ಬೆಂಗಳೂರು: ರಾಜ್ಯದಲ್ಲಿಂದು 1,58,898 ಜನರಿಗೆ ಕೊರೊನಾ ಟೆಸ್ಟ್ ಮಾಡಿದ್ದು, ಇದರಲ್ಲಿ 1,978 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,71,298 ಕ್ಕೆ ಏರಿಕೆ ಕಂಡಿದೆ.
ಕೋವಿಡ್ ಪಾಸಿಟಿವಿಟಿ ದರ ಶೇ.1.24 ರಷ್ಟಕ್ಕೆ ತಲುಪಿದೆ. ಒಟ್ಟು 2,326 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 27,98,703 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳು 36,737 ರಷ್ಟಿದೆ.
![ರಾಜ್ಯದಲ್ಲಿಂದು 1,978 ಪ್ರಕರಣ ಪತ್ತೆ.. 56 ಸೋಂಕಿತರು ಬಲಿ](https://etvbharatimages.akamaized.net/etvbharat/prod-images/e6bugnjuyaizpf5_1107newsroom_1626012581_778.png)
![ರಾಜ್ಯದಲ್ಲಿಂದು 1,978 ಪ್ರಕರಣ ಪತ್ತೆ.. 56 ಸೋಂಕಿತರು ಬಲಿ](https://etvbharatimages.akamaized.net/etvbharat/prod-images/e6buksrvuaamtjo_1107newsroom_1626012581_1051.png)
ಇಂದು 56 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 35,835ಕ್ಕೆ ಏರಿದೆ. ಸಾವಿನ ಶೇಕಡಾವಾರು ಪ್ರಮಾಣ 2.83 ರಷ್ಟಿದೆ. ಬೆಂಗಳೂರಲ್ಲಿ 433 ಮಂದಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12,19,378ಕ್ಕೆ ಏರಿಕೆ ಕಂಡಿದೆ. 203 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 8 ಸೋಂಕಿತರು ಮೃತರಾಗಿದ್ದು ಸಾವಿನ ಸಂಖ್ಯೆ 15,736ಕ್ಕೆ ಏರಿಕೆ ಆಗಿದೆ. ಅಲ್ಲದೆ ಸಕ್ರಿಯ ಪ್ರಕರಣಗಳ ಸಂಖ್ಯೆ 13,459 ರಷ್ಟಿದೆ.