235 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸಿದೆ. ತ್ರೈಮಾಸಿಕ ಗುರಿ ಇದ್ದಿದ್ದು 19,259 ಕೋಟಿ ರೂಪಾಯಿ. ಆದರೆ, ವಾಣಿಜ್ಯ ಇಲಾಖೆ ಹೆಚ್ಚುವರಿ ತೆರಿಗೆ ಸಂಗ್ರಹ ಮಾಡಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಶೇ.50 ಗೂ ಅಧಿಕ ವಾಣಿಜ್ಯ ತೆರಿಗೆ ಸಂಗ್ರಹಿಸಿದೆ.

ನೋಂದಣಿ-ಮುದ್ರಾಂಕ ಇಲಾಖೆ: ನೋಂದಣಿ ಹಾಗೂ ಮುದ್ರಾಂಕ ಇಲಾಖೆಯೂ ತ್ರೈಮಾಸಿಕ ಗುರಿ ಮೀರಿ ತೆರಿಗೆ ಸಂಗ್ರಹಿಸಿದೆ. ಮೊದಲ ತ್ರೈಮಾಸಿಕದಲ್ಲಿ 3,897 ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. 2,962 ಕೋಟಿ ರೂ. ತ್ರೈಮಾಸಿಕ ಗುರಿಗಿಂತ 934 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ. ಮೋಟಾರ್ ವಾಹನ ತೆರಿಗೆ ಸಂಗ್ರಹವೂ ಗುರಿ ದಾಟಿದೆ. ಮೊದಲ ತ್ರೈಮಾಸಿಕದಲ್ಲಿ 2,046 ಮೋಟಾರ್ ವಾಹನ ತೆರಿಗೆ ಸಂಗ್ರಹ ಮಾಡಿದೆ. ತ್ರೈಮಾಸಿಕ ಗುರಿ ಇದ್ದಿದ್ದು 1,980 ಕೋಟಿ ರೂಪಾಯಿ. ಕಳೆದ ಎರಡು ವರ್ಷದಿಂದ ಗುರಿ ಮುಟ್ಟದೇ ಸೊರಗಿದ್ದ ಮೋಟಾರ್ ವಾಹನ ತೆರಿಗೆ ಈ ಆರ್ಥಿಕ ವರ್ಷ ಗಣನೀಯ ಚೇತರಿಕೆ ಕಂಡಿದೆ.

ಅಬಕಾರಿ ಇಲಾಖೆ: ಅಬಕಾರಿ ಇಲಾಖೆ ಎಂದಿನಂತೆ ಗುರಿ ಮೀರಿ ಭರ್ಜರಿ ಆದಾಯ ಸಂಗ್ರಹಿಸಿದೆ. ಮೊದಲ ತ್ರೈಮಾಸಿಕದಲ್ಲಿ ನಿಗದಿಯಾಗಿದ್ದ 7,250 ಕೋಟಿ ರೂ. ಗುರಿಯನ್ನು ಮೀರಿ ಒಟ್ಟು 7,574 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹ ಮಾಡಿದೆ. ಮೊದಲ ತ್ರೈಮಾಸಿಕದಲ್ಲಿ ಗುರಿ ಮೀರಿ ಭರ್ಜರಿ ತೆರಿಗೆ ಸಂಗ್ರಹವಾಗಿರುವುದರಿಂದ ರಾಜ್ಯ ಸರ್ಕಾರ ಎರಡನೇ ತ್ರೈ ಮಾಸಿಕದಲ್ಲೂ ಸಾಲ ಎತ್ತುವಳಿ ಮಾಡದಿರಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಬಾರಿ ಒಟ್ಟು 72,089 ಕೋಟಿ ಸಾಲ ಮಾಡಲು ಯೋಜಿಸಿದೆ. ಆ ಪೈಕಿ 67,911 ಕೋಟಿ ರೂ. ಮುಕ್ತ ಮಾರುಕಟ್ಟೆ ಮೂಲಕ ಸಾಲ ಮಾಡಲು ಮುಂದಾಗಿದ್ದು, ಏಪ್ರಿಲ್-ಜೂನ್ ಮುಗಿಯಲಿರುವ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಆರ್​ಬಿಐ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಸಾಲ ಎತ್ತುವಳಿ ಮಾಡಿರಲಿಲ್ಲ. ಇದೀಗ ಉತ್ತಮ ಆದಾಯ ಸಂಗ್ರಹಿಸಿದ ಕಾರಣ ಜುಲೈ - ಸೆಪ್ಟೆಂಬರ್ ವರೆಗಿನ ಎರಡನೇ ತ್ರೈಮಾಸಿಕದಲ್ಲೂ ಆರ್​ಬಿಐ ಮೂಲಕ ಸಾಲ ತೆಗೆದುಕೊಳ್ಳದಿರಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಪೌತಿ ಖಾತೆ ಮಾಡಿಕೊಡಲು 2,000 ಲಂಚ ಕೇಳಿದ ಗ್ರಾಮ ಲೆಕ್ಕಾಧಿಕಾರಿ - ವಿಡಿಯೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.