ETV Bharat / state

65 ಸಾಧಕರಿಗೆ ಕರ್ನಾಟಕ ರತ್ನ ಪ್ರಶಸ್ತಿ: ನಟ ಅಂಬರೀಶ್​ಗೆ ಮರಣೋತ್ತರ ಪ್ರಶಸ್ತಿ ಪ್ರದಾನ

ದಿ‌ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕದ ವತಿಯಿಂದ ಬೆಂಗಳೂರು ವೈದ್ಯಕೀಯ ‌ಸಭಾಂಗಣದಲ್ಲಿ ಕರ್ನಾಟಕ ರತ್ನ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿತು.

ಅಂಬರೀಶ್​ಗೆ ಮರಣೋತ್ತರ ಪ್ರಶಸ್ತಿ ಪ್ರದಾನ
ಅಂಬರೀಶ್​ಗೆ ಮರಣೋತ್ತರ ಪ್ರಶಸ್ತಿ ಪ್ರದಾನ
author img

By

Published : Dec 28, 2020, 2:36 PM IST

ಬೆಂಗಳೂರು: ದಿ‌ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕದ ವತಿಯಿಂದ ಬೆಂಗಳೂರು ವೈದ್ಯಕೀಯ ‌ಸಭಾಂಗಣದಲ್ಲಿ ಕರ್ನಾಟಕ ರತ್ನ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಿಲಿಟರಿ ಹಿನ್ನೆಲೆ ವಾದ್ಯ ಮೇಳವು ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತ್ತು.

ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನಟ ಅಂಬರೀಶ್, ವಿಷ್ಣುವರ್ಧನ್, ಮುಂಬೈ ದಾಳಿ ವೇಳೆ‌ ಹುತಾತ್ಮರಾದ ಮೇಜರ್ ಸಂದೀಪ್ ಉನ್ನಿಕೃಷ್ಣನ್, ದಿವಂಗತ ನಟ ಲೋಕೇಶ್, ನಟ ಅನಂತ ಕುಮಾರ್ ಇನ್ನಿತರ ಗಣ್ಯರಿಗೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಂಬರೀಷ್ ಪರವಾಗಿ ಸಂಸದೆ ಮತ್ತು ನಟಿ ಸುಮಲತಾ ಅಂಬರೀಶ್ ಪ್ರಶಸ್ತಿ ಸ್ವೀಕರಿಸಿದರು. ಲೋಕೇಶ್ ಪರವಾಗಿ ಮಗ ಸೃಜನ್ ಲೋಕೇಶ್ ಪ್ರಶಸ್ತಿ ಪಡೆದರು.

ಕರ್ನಾಟಕ ರತ್ನ ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಈ ಕಾರ್ಯಕ್ರಮದಲ್ಲಿ ಡಾ. ಕೆ.ಬಿ. ಲಿಂಗೇಗೌಡ, ಲೆಫ್ಟಿನೆಂಟ್ ಕರ್ನಲ್ ರೆಪ್ಸ್ವಾಲ್, ಮೇಜರ್ ಜನರಲ್ ಎಂ.ಸಿ. ನಂಜಪ್ಪ, ಬ್ರಿಗೇಡಿಯರ್ ರವಿ ಮುನಿಸ್ವಾಮಿ, ಭಾರತ್ ಸ್ಕೌಟ್ಸ್ ಜಿ.ಎಂ. ಬಾಬು ಉಪಸ್ಥಿತರಿದ್ದರು. ಆಯೋಜಕರಾದ ಶ್ರವಣ್ ಲಕ್ಷ್ಮಣ ಕಾರ್ಯಕ್ರಮ ನಡೆಸಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಆಯುರ್ವೇದ ಕ್ಷೇತ್ರದ ಸಾಧನೆಗಾಗಿ ಸಂತೋಷ್ ಗುರೂಜಿ, ಖ್ಯಾತ ಗಾಯಕ, ನಟ ನವೀನ್ ಸಜ್ಜು, ಡಿಂಗ್ರಿ ನಾಗರಾಜ್, ನಟ ಚರಣ್​ರಾಜ್, ನಟಿ ಭವ್ಯ, ಬ್ಯಾಂಕ್ ಜನಾರ್ದನ್ ಸೇರಿದಂತೆ ಹಲವು ಗಣ್ಯರಿಗೆ ನೀಡಲಾಯಿತು.

ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ಸಂತೋಷ್ ಗುರೂಜಿ, ಪ್ರಶಸ್ತಿ ಸಮಾರಂಭವನ್ನು ಉನ್ನತ ರೀತಿಯಲ್ಲಿ ನಡೆಸಿದ್ದಾರೆ. ನಮ್ಮ ಸೈನಿಕರನ್ನು ಒಟ್ಟುಗೂಡಿಸಿ ಒಂದು ರಾಷ್ಟ್ರ ಮಟ್ಟದ ಕಾರ್ಯಕ್ರಮದ ರೀತಿಯಲ್ಲಿ ನಡೆಸಿದ್ದಾರೆ ಎಂದರು.

ದಿ‌ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಅಯೋಜಕರಾದ ಶ್ರವಣ್ ಲಕ್ಷ್ಮಣ ಮಾತನಾಡಿ, 2012ರಿಂದ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಬಂದಿದ್ದೇವೆ. 65ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ 65 ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿದ್ದೇವೆ. 9 ಸಾಧಕರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿದ್ದೇವೆ. ಅಂಬರೀಷ್, ಶಂಕರ್ ನಾಗ್, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುಟುಂಬದವರಿಗೆ ಕೊಟ್ಟಿದ್ದೇವೆ. ಹಲವಾರು ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿದ್ದೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.