ETV Bharat / state

ಎಣ್ಣೆ ಪ್ರಿಯರ ಜೇಬಿಗೆ ಕೈ ಹಾಕಿದ ಬಿಎಸ್​ವೈ... ಇನ್ಮುಂದೆ ರೇಟ್​ ಕೇಳಿದ್ರೆ ಹೊಡೆಯುತ್ತೆ ಕಿಕ್​! - State budget of karnataka 2020

ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ 2020-21ನೇ ಸಾಲಿನ ಆಯವ್ಯಯ ಮಂಡನೆ ಮಾಡಿದ್ದು, ಕೆಲವೊಂದು ಇಲಾಖೆಗಳಿಗೆ ಬಂಪರ್​ ಕೂಡುಗೆ ನೀಡಿದ್ದಾರೆ. ಇದರ ಮಧ್ಯೆ ಮದ್ಯ ಪ್ರಿಯರಿಗೆ ಯಡಿಯೂರಪ್ಪ ಶಾಕ್​ ನೀಡಿದ್ದಾರೆ.

Karnataka state budget 2020-21
ಅಬಕಾರಿ ಮೇಲಿನ ತೆರಿಗೆ ಸುಂಕ ಏರಿಕೆ
author img

By

Published : Mar 5, 2020, 1:28 PM IST

ಬೆಂಗಳೂರು: ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ 2020-21ನೇ ಸಾಲಿನ ಆಯವ್ಯಯ ಮಂಡನೆ ಮಾಡಿದ್ದು, ಕೆಲವೊಂದು ಇಲಾಖೆಗಳಿಗೆ ಬಂಪರ್​ ಕೂಡುಗೆ ನೀಡಿದ್ದಾರೆ. ಇದರ ಮಧ್ಯೆ ಮದ್ಯ ಪ್ರಿಯರಿಗೆ ಯಡಿಯೂರಪ್ಪ ಶಾಕ್​ ನೀಡಿದ್ದಾರೆ.

ಮದ್ಯದ ಘೋಷಿತ ಸ್ಲ್ಯಾಬ್​ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನ ಬಿಎಸ್​ವೈ ಶೇ.6ರಷ್ಟು ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ. ಅಬಕಾರಿ ಇಲಾಖೆ ಕುರಿತು ಬಜೆಟ್​ನಲ್ಲಿ ಮಾತನಾಡುತ್ತಿದ್ದ ವೇಳೆ ಬಿಎಸ್​ವೈ ಈ ಮಾಹಿತಿ ನೀಡಿದ್ದು, 2019-20ನೇ ಸಾಲಿನ ಅಬಕಾರಿ ಇಲಾಖೆಯಿಂದ ಬರೋಬ್ಬರಿ 20,950 ಕೋಟಿ ರೂ ತೆರಿಗೆ ಸಂಗ್ರಹ ಮಾಡುವ ಗುರಿ ಹೊಂದಲಾಗಿತ್ತು. ಆದರೆ ಫೆಬ್ರವರಿವರೆಗೆ 19,701 ಕೋಟಿ ರೂ ಸಂಗ್ರಹ ಮಾಡಲಾಗಿದೆ ಎಂದರು.

ಇದೀಗ ಮದ್ಯದ ಎಲ್ಲ ಸ್ಲ್ಯಾಬ್​ಗಳ ಮೇಲಿನ ಹೆಚ್ಚುವರಿ ಸುಂಕ ಏರಿಕೆ ಮಾಡುವುದಾಗಿ ತಿಳಿಸಿದ್ದಾರೆ. ಪ್ರಸಕ್ತ ಸಾಲಿನ ಬಜೆಟ್​​ನಲ್ಲಿ ಸಂಪನ್ಮೂಲ ಕ್ರೋಢೀಕರಣದತ್ತ ಹೆಚ್ಚಿನ ದೃಷ್ಟಿ ನೆಟ್ಟಿರುವ ಕಾರಣ ಬಿಎಸ್​ವೈ, ಅಬಕಾರಿ ಹಾಗೂ ಇಂಧನ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ನೇರವಾಗಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.